ಉಡುಪಿ: ಮಣಿಪಾಲದ ಮಾಹೆ ಎಂಐಟಿಯ ಸಿವಿಲ್ ಮತ್ತು ಕೆಮಿಕಲ್ ಇಂಜಿನಿಯರಿಂಗ್ ಸ್ಕೂಲ್ನ ಅಸೋಸಿಯೇಟ್ ಪ್ರಾಧ್ಯಾಪಕ ಮತ್ತು ಎಂಐಟಿ ಅಧ್ಯಯನ ವಿಭಾಗದ ಐಇಇಇ ಸದಸ್ಯ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರು ಬರ್ಲಿನ್ನಲ್ಲಿ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿ ಗಮನ ಸೆಳೆದರು.
ಜರ್ಮನಿಯ ಬರ್ಲಿನ್ನ ಟೆಕ್ನಿಷ್ ವಿಶ್ವವಿದ್ಯಾಲಯದಲ್ಲಿ ನಡೆದ ಐಇಇಇ ಜರ್ಮನಿ-ಭಾರತ ನಾವೀನ್ಯತೆ, ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಸಮ್ಮೇಳನ (ಜಿಐಸಿಐಟಿಇ-2026)ದಲ್ಲಿ 'ಭೌಗೋಳಿಕ ಮಾಹಿತಿ ವ್ಯವಸ್ಥೆಗಳು ಮತ್ತು ಉಪಗ್ರಹ ಚಿತ್ರಣ ಬಳಸಿಕೊಂಡು ಯಂತ್ರ ಕಲಿಕೆ, ಚಾಲಿತ ಮೂಲಸೌಕರ್ಯ ಸ್ಥಿತಿಯ ಮೌಲ್ಯಮಾಪನ' ಶೀರ್ಷಿಕೆಯ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿದರು.
ಡಾ. ಮದ್ದೋಡಿ ತಮ್ಮ ಪ್ರಸ್ತುತಿಯಲ್ಲಿ ಯಂತ್ರ ಕಲಿಕೆ, ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್)ಗಳು ಮತ್ತು ಉಪಗ್ರಹ ಚಿತ್ರಣ ಸಂಯೋಜಿಸುವುದು ಮೂಲಸೌಕರ್ಯ ಸ್ಥಿತಿಯ ಮೌಲ್ಯಮಾಪನಕ್ಕೆ ಪರಿಣಾಮಕಾರಿ ವಿಧಾನ ಒದಗಿಸುತ್ತದೆ ಎಂದು ಸಾಬೀತಪಡಿಸಿದರು.
ಈ ಸಂಯೋಜನೆಯು ದುರ್ಬಲ ಪ್ರದೇಶಗಳ ನಿಖರವಾದ ಗುರುತಿಸುವಿಕೆ, ಕ್ಷೀಣಿಸುವಿಕೆ ಮಾದರಿಗಳ ಮುನ್ಸೂಚನೆ ಮತ್ತು ಮೂಲಸೌಕರ್ಯ ಪರಿಸ್ಥಿತಿಗಳ ಪ್ರಾದೇಶಿಕ ದೃಶ್ಯೀಕರಣ, ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳುವಿಕೆ ಬೆಂಬಲಿಸುವುದು, ಪರಿಣಾಮಕಾರಿ ನಿರ್ವಹಣಾ ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ ಮತ್ತು ಸುಸ್ಥಿರ ಮೂಲಸೌಕರ್ಯ ನಿರ್ವಹಣೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಡಾ. ಮದ್ದೋಡಿ ಅವರು ತಮ್ಮ 'ಪರಿಸರ ವಿಜ್ಞಾನ ಮತ್ತು ವಿಪತ್ತು ನಿರ್ವಹಣೆ' ಪುಸ್ತಕದ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಿದರು.