ಕೊಂಬಾರು ಸಿಎಸ್‌ಸಿ ಕೇಂದ್ರದಲ್ಲಿ ಡಿ.ಜಿ.ಪೇಗೆ ಚಾಲನೆ ನೀಡಲಾಯಿತು. ಪ್ರಮುಖರಾದ ನಾಗಪ್ಪ ಗೌಡ, ಧರ್ಮಪಾಲ ಗೌಡ, ಜಯಪ್ರಕಾಶ್, ಸೋಮೇಶ್, ನಿರ್ವಹಕಿ ಶ್ರುತಿ ಮೊದಲಾದವರು ಉಪಸ್ಥಿತರಿದ್ದರು.
ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಳಿನೆಲೆ ವಲಯದ ಕೊಂಬಾರು ಗ್ರಾಪಂ ವ್ಯಾಪ್ತಿಯ ಧರ್ಮಸ್ಥಳ ಯೋಜನೆ ಕೊಂಬಾರು ಸಿಎಸ್‌ಸಿ ಕೇಂದ್ರದಲ್ಲಿ ಡಿಜಿ ಪೇ ಸೇವೆಗೆ ಚಾಲನೆ ನೀಡಲಾಯಿತು.
ಕೊಂಬಾರು ಗ್ರಾಪಂ ಮಾಜಿ ಅಧ್ಯಕ್ಷ ಮಧುಸೂದನ್ ಓಡೋಳಿ ಉದ್ಘಾಟಿಸಿ ಮಾತನಾಡಿ, ಗ್ರಾಮಿಣ ಪ್ರದೇಶದಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಧರ್ಮಸ್ಥಳ ಯೋಜನೆ ಮುಂಚೂಣಿಯಲ್ಲಿದೆ ಎಂದರು.
ಕೊಂಬಾರು ಒಕ್ಕೂಟ ನಿಕಟಪೂರ್ವ ಅಧ್ಯಕ್ಷ ನಾಗಪ್ಪ ಗೌಡ, ಒಕ್ಕೂಟ ಅಧ್ಯಕ್ಷ ಧರ್ಮಪಾಲ ಗೌಡ, ಕಾರ್ಯದರ್ಶಿ ಜಯಪ್ರಕಾಶ್, ತಾಲೂಕು ಕೃಷಿ ಮೇಲ್ವಿಚಾರಕ ಸೋಮೇಶ್, ಸಿಎಸ್‌ಸಿ ನಿರ್ವಹಕಿ ಶ್ರುತಿ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾಪ್ರತಿನಿಧಿ ವಿನೋದ್ ಕೆ.ಸಿ. ಸ್ವಾಗತಿಸಿ, ವಂದಿಸಿದರು.