ಕಾಸರಗೋಡು: ಬಟ್ಟಂಪಾರೆಯ ಕೃಷ್ಣ ಥಿಯೇಟರ್ ಸಮೀಪ ವಾಸಿಸುತ್ತಿದ್ದ ವರ್ಕಾಡಿ ಕೊಣಿಬೈಲು ನಿವಾಸಿ ವೈದ್ಯ ಡಾ.ರಾಜೇಂದ್ರ ಶೆಟ್ಟಿ(73) ಎಂಬುವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯ ಶೌಚಗೃಹದಲ್ಲಿ ಮೃತದೇಹ ಪತ್ತೆಯಾಗಿದ್ದು, ಕೆಲದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ.
ಡಾ.ರಾಜೇಂದ್ರ ಶೆಟ್ಟಿ ಅವಿವಾಹಿತರಾಗಿದ್ದು, ಒಂಟಿಯಾಗಿ ವಾಸಿಸುತ್ತಿದ್ದರು. ಕರೆ ಮಾಡಿದರೂ ಸ್ವೀಕರಿಸದ ಹಿನ್ನೆಲೆಯಲ್ಲಿ ಸಂಬಂಧಿಕರು ಮನೆಗೆ ಬಂದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಕಾಸರಗೋಡು ಕಿಮ್ಸ್, ಚೆಂಗಳ ಇ.ಕೆ.ನಾಯನಾರ್ ಸಹಕಾರಿ ಆಸ್ಪತ್ರೆ ಮೊದಲಾದೆಡೆ ಕರ್ತವ್ಯ ನಿರ್ವಹಿಸಿದ್ದ ಅವರು 2 ವರ್ಷಗಳಿಂದ ವಿಶ್ರಾಂತ ಜೀವನ ನಡೆಸುತ್ತಿದ್ದರು.