ವಿದ್ಯುತ್ ಕಂಬಗಳನ್ನು ತೆರವು ಮಾಡಿದ ಬಳಿಕ ಕಾಂಕ್ರೀಟ್ ರಸ್ತೆ. 
ಉಡುಪಿ

ರಸ್ತೆ ಮಧ್ಯೆಯಲ್ಲಿದ್ದ ವಿವಾದಿತ ವಿದ್ಯುತ್ ಕಂಬ ತೆರವು

ಸುಳ್ಯ: ಸುಳ್ಯ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕೆಳ ಭಾಗವಾಗಿ ಸರ್ಕಾರಿ ಪಪೂ ಕಾಲೇಜಿನ ಕಡೆಗೆ ತೆರಳುವ ರಸ್ತೆಯಲ್ಲಿ ವಿದ್ಯುತ್ ಕಂಬ ಸೇರಿಸಿ ಕಾಂಕ್ರೀಟೀಕರಣ ನಡೆಸಿ ವಿವಾದಕ್ಕೆ ಕಾರಣವಾಗಿದ್ದ ಕಾಂಕ್ರೀಟ್ ರಸ್ತೆಯಲ್ಲಿದ್ದ ವಿದ್ಯುತ್ ಕಂಬವನ್ನು ಶಾಸಕಿ ಸೂಚನೆ ಮೇರೆಗೆ ತೆರವು ಮಾಡಲಾಗಿದೆ.

ಈ ರಸ್ತೆಯಲ್ಲಿ ಕೆಲವು ಭಾಗ ಇತ್ತೀಚೆಗೆ ಕಾಂಕ್ರೀಟ್ ಮಾಡಲಾಗಿತ್ತು ಆದರೆ, ಕಾಂಕ್ರೀಟ್ ನಡೆದ ಭಾಗದಲ್ಲಿ ಇದ್ದ ವಿದ್ಯುತ್ ಕಂಬ ಸ್ಥಳಾಂತರ ಮಾಡದೆ ವಿದ್ಯುತ್ ಕಂಬ ಸೇರಿಸಿ ರಸ್ತೆ ಅಭಿವೃದ್ಧಿಪಡಿಸಲಾಗಿತ್ತು. ಕಂಬ ಹಾಗೆಯೇ ಉಳಿಸಿ ಅಗಲೀಕರಣ ಮಾಡಿ ಕಾಂಕ್ರೀಟ್ ಮಾಡಲಾಗಿದ್ದು ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಸವಾರರು ಆತಂಕ ವ್ಯಕ್ತಪಡಿಸಿದ್ದರು
ಇದು ವಿವಾದಕ್ಕೆ ಕಾರಣವಾಗಿ ಸಾಕಷ್ಟು ಟ್ರೋಲ್ ಕೂಡ ಆಗಿತ್ತು. ಕಂಬ ತೆರವು ಮಾಡಲು ಶಾಸಕಿ ಭಾಗೀರಥಿ ಮುರುಳ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದೀಗ ಕಂಬ ತೆರವು ಮಾಡಿ ಬೇರೆ ಕಂಬ ಅಳವಡಿಸಿ ಲೈನ್ ಬದಲಿಸಲಾಗಿದೆ.