ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ ಅಂಗವಾಗಿ ಯಮುನಾ ಮೆರವಣಿಗೆ ನೆರವೇರಿತು. ಪ್ರಮುಖರಾದ ಹರೀಶ್ ಎಸ್.ಇಂಜಾಡಿ, ಅರವಿಂದ ಅಯ್ಯಪ್ಪ ಸುತಗುಂಡಿ, ಯೇಸುರಾಜ್ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ಕುಕ್ಕೆ ದೇವಳದಲ್ಲಿ ಶ್ರದ್ಧಾಭಕ್ತಿಯ ವರಮಹಾಲಕ್ಷ್ಮೀ ಪೂಜೆ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ನಡೆದ ವರಮಹಾಲಕ್ಷ್ಮೀ ಪೂಜೆಯಲ್ಲಿ ಸಹಸ್ರಾರು ಭಕ್ತರು ಭಾಗಿಯಾದರು.

ಕುಕ್ಕೆ ದೇವಳದ ಶೃಂಗೇರಿ ಮಠದಲ್ಲಿ ಕ್ಷೇತ್ರದ ಪುರೋಹಿತ ಮಧುಸೂದನ ಕಲ್ಲೂರಾಯರ ನೇತೃತ್ವದಲ್ಲಿ ಪೂಜೆ ನಡೆಯಿತು. ಪುರೋಹಿತ ಪ್ರಸನ್ನ ಹೊಳ್ಳ ಸಹಕರಿಸಿದರು. ದೇವಳದ ನೌಕರರು, ಭಕ್ತರು ಪ್ರಸಾದ ಸ್ವೀಕರಿಸಿದರು. ದೇವಳದ ವತಿಯಿಂದ ಕುಂಕುಮ, ಬಳೆ, ರವಿಕೆ ಕಣವನ್ನು ಸಹಸ್ರಾರು ಮಹಿಳಾ ಭಕ್ತರಿಗೆ ವಿತರಿಸಲಾಯಿತು.
ವರಮಹಾಲಕ್ಷ್ಮೀ ಪೂಜೆಗಾಗಿ ದೇವಳದ ನೌಕರರು ಸಾಂಪ್ರದಾಯಿಕ ಗುಡಿ ನಿರ್ಮಿಸಿದ್ದರು. ಅದಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಮಹಿಳೆಯರು ಕಲಶದೊಂದಿಗೆ ದರ್ಪಣತೀರ್ಥ ನದಿಗೆ ತೆರಳಿದರು. ಪುರೋಹಿತರು ವೈದಿಕ ವಿಧಿ ವಿಧಾನ ನೆರವೇರಿಸಿದರು. ಪುರೋಹಿತರು ಯಮುನೆಗೆ ಪೂಜೆ ಮಾಡಿದರು. ಆನೆ, ಬಿರುದಾವಳಿ, ಮಂಗಳವಾದ್ಯಗಳ ನಿನಾದದೊಂದಿಗೆ ಮೆರವಣಿಗೆಯೊಂದಿಗೆ ಯಮುನೆಯನ್ನು ಶೃಂಗೇರಿ ಮಠಕ್ಕೆ ತರಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಸೌಮ್ಯಾ ಭರತ್, ಲೀಲಾ ಮನಮೋಹನ್, ಪ್ರವೀಣ ರೈ, ಮಾಸ್ಟರ್ ಪ್ಲಾೃನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಪವನ್ ಎಂ.ಡಿ., ಲೋಲಾಕ್ಷ ಕೈಕಂಬ ಉಪಸ್ಥಿತರಿದ್ದರು.