ಪುಷ್ಪಾಲಂಕೃತ ವಾಹನದಲ್ಲಿ ಸಂಚರಿಸಿದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ 
ಉಡುಪಿ

ಕೋಟೇಶ್ವರದಲ್ಲಿ ದಿಗ್ವಿಜಯ ಮಹೋತ್ಸವ

ಇಂದಿರಾ ಎನ್ ಕೆ
ಕುಂದಾಪುರ: ಶ್ರೀ ಕಾಶೀ ಮಠದ ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮ ಶತವಾನೋತ್ಸವ ವರ್ಷಾಚರಣೆ ಅಂಗವಾಗಿ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಚಾತುರ್ವಾಸ್ಯದ ‘ದಿಗ್ವಿಜಯ ಮಹೋತ್ಸವ’ ಭಾನುವಾರ ನಡೆಯಿತು.
ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲಿನಿಂದ ಆರಂಭಗೊಂಡ ದಿಗ್ವಿಜಯ ಮಹೋತ್ಸವದಲ್ಲಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಪುಷ್ಪಾಲಂಕೃತ ವಾಹನದಲ್ಲಿ ಸಂಚರಿಸಿ ಭಕ್ತರನ್ನು ಅನುಗ್ರಹಿಸಿದರು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ, ಮಹಾರಾಷ್ಟ್ರ, ಗೋವಾದಿಂದ ಸಹಸ್ರಾರು ಮಂದಿ ಸವಾಜ ಬಾಂಧವರು, ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡು ಹರಿಗುರು ಕೃಪೆಗೆ ಪಾತ್ರರಾದರು.
ದಿಗ್ವಿಜಯ ಮಹೋತ್ಸವದ ಅಂಗವಾಗಿ ಕೋಟೇಶ್ವರ ಪೇಟೆಯ ನಾಲ್ಕೂ ರಸ್ತೆಗಳು ಹೊಸ ಬಗೆಯ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಹತ್ತಕ್ಕೂ ಹೆಚ್ಚಿನ ಸ್ತಬ್ಧಚಿತ್ರಗಳು, ಚಂಡೆಪಿಟೀಲು ವಾದ್ಯಗಳ ವೈಭವೋಪೇತ ಪ್ರದರ್ಶನಗಳು ಮಹೋತ್ಸವದ ಕಳೆಯನ್ನು ಹೆಚ್ಚಿಸಿತು. ಬೇರೆ ಬೇರೆ ಊರುಗಳಿಂದ ಬಂದ ಭಕ್ತರಿಗೆ ಕುರುಕ್ಷೇತ್ರ ಗದ್ದೆಯಲ್ಲಿ ಗುರುಗಳಿಂದ ಫಲಮಂತ್ರಾಕ್ಷತೆಯನ್ನು ಪಡೆಯಲು ವ್ಯವಸ್ಥೆ ವಾಡಲಾಗಿತ್ತು. ನೆರೆದವರಿಗೆ ಮತ್ತು ಬೇರೆ ಬೇರೆ ಊರುಗಳಿಂದ ಬಂದ ಭಕ್ತರಿಗೆ ಶಾಲೆಯ ಹತ್ತಿರ, ಆಟಕೆರೆ ಜವಳಿ ಅಂಗಡಿ ಹತ್ತಿರ, ಕುರುಕ್ಷೇತ್ರ ಗದ್ದೆಯಲ್ಲಿ (ಎಂ.ವಿ ರಸ್ತೆ) ಆಹಾರ ಕೇಂದ್ರಗಳನ್ನು ಸ್ಥಾಪಿಸಿ ಉಚಿತ ಆಹಾರ ವ್ಯವಸ್ಥೆಯನ್ನು ವಾಡಲಾಗಿತ್ತು.