ಕೊಕ್ಕರ್ಣೆ:ಶ್ರೀಪೇಟೆ ವಿನಾಯಕ ಶಾಂತಾದುರ್ಗಾ,ಶ್ರೀಮಹಾಗಣಪತಿ ಮಹಾಮಾಯಾ ದೇವಸ್ಥಾನದಲ್ಲಿಸಹಸ್ರ ಕುಂಭಾಭಿಷೇಕ ಕಾರ್ಯಕ್ರಮಜರುಗಿತು.ಶ್ರೀಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅಮೃತ ಹಸ್ತದಿಂದಶ್ರೀ ದೇವರ ಸಾನ್ನಿಧ್ಯಾಭಿವೃದ್ಧಿಹಾಗೂ ಲೋಕ ಕಲ್ಯಾಣಾರ್ಥ ತಂತ್ರಸಾರೋಕ್ತ ಸಹಸ್ರ ಕುಂಭಾಭಿಷೇಕನೆರವೇರಿತು.
ಶನಿವಾರಶ್ರೀ ಉಭಯದೇವರ ಮಧ್ಯಾಹ್ನ ಪೂಜೆಶ್ರೀ ಸಂಸ್ಥಾನ ದೇವರಿಗೆ ಮಧ್ಯಾಹ್ನಪೂಜೆ ಮಹಾ ಸಮಾರಾಧನೆ ಸಾಯಂಕಾಲಶ್ರೀ ಗುರುವರ್ಯರ ದಿಗ್ವಿಜಯೋತ್ಸವಮುಂತಾದ ಕಾರ್ಯಕ್ರಮಗಳು ನಡೆದವು.ಕೇರಳದಚೆಂಡೆ,ಹುಲಿವೇಷ,ಶ್ರೀಮದ್ಭುವನೇಂದ್ರ ತೀರ್ಥ ಸ್ವಾಮೀಜಿಮತ್ತು ಶ್ರೀಮದ್ ಸುಧೀಂದ್ರ ತೀರ್ಥಸ್ವಾಮೀಜಿ ಭಾವಚಿತ್ರದ ಟ್ಯಾಬ್ಲೋ,ಸುಡುಮದ್ದುಗಳುವಿಶೇಷ ಆಕರ್ಷಣೀಯವಾಗಿತ್ತು.ಸ್ವಾಮೀಜಿಅವರನ್ನು ಪುಷ್ಪಾಲಂಕೃತ ವಾಹನದಲ್ಲಿಆಸೀನರಾಗಿಸಿ ದಿಗ್ವಿಜಯ ಮಹೋತ್ಸವಜರುಗಿತು.ಶಿರಾಲಿಶ್ರೀ ಎಂ.ಜಿ.ಎಂ.ದೇವಸ್ಥಾನದಕೇಂದ್ರ ಆಡಳಿತ ಮಂಡಳಿ ಅಧ್ಯಕ್ಷಡಿ.ಗೋಪಿನಾಥಕಾಮತ್,ಸರ್ವಸದಸ್ಯರು,ಕುಳಾವಿಗಳು,ಅರ್ಚಕವೃಂದ,ಭಕ್ತರುಉಪಸ್ಥಿತರಿದ್ದರು.