ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್​ ಭವನದ ಎದುರು ಪಕ್ಷದ ವಿವಿಧ ನಾಯಕರು ಸಂಭ್ರಮ ಆಚರಿಸಿದರು. ಅಶೋಕ್​ ಕೊಡವೂರು, ಹಿಮ್ಮತ್​ ಸಿಂಗ್​ ಪಟೇಲ್​, ಐವಾನ್​ ಡಿಸೋಜಾ, ವಿನಯಕುಮಾರ್​ ಸೊರಕೆ, ಕೆ.ಜಯಪ್ರಕಾಶ್​ ಹೆಗ್ಡೆ, ರಮೇಶ್​ ಕಾಂಚನ್​ ಇತರರಿದ್ದರು. 
ಉಡುಪಿ

ಪ್ರಧಾನ್​ ರಾಜೀನಾಮೆ; ಉಡುಪಿಯಲ್ಲಿ ಕಾಂಗ್ರೆಸ್​ ಸಂಭ್ರಮಾಚರಣೆ

* ವಿದ್ಯಾರ್ಥಿಗಳು, ರಾಹುಲ್​ ಗಾಂಧಿ ಹೋರಾಟಕ್ಕೆ ಲಭಿಸಿದ ಜಯ

ಉಡುಪಿ: ನೀಟ್​ ಹಗರಣಕ್ಕೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್​ ಭವನದ ಬಳಿ ಪಕ್ಷದ ವಿವಿಧ ನಾಯಕರು ಶನಿವಾರ (ಜು.25) ಸಂಭ್ರಮ ಆಚರಿಸಿದರು.
ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದಾಗಿ ಕೇಂದ್ರ ಬಿಜೆಪಿ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿತ್ತು. ವಿದ್ಯಾರ್ಥಿಗಳ ಹೋರಾಟ ಮತ್ತು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ನಿರಂತರ ಒತ್ತಾಯಕ್ಕೆ ಲಭಿಸಿದ ಜಯ ಇದು ಎಂದು ಮುಖಂಡರು ಅಭಿಪ್ರಾಯಪಟ್ಟರು.
ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಶೋಕ್​ ಕೊಡವೂರು, ಎಐಸಿಸಿ ವೀಕ್ಷಕ ಹಿಮ್ಮತ್​ ಸಿಂಗ್​ ಪಟೇಲ್​, ಮಾಜಿ ಸಚಿವ ವಿನಯಕುಮಾರ್​ ಸೊರಕೆ, ಮಾಜಿ ಸಂಸದ ಕೆ.ಜಯಪ್ರಕಾಶ್​ ಹೆಗ್ಡೆ, ಪ್ರಮುಖರಾದ ರಮೇಶ್​ ಕಾಂಚನ್​, ಅಲೆವೂರು ಹರೀಶ್​ ಕಿಣಿ, ಪ್ರಖ್ಯಾತ್​ ಶೆಟ್ಟಿ, ಸೌರಭ್​ ಬಲ್ಲಾಳ್​, ವಿಶ್ವಾಸ್​ ಅಮೀನ್​ ಇನ್ನಿತರರು ಇದ್ದರು.
"

ನೀಟ್​ ಹಗರಣದ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ನಿರಂತರ ಧ್ವನಿ ಎತ್ತಿದ ಪರಿಣಾಮದಿಂದಾಗಿ ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಿದ್ದಾರೆ. ಇದು ದೇಶದಲ್ಲಿ ಬದಲಾವಣೆಯ ವಾತಾವರಣ ನಿರ್ಮಾಣ ಆಗುತ್ತಿರುವುದರ ಸೂಚಕವಾಗಿದೆ. ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಮೊಂಬತ್ತಿ ಬೆಳಗಿ ದೇಶವ್ಯಾಪಿ ಹೋರಾಟ ನಡೆಸಲು ಎಐಸಿಸಿ ನಿರ್ಧರಿಸಿತ್ತು. ಆದರೆ, ಪ್ರಧಾನ್​ ರಾಜೀನಾಮೆ ನೀಡಿದ್ದರಿಂದ ಹೋರಾಟ ಕೈಬಿಟ್ಟು ಸಂಭ್ರಮಾಚರಣೆ ಮಾಡಿದ್ದೇವೆ.

— ಐವಾನ್​ ಡಿಸೋಜಾ. ವಿ.ಪ. ಸದಸ್ಯ.