ನಂದಳಿಕೆ ದೇವಳದ ಶಿಲಾಮಯ ಮುಹೂರ್ತ, ದಾರು ಮುಹೂರ್ತ, ಸೋದೆ ವಾದಿರಾಜ ಮಠದ ಸಂಸ್ಥಾನ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಪ್ರಮುಖರಾದ ಕೋಟ ಶ್ರೀನಿವಾಸ ಪೂಜಾರಿ, ವಿ.ಸುನೀಲ್ ಕುಮಾರ್, ಕೃಷ್ಣ ವೈ.ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಪ್ರದೀಪ್ ಹೆಗ್ಡೆ, ಶ್ರೀಕಾಂತ್ ರಾವ್ ನಂದಳಿಕೆ ಇದ್ದರು. 
ಉಡುಪಿ

ಸರ್ವರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿ

ನಂದಳಿಕೆಯಲ್ಲಿ ದಾರು ಮುಹೂರ್ತ

ವಿಜಯವಾಣಿ ಸುದ್ದಿಜಾಲ ಕಾರ್ಕಳ

ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವರ ಸಾನ್ನಿಧ್ಯದಲ್ಲಿ ಹೊಸ ಆಲಯ ನಿರ್ಮಾಣಕ್ಕೆ ಎಲ್ಲರೂ ಜತೆಯಾಗಿದ್ದೇವೆ. ಎಲ್ಲರೂ ಜತೆಯಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದಾಗ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ನಂದಳಿಕೆಯ ಮಣ್ಣಿನಲ್ಲಿ ಇದು ನಮ್ಮ ಮನೆಯ ದೇಗುಲ ಎಂದು ಎಲ್ಲರೂ ಜತೆಯಾಗಿ ದುಡಿಯುತ್ತಿರುವುದು ಶ್ಲಾಘನೀಯ ಎಂದು ಶ್ರೀ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು.

ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯ ಜೀರ್ಣೋದ್ಧಾರ ಅಂಗವಾಗಿ ಕ್ಷೇತ್ರದಲ್ಲಿ ಭಾನುವಾರ ಆಯೋಜಿಸಲಾದ ಶಿಲಾಮಯ ಮುಹೂರ್ತ, ದಾರು ಮುಹೂರ್ತ, ಸೋದೆ ವಾದಿರಾಜ ಮಠದ ಸಂಸ್ಥಾನ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವಿ.ಸುನೀಲ್ ಕುಮಾರ್ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ವೈ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ನಂದಳಿಕೆ ಚಾವಡಿ ಅರಮನೆ ಪ್ರದೀಪ್ ಹೆಗ್ಡೆ, ಕಾರ್ಯಾಧ್ಯಕ್ಷ ಶ್ರೀಕಾಂತ್ ರಾವ್ ನಂದಳಿಕೆ, ದೇವಳ ತಂತ್ರಿವರ್ಯ ಮಧ್ವೇಶ್ ತಂತ್ರಿ, ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಬೆಳ್ಮಣ್ ದೇವಾಲಯ ಆಡಳಿತ ಮೊಕ್ತೇಸರ ವಿಘ್ನೇಶ್ ಭಟ್ ಬೆಳ್ಮಣ್, ನಂದಳಿಕೆ ಕ್ಷೇತ್ರದ ಪ್ರಧಾನ ಅರ್ಚಕ ಹರೀಶ್ ತಂತ್ರಿ, ಮುಂಬೈ ಜೀರ್ಣೋದ್ಧಾರ ಸಮಿತಿ ಸಂಚಾಲಕ ರತ್ನಕರ್ ವೈ.ಶೆಟ್ಟಿ ಶ್ರೀಕೃಷ್ಣಧಾಮ ನಂದಳಿಕೆ, ಮಂಗಳೂರು ಜಾಗತಿಕ ಬಂಟರ ಪ್ರತಿಷ್ಠಾನದ ಮಹಿಳಾ ವಿಭಾಗ ಅಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಚಂದ್ರಶೇಖರ್, ರಿತೇಶ್ ಶೆಟ್ಟಿ, ನಿಟ್ಟೆ ಯತಿರಾಜ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಬಾಲಚಂದ್ರ ಶೆಟ್ಟಿ ಕುಡುಂದೂರು, ಕಾನಬೆಟ್ಟು ದಿವಾಕರ್ ಶೆಟ್ಟಿ, ಸೂರ್ಯಕಾಂತ್ ಶೆಟ್ಟಿ ಕೆದಿಂಜೆ, ಕೋಶಾಧಿಕಾರಿ ಶೋಭಾ ಎಸ್.ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಶರಣ್ಯ ತಂತ್ರಿ ಪ್ರಾರ್ಥಿಸಿದರು. ಶೋಧನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ಸುಭಾಷ್ ಕುಮಾರ್ ವಂದಿಸಿದರು. ವಿ.ಕೆ.ರಾವ್ ನಂದಳಿಕೆ ಕಾರ್ಯಕ್ರಮ ನಿರೂಪಿಸಿದರು.

ಸರ್ಕಾರದ ಧಾರ್ಮಿಕ ಧತ್ತಿ ಇಲಾಖೆಯಲ್ಲಿ 34 ಸಾವಿರಕ್ಕೂ ಅಧಿಕ ದೇವಸ್ಥಾನಗಳಿವೆ. ಅದೆಷ್ಟೋ ಮಠ ಮಂದಿರಗಳು ಸಮಾಜದ ಉದ್ಧಾರದ ಕಾರ್ಯದಲ್ಲಿ ತೊಡಗಿವೆ. ದೇವಾಲಯ ಜೀರ್ಣೋದ್ಧಾರ ಆಗಬೇಕಾದರೇ ಇಚ್ಛಾಶಕ್ತಿ, ಪ್ರಯತ್ನ, ಪ್ರಾಮಾಣಿಕತೆ, ಶ್ರದ್ಧೆ ಅಗತ್ಯ.
ಕೋಟ ಶ್ರೀನಿವಾಸ ಪೂಜಾರಿ ಸಂಸದ
ನಂದಳಿಕೆ ಸಿರಿ ಜಾತ್ರೆಯಿಂದ ಈ ದೇಗುಲ ದೊಡ್ಡ ಪ್ರಮಾಣದ ಭಕ್ತರನ್ನು ಆಕರ್ಷಿಸುತ್ತಿದೆ. ಆಡಂಬರ ಇಲ್ಲದೆ ಪಾರಂಪರಿಕತೆ ಉಳಿಸಿಕೊಂಡು ಅಭಿವೃದ್ಧಿ ಪಡೆಯುತ್ತಿರುವ ಕ್ಷೇತ್ರದ ಕಾರ್ಯಕ್ಕೆ ಸರ್ಕಾರದ ವತಿಯಿಂದ ಹಾಗೂ ವೈಯಕ್ತಿಕವಾಗಿ ಸಹಕಾರ ನೀಡಲು ಸಿದ್ಧ.
ವಿ.ಸುನೀಲ್ ಕುಮಾರ್ ಶಾಸಕ