ಉಡುಪಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅಶೋಕಕುಮಾರ್ ಕೊಡವೂರು ಮಾತನಾಡಿದರು. ವಿನಯಕುಮಾರ್ ಸೊರಕೆ, ಪ್ರಸಾದ್ ರಾಜ್ ಕಾಂಚನ್, ಕಿಶನ್ ಹೆಗ್ಡೆ, ಜ್ಯೋತಿ ಹೆಬ್ಬಾರ್, ಪ್ರಶಾಂತ ಜತ್ತನ್ನ, ಮಂಜುನಾಥ್ ಪೂಜಾರಿ, ವಿಶ್ವಾಸ ಅಮೀನ್, ಗಣನಾಥ್ ಶೆಟ್ಟಿ ಎಕ್ಕಾರು, ಭಾಸ್ಕರ್ ರಾವ್ ಕಿದಿಯೂರು ಇತರರಿದ್ದರು.
* ಮಾಜಿ ಸಚಿವ ವಿನಯಕುಮಾರ್ ಸೊರಕೆ ಆರೋಪ
* ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
ಉಡುಪಿ: ಮಹಿಳಾ ಮೀಸಲಾತಿ ತೀಮಾರ್ನ 2023ರಲ್ಲಿಯೇ ಆಗಿದ್ದು, ವಿರೋಧ ಪಕ್ಷ ಕಾಂಗ್ರೆಸ್ ಅದಕ್ಕೆ ಯಾವುದೇ ವಿರೋಧ ಮಾಡಿಲ್ಲ. ಆದರೆ, ಅದರೊಟ್ಟಿಗೆ ದೇಶಕ್ಕೆ ಮಾರಕವಾಗಲಿರುವ ಕ್ಷೇತ್ರಗಳ ಮರು ವಿಂಗಡಣೆಯ ಅವೈಜ್ಞಾನಿಕ ಪ್ರಕ್ರಿಯೆಯನ್ನು ವಿರೋಧಿಸಿದೆ. ಎಸ್ಐಆರ್ ಮೂಲಕ ಜನತೆಯ ಮತದಾನದ ಹಕ್ಕು ಕಸಿಯುವ ಯತ್ನವನ್ನೂ ಬಿಜೆಪಿ ಮಾಡುತ್ತಿದೆ. ದೇಶದ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಲು, ಜನಸಾಮಾನ್ಯರ ಹಕ್ಕು ರಸಲು ಹಾಗೂ ದೇಶದ ರಾಜಕೀಯ ವ್ಯವಸ್ಥೆ ಬದಲಿಸಲು ಹುನ್ನಾರ ನಡೆಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ತಿಳಿಸಿದರು.
ಕೇಂದ್ರ ಬಿಜೆಪಿ ಸರ್ಕಾರದ ಅವೈಜ್ಞಾನಿಕ ಮತ್ತು ಅಸಮತೋಲನದಿಂದ ಕೂಡಿದ ಕ್ಷೇತ್ರ ಮರುವಿಂಗಡಣೆಯ ವಿರುದ್ದ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬ್ರಹ್ಮಗಿರಿಯ ಜಾರ್ಜ್ ಫರ್ನಾಂಡೀಸ್ ವೃತ್ತದಲ್ಲಿ ಶನಿವಾರ (ಏ.18) ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಹೆಸರು ಕೆಡಿಸುವ ಯತ್ನ
ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ತಾವು ಏನೇ ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಅನುಸರಿಸುತ್ತಿದ್ದಾರೆ. ಅಸಂವಿಧಾನಿಕವಾಗಿ ಹಾಗೂ ಅವೈಜ್ಞಾನಿಕವಾಗಿ ಕ್ಷೇತ್ರಗಳ ಮರವಿಂಗಡಣೆ ಮಾಡಲು ಯತ್ನಿಸಿ ವಿಫಲವಾಗಿದೆ. ಅವರಿಗೂ ಸಹ ಮಹಿಳಾ ಮೀಸಲಾತಿ ಬೇಕಾಗಿರಲಿಲ್ಲ. ಕಾಂಗ್ರೆಸ್ ಮಹಿಳಾ ವಿರೋಧಿ ಎಂದು ಬಿಂಬಿಸಿ ನಮ್ಮ ಪಕ್ಷದ ಹೆಸರು ಕೆಡಿಸಲು ಅವರು ಈ ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಗಣನಾಥ್ ಶೆಟ್ಟಿ ಎಕ್ಕಾರು ದಿಕ್ಸೂಚಿ ಭಾಷಣ ಮಾಡಿ, ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಅಪಾಯದಲ್ಲಿದೆ. ಅವುಗಳನ್ನು ಉಳಿಸಿಕೊಳ್ಳಲು ಭಾರತೀಯ ಪ್ರಜೆಗಳೆಲ್ಲರೂ ಮುಂದಡಿ ಇಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಮುಖಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿದರು. ಪಕ್ಷದ ಪ್ರಮುಖರಾದ ಪ್ರಶಾಂತ ಜತ್ತನ್ನ, ಮಂಜುನಾಥ್ ಪೂಜಾರಿ, ವಿಶ್ವಾಸ ಅಮೀನ್, ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಎಂ.ಪಿ. ಮೊಯಿದ್ದೀನಬ್ಬ, ರೋಶಿನಿ ಓಲಿವರ್, ಶರ್ಘುದ್ದೀನ್ ಶೇಖ್, ಜಯಕುಮಾರ್, ಮಹಾಬಲ ಕುಂದರ್, ಪ್ರಕಾಶ ಶೆಟ್ಟಿ, ಭುಜಂಗ ಶೆಟ್ಟಿ, ಶಶಿಧರ್ ಶೆಟ್ಟಿ ಸುಧಾಕರ್ ಕೋಟ್ಯಾನ್ ಕಾರ್ಕಳ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯೆ ಜ್ಯೋತಿ ಹೆಬ್ಬಾರ್, ಅಣ್ಣಯ್ಯ ಸೇರಿಗಾರ್, ಭಾಸ್ಕರ್ ರಾವ್ ಕಿದಿಯೂರು, ಪ್ರಖ್ಯಾತ್ ಶೆಟ್ಟಿ ಇತರರು ಇದ್ದರು.
ಪ್ರತಿಭಟನೆಗೂ ಮೊದಲು ಜಿಲ್ಲಾ ಕಾಂಗ್ರೆಸ್ ಭವನದಿಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಬ್ರಹ್ಮಗಿರಿ ಸರ್ಕಲ್ ವರೆಗೆ ಪಾದಯಾತ್ರೆ ನಡೆಸಿದರು.