ಉಡುಪಿಯ ಹಿರಿಯಡ್ಕದಲ್ಲಿ ನಿರ್ಮಾಣಗೊಂಡ 'ಶ್ಯಾಮಿಲಿ ಸ್ಪ್ರಿಂಗ್ಸ್​'ನ ಸಭಾಂಗಣ ಹಾಗೂ ಕಟ್ಟಡವನ್ನು ಡಾ. ಜಿ.ಶಂಕರ್​. ಉದ್ಘಾಟಿಸಿದರು. ರಾಘವೇಂದ್ರ ಉಪಾಧ್ಯಾಯ, ಶಾಲಿನಿ ಜಿ. ಶಂಕರ್​, ಶ್ಯಾಮಿಲಿ, ನವೀನ್​, ಶನಾಯ, ಶಾನ್ವಿಕಾ, ಆನಂದ್​ ಎಸ್​.ಕೆ., ಶಿವ ಎಸ್​. ಕರ್ಕೇರ, ಜಗದೀಶ್​ ಕಾಂಚನ್​, ಗುರುಪ್ರಸಾದ್​, ನಿತಿನ್​, ವಿಕಾಸ್​ ಇತರಿದ್ದರು. 
ಉಡುಪಿ

ಸಮಾಜಸೇವೆಗೆ 'ಶ್ಯಾಮಿಲಿ ಸ್ಪ್ರಿಂಗ್ಸ್​' ಸಜ್ಜು

* ನಾಡೋಜ ಡಾ. ಜಿ.ಶಂಕರ್​ ಮಾಹಿತಿ

* ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಲಾಭಾಂಶ ಮೀಸಲು

ಉಡುಪಿ: ಹಿರಿಯಡ್ಕದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಶ್ಯಾಮಿಲಿ ಸಮೂಹ ಸಂಸ್ಥೆಗಳು ಉಡುಪಿ ಇದರ ಸಹ ಸಂಸ್ಥೆ 'ಶ್ಯಾಮಿಲಿ ಸ್ಪ್ರಿಂಗ್ಸ್​' ಲಕ್ಸುರಿ ರೆಸಾರ್ಟ್​ ಸಮಾಜ ಸೇವೆಗೆ ಸಜ್ಜಾಗಿ ನಿಂತಿದೆ. ಸಂಪೂರ್ಣ ಹವಾನಿಯಂತ್ರಿತ, ಸಾವಿರಕ್ಕೂ ಅಧಿಕ ಜನರು ಆಸೀನರಾಗುವ ವ್ಯವಸ್ಥೆಯಿದೆ. ಸಂಸ್ಥೆಯ ಆದಾಯದ ಒಂದಿಷ್ಟು ಪಾಲನ್ನು ಹಲವಾರು ವರ್ಷದಿಂದ ಸಮಾಜಸೇವೆಗೆ ಮೀಸಲಿಟಿದ್ದೇನೆ. ಇದೀಗ 'ಶ್ಯಾಮಿಲಿ ಸ್ಪ್ರಿಂಗ್ಸ್​'ನಿಂದ ಬರುವ ಲಾಭಾಂಶದಲ್ಲಿ ಹಿರಿಯಡ್ಕ ಭಾಗದ ಬಡವರಿಗೆ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸದ್ವಿನಿಯೋಗ ಮಾಡಲಾಗುವುದು ಎಂದು ಡಾ.ಜಿ.ಶಂಕರ್​ ಸಮೂಹ ಸಂಸ್ಥೆಯ ಪ್ರವರ್ತಕ, ನಾಡೋಜ ಡಾ. ಜಿ.ಶಂಕರ್​ ತಿಳಿಸಿದರು.
ಹಿರಿಯಡ್ಕದಲ್ಲಿ ಮಂಗಳವಾರ (ಏ.7) ಬೆಳಗ್ಗೆ ಅತ್ಯಾಧುನಿಕ ಸೌಲಭ್ಯವುಳ್ಳ ಹಾಗೂ ವಿಶೇಷ ಮಾದರಿಯಲ್ಲಿ ನಿರ್ಮಾಣಗೊಂಡ 'ಶ್ಯಾಮಿಲಿ ಸ್ಪ್ರಿಂಗ್ಸ್​' ಕನ್ವೆನ್ಷನ್​ ಸೆಂಟರ್​ ಉದ್ಘಾಟನೆಯ ಬಳಿಕ ಮಾತನಾಡಿದರು.

ಐದು ಎಕರೆ ಪ್ರದೇಶದಲ್ಲಿ ನಿರ್ಮಾಣ

ಅತ್ಯಾಧುನಿಕ ಹಾಗೂ ಸುಸಜ್ಜಿತ ಸೌಕರ್ಯವಿದೆ. ಸಸ್ಯಾಹಾರ ಮತ್ತು ಮಾಂಸಾಹಾರ ಸಿದ್ಧಪಡಿಸಲು ಪ್ರತ್ಯೇಕ ಅಡುಗೆ ಕೊಠಡಿ ಇದೆ. ಮೆಹೆಂದಿ, ಹಳದಿ, ಡೆಸ್ಟಿನೇಷನ್​ ಮ್ಯಾರೇಜ್​ ಸಹಿತ ಇನ್ನಿತರ ಶುಭ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಕಟ್ಟಡದ ವಿನ್ಯಾಸವಿದೆ. ಹಚ್ಚ ಹಸುರಿನ 'ಶ್ಯಾಮಿಲಿ ಗ್ರೀನ್ಸ್​ ಓಪನ್​ ಗಾರ್ಡನ್​' ಸಹ ಇದೆ. 5 ಎಕರೆ ವಿಶಾಲ ಪ್ರದೇಶದಲ್ಲಿ ಶ್ಯಾಮಿಲಿ ಸ್ಪ್ರಿಂಗ್ಸ್​ ವಿಸ್ತಾರವಾಗಿ ನಿರ್ಮಿಸಲಾಗಿದೆ. 300ಕ್ಕೂ ಅಧಿಕ ವಾಹನ ನಿಲ್ಲಿಸಲು ಪಾರ್ಕಿಂಗ್​ ವ್ಯವಸ್ಥೆಯಿದೆ. ಸನಿಹದಲ್ಲೇ ಪ್ರಸನ್ನ ಗಣಪತಿ ದೇವರನ್ನೂ ಪ್ರತಿಷ್ಠಾಪಿಸಲಾಗಿದೆ. ಶಾನ್ವಿಕ ಕನ್ವೆನ್ಷನ್​ ಸೆಂಟರ್​, ಶನಾಯ ಗ್ರ್ಯಾಂಡ್​ ಡೈನಿಂಗ್​ ಹಾಲ್​, ಪ್ರೀಮಿಯಂ ರೂಮ್ಸ್​ ಇದ್ದು ಒಂದೇ ಸೂರಿನಡಿ ಎಲ್ಲ ವ್ಯವಸ್ಥೆಯೂ ಇದೆ ಎಂದರು.

ಎಸಿ ಡಿಲಕ್ಸ್​ ರೂಮ್​

ಸಭಾಂಗಣದ ಸನಿಹದಲ್ಲೇ ಎಸಿ ಹೊಂದಿರುವ 28 ಡಿಲಕ್ಸ್​ ರೂಮ್​ ಹಾಗೂ 2 ಪ್ರತ್ಯೇಕ ವಿಲ್ಲಾಗಳೂ ಸಹ ಇದೆ. ಸ್ವಿಮ್ಮಿಂಗ್​ ಫೂಲ್​, ರಿಕ್ರಿಯೇಷನ್​ ಕ್ಲಬ್​, ಜಿಮ್​ ಮತ್ತು ಮಕ್ಕಳಿಗೆ ಆಟವಾಡಲು ಒಳ್ಳೆಯ ಪಾರ್ಕ್​ ಕೂಡ ಇದೆ. ಕಾಪೋರ್ರೇಟ್​ ಸಂಸ್ಥೆಗಳ ಸಭೆ, ಸಮಾರಂಭಗಳಿಗೆ ಅನುಕೂಲ ಆಗುವ ರೀತಿಯಲ್ಲೇ ಬೋರ್ಡ್​ ರೂಮ್​ ಸಹ ಇದೆ. ಕಾನ್ಫರೆನ್ಸ್​ ಹಾಲ್​ ಇದೆ. ಇವೆಲ್ಲವೂ ಪ್ರತ್ಯೇಕವಾಗಿಯೇ ಇರುವುರಿಂದ ಮದುವೆ ಸಮಾರಂಭ ನಡೆಯುತ್ತಿದ್ದರೂ ಸಹ ಮತ್ತೆ ಪ್ರತ್ಯೇಕ ಎರಡು ಸಭೆ-ಸಮಾರಂಭವನ್ನೂ ನಡೆಸಬಹುದಾಗಿದೆ ಎಂದು ಡಾ. ಜಿ.ಶಂಕರ್​ ತಿಳಿಸಿದರು.

ಸಭಾಂಗಣದ ಉದ್ಘಾಟನಾ ಸಮಾರಂಭ

ಹಿರಿಯಡ್ಕದಲ್ಲಿ ಭವ್ಯವಾಗಿ ನಿರ್ಮಾಣಗೊಂಡ 'ಶ್ಯಾಮಿಲಿ ಸ್ಪ್ರಿಂಗ್ಸ್​' ಉದ್ಘಾಟನಾ ಕಾರ್ಯಕ್ರಮದ ನಿಮಿತ್ತ ಸೋಮವಾರದಿಂದಲೇ ವಿವಿಧ ಹೋಮ-ಹವನ ನಡೆಯಿತು. ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ ಹಾಗೂ ಶ್ರೀನಿವಾಸ ಉಪಾಧ್ಯಾಯ ಅವರು ಎಲ್ಲ ವೈದಿಕ ಕಾರ್ಯ ನೆರವೇರಿಸಿದರು. ಮಂಗಳವಾರ ಬೆಳಗ್ಗೆ ನಿಗದಿತ ಮುಹೂರ್ತದಲ್ಲಿ ನಾಡೋಜ ಡಾ. ಜಿ.ಶಂಕರ್​ ಅವರು 'ಶ್ಯಾಮಿಲಿ ಸ್ಪ್ರಿಂಗ್ಸ್​'ನ ಕಟ್ಟಡ ಹಾಗೂ ಸಭಾಂಗಣವನ್ನು ಉದ್ಘಾಟಿಸಿದರು. ಶಾಸಕ ಯಶ್​ಪಾಲ್​ ಸುವರ್ಣ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಕುಟುಂಬದವರಾದ ಪತ್ನಿ ಶಾಲಿನಿ ಜಿ. ಶಂಕರ್​, ಶ್ಯಾಮಿಲಿ ನವೀನ್​, ನವೀನ್​, ಶಾನ್ವಿಕಾ, ಶನಾಯ, ಸಾಧು ಸಾಲಿಯಾನ್​, ಆನಂದ್​ ಎಸ್​.ಕೆ., ಶಿವ ಎಸ್​. ಕರ್ಕೇರ, ಜಗದೀಶ್​ ಕಾಂಚನ್​, ಶಂಕರ್​ ಸಾಲಿಯಾನ್​, ಗುರುಪ್ರಸಾದ್​, ವಿಕಾಸ್​, ಪೂರ್ಣಿಮಾ, ನಿತಿನ್​, ವೀರೇಂದ್ರ ಹೆಗಡೆ ಇತರರು ಉಪಸ್ಥಿತರಿದ್ದರು. ರೆಸಾರ್ಟ್​ ಉದ್ಘಾಟನೆಯ ನಿಮಿತ್ತ ಮಂಜೇಶ್ವರದ ಸಾತ್ವಿಕಾ ಕೃಷ್ಣ ಮಂಜೇಶ್ವರ ಮತ್ತು ಬಳಗದವರಿಂದ ಸಾಂಸ್ಕೃತಿಕ ಕಲಾ ವೈಭವ ಆಯೋಜಿಸಲಾಗಿತ್ತು.
"

ಶ್ಯಾಮಿಲಿ ಸಭಾಂಗಣವೆಂದರೆ ಶ್ರೀಮಂತರಿಗೆ ಮಾತ್ರ ಎಂಬ ಅಭಿಪ್ರಾಯವಿತ್ತು. ಹೀಗಾಗಿ ಹಿರಿಯಡ್ಕದ 'ಶ್ಯಾಮಿಲಿ ಸ್ಪ್ರಿಂಗ್ಸ್​' ಸಭಾಂಗಣವನ್ನು ಜನಸಾಮಾನ್ಯರು, ಮಧ್ಯಮ ವರ್ಗದವರ ಬಜೆಟ್​ಗೆ ತಕ್ಕಂತೆ ಬಾಡಿಗೆ ದರ ನಿಗದಿ ಮಾಡಲಾಗಿದೆ. ಈಗಾಗಲೇ 12 ಮದುವೆ ಸಮಾರಂಭ ಬುಕ್​ ಆಗಿದೆ. ಆರಂಭದ 25 ಮದುವೆ ಕಾರ್ಯಕ್ರಮಕ್ಕೆ ವಿಶೇಷ ಗಿಫ್ಟ್ ಕೊಡಲು ತೀರ್ಮಾನಿಸಿದ್ದೇನೆ. ಜನರ ಅನುಕೂಲಕ್ಕೆ ತಕ್ಕಂತೆ ಶ್ಯಾಮಿಲಿ ರೆಸ್ಟೋರೆಂಟ್​ ಸಹ ಇದೆ. ಯಕ್ಷಗಾನ ಸೇರಿದಂತೆ ಎಲ್ಲ ಪ್ರಕಾರದ ಕಲಾ ಪ್ರದರ್ಶನಕ್ಕೂ ಈ ಸ್ಥಳ ಸೂಕ್ತವಾಗಿದೆ.