ಗುಜ್ಜಾಡಿಯಲ್ಲಿ ಬಳಕೆಯಾಗದೆ ಪಾಳುಬಿದ್ದ ಶುದ್ಧ ಕುಡಿಯುವ ನೀರಿನ ಘಟಕ. 
ಉಡುಪಿ

ಪಾಳುಬಿದ್ದ ಕುಡಿವ ನೀರಿನ ಘಟಕ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಗುಜ್ಜಾಡಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾ ಕಾಲನಿಯಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ನಿರ್ಮಿಸಲಾದ ನೀರಿನ ಘಟಕ ಬಳಕೆಯಿಲ್ಲದೆ ಪಾಳು ಬಿದ್ದಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಉಡುಪಿ ಜಿಲ್ಲಾ ಪಂಚಾಯಿತಿ, ಕುಂದಾಪುರ ತಾಲೂಕು ಪಂಚಾಯಿತಿ ಹಾಗೂ ಗುಜ್ಜಾಡಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಎಸ್‌ಸಿಪಿ/ ಟಿಎಸ್‌ಪಿ ಯೋಜನೆಯಡಿ ಘಟಕ ನಿರ್ಮಿಸಲಾಗಿತ್ತು. ಆರಂಭದ ಕೆಲಕಾಲ ಸಾರ್ವಜನಿಕರ ಬಳಕೆಯಲ್ಲಿದ್ದ ಟಕ, ಇದೀಗ ನಿರ್ವಹಣೆ ಹಾಗೂ ಬಳಕೆ ಕೊರತೆಯಿಂದ ದುಸ್ಥಿತಿಗೆ ತಲುಪಿದೆ.
ಈ ಶುದ್ಧ ಕುಡಿಯುವ ನೀರಿನ ಘಟಕದ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಮನೆಗಳಿವೆ. ಆರಂಭದ ಒಂದು ವರ್ಷದವರೆಗೆ ಸ್ಥಳೀಯರು ಘಟಕದ ನೀರನ್ನು ಬಳಸುತ್ತಿದ್ದರು. ಆದರೆ ದೂರದ ನಿವಾಸಿಗಳಿಗೆ ಘಟಕಕ್ಕೆ ಬಂದು ನೀರು ಪಡೆಯುವುದು ಕಷ್ಟಕರವಾಗಿದ್ದರಿಂದ ಬಳಕೆ ಕ್ರಮೇಣ ಕಡಿಮೆಯಾಯಿತು. ಪ್ರತಿ ಮನೆಗೆ ಪೈಪ್‌ಲೈನ್ ಮೂಲಕ ನೀರಿನ ಸೌಲಭ್ಯ ಲಭ್ಯವಾದ ಕಾರಣ ಟಕದ ಬಳಕೆ ಸಂಪೂರ್ಣವಾಗಿ ಕಡಿಮೆಯಾಯಿತು. ಪರಿಣಾಮ ಟಕ ಇಂದು ಪಾಳುಬಿದ್ದ ಸ್ಥಿತಿಯಲ್ಲಿದೆ.
ಘಟಕದ ಸುತ್ತಲೂ ಗಿಡಗಂಟಿಗಳು ದಟ್ಟವಾಗಿ ಬೆಳೆದಿದ್ದು, ಸಂಪೂರ್ಣ ಪ್ರದೇಶ ಪೊದೆಗಳಿಂದ ಆವರಿಸಿದೆ. ಟಕದ ಮೇಲ್ಛಾವಣಿಯ ಶೀಟ್‌ಗಳು ಹಾಗೂ ಒಳಗಿರುವ ಯಂತ್ರೋಪಕರಣಗಳು ಹಲವು ವರ್ಷಗಳಿಂದ ಬಳಕೆಯಾಗದೆ ತುಕ್ಕು ಹಿಡಿದಿವೆ.

ದುರಸ್ತಿಗೆ ಸಾರ್ವಜನಿಕರ ಆಗ್ರಹ

ಈ ಬಾರಿ ಮಳೆ ಪ್ರವಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ಬೇಸಿಗೆಯಲ್ಲಿ ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಸ್ಥಳೀಯಾಡಳಿತ ಶುದ್ಧ ಕುಡಿಯುವ ನೀರಿನ ಟಕವನ್ನು ದುರಸ್ತಿಗೊಳಿಸಿ, ಅದರ ಉಪಯೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮತ್ತೆ ಬಳಕೆಗೆ ತರಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಥಳೀಯರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಟಕವನ್ನು ಸ್ಥಾಪಿಸಲಾಗಿತ್ತು. ಆದರೆ ಸ್ಥಳೀಯರು ಸಮರ್ಪಕವಾಗಿ ಬಳಸದಿರುವುದರಿಂದ ನಿರ್ವಹಣೆ ಕೊರತೆ ಉಂಟಾಗಿ ಟಕ ಇಂದು ದುಸ್ಥಿತಿಗೆ ತಲುಪಿದೆ. ಸಾರ್ವಜನಿಕರು ಘಟಕವನ್ನು ಸದ್ಬಳಕೆ ಮಾಡಿದಾಗ ವಾತ್ರ ಇಂತಹ ಸೌಲಭ್ಯಗಳನ್ನು ಸಮರ್ಪಕವಾಗಿ ಉಳಿಸಿಕೊಳ್ಳಲು ಸಾಧ್ಯ.

— ತಮ್ಮಯ್ಯ ದೇವಾಡಿಗ ಗುಜ್ಜಾಡಿ ಗ್ರಾಪಂ ವಾಜಿ ಅಧ್ಯಕ್ಷ