ಧರ್ಮಸ್ಥಳ ಸಹಕಾರ ಸಂಘದ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ವಿವಿಧ ಸಾಧಕರನ್ನು ಗೌರವಿಸಲಾಯಿತು. ಪ್ರಮುಖರಾದ ಪ್ರೀತಮ್ ಡಿ., ಅಜಿತ್ ಕುಮಾರ್ ಜೈನ್, ಶಾಂಭವಿ ರೈ ಮತ್ತಿತರರು ಉಪಸ್ಥಿತರಿದ್ದರು.  
ಉಡುಪಿ

ಧರ್ಮಸ್ಥಳ ಸೊಸೈಟಿಗೆ 2.89 ಕೋಟಿ ರೂ. ನಿವ್ವಳ ಲಾಭ

ಬೆಳ್ತಂಗಡಿ: ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2025-26ನೇ ಸಾಲಿನಲ್ಲಿ 2.89 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.21 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಪ್ರೀತಮ್ ಡಿ. ಘೋಷಿಸಿದರು.

ಸಂಘದ ಸಾಧನಾ ಕಟ್ಟಡ ಅಟಲ್‌ಜೀ ಸಭಾಭವನದಲ್ಲಿ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆ ಮೇಲೆ ಸದಸ್ಯರು ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆ ಫಲವಾಗಿ ನಮ್ಮ ಠೇವಣಿ 100 ಕೋಟಿ ರೂ. ಮಿತಿ ಮೀರಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಸಭಾಂಗಣದಲ್ಲಿ ಸ್ಥಳಾವಕಾಶ ಮತ್ತು ಇತರೆ ವ್ಯವಸ್ಥೆ ಕೊರತೆ ಇದ್ದು ಮುಂದಿನ ವರ್ಷ ಹೊಸ ಜಾಗ ಖರೀದಿಸಿ ನೂತನ ಕಟ್ಟಡದಲ್ಲಿ ಮಹಾಸಭೆ ನಡೆಸುವ ಸಂಕಲ್ಪ ಮಾಡಿದ್ದೇವೆ. ಅಲ್ಲದೆ ಸದಸ್ಯರ ಅನುಕೂಲಕ್ಕಾಗಿ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದರು.
ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರಾದ ಶಾಂಭವಿ ರೈ, ಉಮಾನಾಥ, ಶೀನ, ಧನಲಕ್ಷ್ಮೀ ಜನಾರ್ದನ, ನೀಲಾಧರ ಶೆಟ್ಟಿ, ಪ್ರಸನ್ನ ಹೆಬ್ಬಾರ್, ಚಂದ್ರಶೇಖರ್, ವಿಕ್ರಂ ಗೌಡ, ತಂಗಚ್ಚನ್ ಹಾಗೂ ಕೇಂದ್ರ ಸಹಕಾರಿ ಬ್ಯಾಂಕ್ ವಲಯ ಮೇಲ್ವಿಚಾರಕ ಸುದರ್ಶನ್ ಕೋಟ್ಯಾನ್ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ವಾರ್ಷಿಕ ವರದಿ ವಾಚಿಸಿದರು. ಹಿರಿಯ ಪಿಗ್ಮಿ ಸಂಗ್ರಾಹಕ ಎ.ಎಸ್.ಲೋಕೇಶ್ ಶೆಟ್ಟಿ ನಿರೂಪಿಸಿದರು. ಸಿಬ್ಬಂದಿ ಸೆಲ್ಮಾ ಟಿ.ಕೆ., ಉಷಾ ಸನ್ಮಾನಿತರನ್ನು ಪರಿಚಯಿಸಿದರು.

ಸಾಧಕರಿಗೆ ಸನ್ಮಾನ

ಸಂಘದ 13 ಮಂದಿ ಹಿರಿಯ ಸದಸ್ಯರನ್ನು, ನಿವೃತ್ತ ಹಿರಿಯ ಆರೋಗ್ಯ ಸಹಾಯಕಿ ವಿಜಯಲಕ್ಷ್ಮೀ, ಎಸ್ಸೆಸ್ಸೆಲ್ಸಿಯಲ್ಲಿ ವಿಶೇಷ ಸಾಧನೆಗೈದ ಮಾಧುರ್ಯ, ಅನನ್ಯಾ ಹಾಗೂ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.