ಉಡುಪಿಯ ಮಾರುಥಿ ವೀಥಿಕಾದಲ್ಲಿ ನೀರಿನ ಅರವಟ್ಟಿಗೆ ಉದ್ಘಾಟಿಸಲಾಯಿತು. ಡಾ. ಬಸವರಾಜ್​ ಹುಬ್ಬಳ್ಳಿ, ಮಹೇಶ್​ ಪ್ರಸಾದ್​, ನರಸಿಂಹ ಭಟ್​ ಮಣಿಪಾಲ, ನಿತ್ಯಾನಂದ ಒಳಕಾಡು, ರಾಜೇಶ್​ ಎನ್​.ಆರ್​., ಗೋಪಾಲ್​, ಉದಯಕುಮಾರ್​, ರಾಹುಲ್​, ವಿಷ್ಣು ಇತರರಿದ್ದರು. 
ಉಡುಪಿ

ಬಿಸಿಲ ದಾಹ ನೀಗಿಸಲು ತಂಪು ಪಾನೀಯ ವ್ಯವಸ್ಥೆ

* ಸಮಾಜ ಸೇವಕ ನಿತ್ಯಾನಂದ ಒಳಕಾಡು ಮಾಹಿತಿ

* ಉಡುಪಿಯ ಮಾರುಥಿ ವೀಥಿಕಾದಲ್ಲಿ ನೀರಿನ ಅರವಟ್ಟಿಗೆ 

ಉಡುಪಿ: ನಗರದಲ್ಲಿ ಬಿಸಿಲಿನ ತಾಪ ದಿನವೂ ಹೆಚ್ಚುತ್ತಲೇ ಇದ್ದು, ದಾನಿಗಳ ಸಹಕಾರದಲ್ಲಿ ಸಾರ್ವಜನಿಕರಿಗೆ ಪರಿಶುದ್ಧ ತಂಪು ನೀರು, ಹಣ್ಣುಗಳ ಪಾನೀಯ ನೀಡಲಾಗುವುದು. ಮಳೆಗಾಲದ ಆರಂಭದವರೆಗೂ ಉಚಿತವಾಗಿ ವಿತರಿಸಲಾಗುವುದು ಎಂದು ಸಮಾಜ ಸೇವಕ ನಿತ್ಯಾನಂದ ಒಳಕಾಡು ಮಾಹಿತಿ ನೀಡಿದರು.
ಉಡುಪಿ ನಗರದ ಮಾರುಥಿ ವೀಥಿಕಾದಲ್ಲಿ ಜಿಲ್ಲಾ ನಾಗರಿಕ ಸಮಿತಿಯು ಜೋಸ್​ ಆಲುಕ್ಕಾಸ್​, ಆಭರಣ ಮಳಿಗೆಯ ಸಹಕಾರದಿಂದ ಅರವಟ್ಟಿಗೆ ವ್ಯವಸ್ಥೆಗೊಳಿಸಿದ್ದು ಅದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಸಿಪಿಐ ಮಹೇಶ್​ ಪ್ರಸಾದ್​, ಸಮಾಜ ಸೇವಕ ನರಸಿಂಹ ಭಟ್​ ಮಣಿಪಾಲ ಇವರು ಅರವಟ್ಟಿಗೆ ಉದ್ಘಾಟಿಸಿದರು.
ಜೋಸ್​ ಅಲುಕ್ಕಾಸ್​ ಮಳಿಗೆಯ ಮೆನೇಜರ್​ಗಳಾದ ರಾಜೇಶ್​ ಎನ್​.ಆರ್​., ಗೋಪಾಲ್​, ಉದ್ಯಮಿ ಉದಯಕುಮಾರ್​, ಕೊಟಕ್​ ಮಹೀಂದ್ರ ಬ್ಯಾಂಕ್​ನ ರಾಹುಲ್​, ವಿಷ್ಣು ಮತ್ತು ಸಿಬಂದಿ ಉಪಸ್ಥಿತರಿದ್ದರು. ಹನುಮಾನ್​ ಜಯಂತಿ ನಿಮಿತ್ತ ಸುದರ್ಶನ್​ ನಾಯಕ್​ ಪಾನಕ ಸೇವೆ ನೀಡಿದರು.
"

ನಗರದಲ್ಲಿ ಅರವಟ್ಟಿಗೆ ವ್ಯವಸ್ಥೆ ಮಾಡಿರುವುದು ನಿಜಕ್ಕೂ ಮಾದರಿ ಕಾರ್ಯ. ಇದರಿಂದ ಮಾರುಕಟ್ಟೆಗೆ ಬರುವವರಿಗೆ ಬಾಯಾರಿಕೆ ನೀಗಿಸಿಕೊಳ್ಳಲು ಸಾಧ್ಯ. ನಿತ್ಯಾನಂದ ಒಳಕಾಡು ಅವರು ವಿಶಿಷ್ಟ ರೀತಿಯ ಸಮಾಜ ಸೇವಕರಾಗಿದ್ದು, ಜನಪರ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಾರೆ.