400 ಲೀಟರ್ ಡಿಸೇಲ್ ಕಳವು 
ಉಡುಪಿ

ರಸ್ತೆ ಬದಿ ನಿಲ್ಲಿಸಿದ್ದ ಲಾರಿಯಿಂದ ಡಿಸೇಲ್ ಕಳವು

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಪೇಟೆಯಲ್ಲಿ ನಿಲ್ಲಿಸಿ, ಅರ್ಧ ತಾಸಿನೊಳಗೆ ಮನೆಗೆ ಹೋಗಿ ಬರುವಷ್ಟರಲ್ಲಿ ಲಾರಿಯಿಂದ ಬರೋಬ್ಬರಿ 400 ಲೀಟರ್ ಡಿಸೇಲ್ ಕಳವು ಮಾಡಿರುವ ಘಟನೆ ನಡೆದಿದೆ.
ನೆಲ್ಯಾಡಿ ನಿವಾಸಿ ಸಾದಿಕ್ ಮಧ್ಯರಾತ್ರಿ 3 ಗಂಟೆ ಹೊತ್ತಿಗೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆ ಹೋಗುವಾಗ ರಸ್ತೆ ಬದಿ ಲಾರಿ ನೆಲ್ಯಾಡಿ ಪೇಟೆ ಸಮೀಪದಲ್ಲಿರುವ ತಮ್ಮ ಮನೆಗೆ ತೆರಳಿದ್ದರು. ಅರ್ಧ ಗಂಟೆ ಬಿಟ್ಟು ಬರುವಷ್ಟರಲ್ಲಿ 400 ಲೀ. ಡಿಸೇಲ್ ಕಳವಾಗಿತ್ತು ಎಂದು ಉಪ್ಪಿನಂಗಡಿ ಪೊಲೀಸರಿಗೆ ತಿಳಿಸಿದ್ದಾರೆ.