ಕೋಟ ಸಹಕಾರಿ ವ್ಯವಸಾಯಕ ಸಂಕ್ಕೆ ಡಾ.ಎಂ.ಎನ್.ರಾಜೇಂದ್ರ ಕುವಾರ್ ಭೇಟಿ ನೀಡಿದರು. ಸಂದ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು.
ಕೋಟ: ಕರ್ನಾಟಕ ರಾಜ್ಯ ಸಹಕಾರ ವಾರಾಟ ಮಹಾಮಂಡಳ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುವಾರ್ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುವಾರ್ ರೈ ಬಾಲ್ಯೋಟ್ಟು ಮತ್ತು ಸುನೀಲ್ ಬಜಗೋಳಿ ಅವರು ಕೋಟ ಸಹಕಾರಿ ವ್ಯವಸಾಯಕ ಸಂಕ್ಕೆ ಭೇಟಿ ನೀಡಿದರು.
ಸಂದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಸ್ವಾಗತಿಸಿ, ಸಂದ ವ್ಯವಹಾರ ಅಭಿವೃದ್ಧಿ, ಸಂದ ಯೋಜನೆಗಳು, ಸದಸ್ಯರಿಗೆ ನೀಡಲಾಗುತ್ತಿರುವ ಸೇವೆ ಮತ್ತು ಸವಲತ್ತುಗಳ ಬಗ್ಗೆ ವಾಹಿತಿ ನೀಡಿದರು.
ಸಂದ ವ್ಯವಸ್ಥಿತ ಕಾರ್ಯವೈಖರಿ, ಸೇವಾ ಮನೋಭಾವ ಹಾಗೂ ಕಾರ್ಯತತ್ಪರತೆಯನ್ನು ಶ್ಲಾಘಿಸಿದರು. ಸಂದ ಪರವಾಗಿ ರಾಜೇಂದ್ರ ಕುಮಾರ್, ಶಶಿಕುಮಾರ್ ರೈ ಬಾಲ್ಯೋಟ್ಟು, ಸುನೀಲ್ ಬಜಗೋಳಿ ಅವರನ್ನು ಸನ್ಮಾನಿಸಲಾಯಿತು. ಸಂದ ವಿಶಿಷ್ಟ ಯೋಜನೆಗಳಲ್ಲಿ ಒಂದಾದ ‘ಸಕಲ’ ಕೃಷಿ ಉಪಕರಣಗಳ ವಾರಾಟ ಮಳಿಗೆಗೆ ಭೇಟಿ ನೀಡಿದರು.
ಕೋಟ ಸಹಕಾರಿ ವ್ಯವಸಾಯಕ ಸಂದ ನಿರ್ದೇಶಕರು ಉಪಸ್ಥಿತರಿದ್ದರು. ಸಂದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುವಾರ್ ಶೆಟ್ಟಿ ವಂದಿಸಿದರು.
ಕೋಟ ಸಹಕಾರಿ ಸಂಘಕ್ಕೆ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಭೇಟಿ Dr. M.N. Rajendra Kumar visits Kota Cooperative Society