ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಡಾ. ಕೆ.ಉಷಾ ಎಸ್​. ಪೈ ಮಾತನಾಡಿದರು. ಕೆ.ಅಣ್ಣಪ್ಪ ಶೆಣೈ, ರತ್ನಾಕರ ಶೆಣೈ, ವಿದ್ಯಾ ಪೈ, ದಿನೇಶ್​ ಹೆಗ್ಡೆ ಆತ್ರಾಡಿ, ಕೆ.ವಿನಾಯಕ ಕಿಣಿ, ರೇಶ್ಮಾ ಪ್ರಭು ಇತರರಿದ್ದರು. 
ಉಡುಪಿ

ಜಯದ ಗುರಿ ತಲುಪುವವರೆಗೂ ವಿರಮಿಸಬೇಡಿ

ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

ಉಡುಪಿ: ಕಲಿಕೆಯೊಂದಿಗೆ ಶಾಲೆಯಲ್ಲಿ ಆಯೋಜಿಸುವ ಎಲ್ಲ ಸ್ಪರ್ಧೆಗಳಲ್ಲೂ ಭಾಗವಹಿಸಬೇಕು. ಅದರಿಂದ ಅಮತರ್ಗತ ಕೌಶಲ, ಪ್ರತಿಭೆಗಳಿಗೆ ಹೊಳಪು ಲಭಿಸಲು ಸಾಧ್ಯ. ಭಾಗವಹಿಸಿ ಸೋತರೂ ಸಹ ಮತ್ತೆ ಸಿಗುವ ಅವಕಾಶದ ಸದುಪಯೋಗ ಮಾಡಿಕೊಳ್ಳಬೇಕು. ಗುರಿ ತಲುಪುವವರೆಗೂ ವಿರಮಿಸಬಾರದು. ಸ್ಪರ್ಧೆಗಳಲ್ಲಿ ಜಯಶೀಲರಾಗಲು ಪ್ರಯತ್ನಿಸುವಂತೆಯೇ ಮೊದಲು ಒಳ್ಳೆಯ ಮಾನವರಾಗಬೇಕು ಎಂದು ಮಹಾಮಾಯಾ ಫೌಂಡೇಷನ್​ನ ಕಾರ್ಯದರ್ಶಿ ಡಾ. ಕೆ.ಉಷಾ ಎಸ್​. ಪೈ ಕಿವಿಮಾತು ಹೇಳಿದರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ (ನ.29) ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಸಂಸ್ಥೆಯ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ರತ್ನಾಕರ ಶೆಣೈ, ವಿದ್ಯಾ ಅಮರ ಪೈ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ ದಿನೇಶ್​ ಹೆಗ್ಡೆ ಆತ್ರಾಡಿ, ಉಪಾಧ್ಯಕ್ಷ ಶಶಿರಾಜ್​ ಕುಂದರ್​, ಕೋಶಾಧಿಕಾರಿ ವೈಷ್ಣವಿ ಕಾಮತ್​, ಡಾ. ಟಿಎಂಎ ಪೈ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಶಿಕ್ಷಕಿ ಉಷಾ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ವಿನಾಯಕ ಕಿಣಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ರೇಶ್ಮಾ ಪ್ರಭು, ವಿದ್ಯಾರ್ಥಿ ನಾಯಕಿ ಅಭಿನೇತ್ರಾ ಸತೀಶ್​ ಆಚಾರ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ವೈಷ್ಣವಿ, ಪ್ರತಿಾ ನಾಯಕ್​ ಹಾಗೂ ವೈಷ್ಣವಿ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.