ಉಡುಪಿ ಪರ್ಕಳದ ಸಸ್ಯವನದಲ್ಲಿ ಗಿಡಗಳಿಗೆ ಕಸಿ ಮಾಡುವ ವಿಧಾನದ ಕುರಿತು ರೊ. ಅಶೋಕ್ ನಾಯಕ್ ಪ್ರಾತ್ಯಕ್ಷಿಕೆ ನಡೆಸಿದರು. ರೊ.ಸಂದೀಪಕುಮಾರ್, ರೊ.ಮಂಜುನಾಥ್ ಉಪಾಧ್ಯಾಯ, ರೊ.ಗುರುಪ್ರಸಾದ್ ಕಾಮತ್, ರೊ.ಪ್ರಭಾಕರ್ ಶೆಟ್ಟಿ, ರೊ.ಕೃಷ್ಣಪ್ಪ, ರೊ.ಸುಕೇಶ್ ಕುಂದರ್, ರೊ.ರಾಜೇಶ್ ಡಿ. ಶೆಣೈ, ಲಕ್ಷ್ಮೀ ನಾಯ್ಕ್, ಶಾರದಾ ಇತರರಿದ್ದರು.
* ರೊ. ಅಶೋಕ್ ನಾಯಕ್ ಅಭಿಪ್ರಾಯ
* ಪರ್ಕಳದಲ್ಲಿ ಏರ್ ಲೇಯರಿಂಗ್ ಪ್ರಾತ್ಯಕ್ಷಿಕೆ
ಉಡುಪಿ: ಗಿಡಗಳ ಕಸಿ ಮಾಡುವುದು ಹೇಗೆಂದು ಇಂದಿನ ಜನರಿಗೆ ತಿಳಿದಿಲ್ಲ. ವೃಕ್ಷದ ಯಾವ ಭಾಗದಲ್ಲಿ ಕಸಿ ಮಾಡಬೇಕು, ಕಸಿ ಕಟ್ಟುವ ವಿಧಾನ ಹೇಗೆ, ಏರ್ ಲೇಯರಿಂಗ್ ಕ್ರಮ ಹೇಗಿರುತ್ತದೆ ಮತ್ತು ಕಸಿ ಮಾಡಿದ ಗಿಡಗಳನ್ನು ಉತ್ತಮ ರೀತಿಯಲ್ಲಿ ಬೆಳೆಸುವುದು ಹೇಗೆಂಬ ಜ್ಞಾನ ಅಗತ್ಯ. ಕಸಿ ಮಾಡುವುದೂ ಸಹ ಒಂದು ಕಲೆಯೇ ಆಗಿದೆ ಎಂದು ಸಂಪನ್ಮೂಲ ವ್ಯಕ್ತಿ ರೊ. ಅಶೋಕ್ ನಾಯಕ್ ಅಭಿಪ್ರಾಯಪಟ್ಟರು.
ಉಡುಪಿಯ ಪರ್ಕಳದ ಐಸಿರಿ ಸಸ್ಯವನದ ವಠಾರದಲ್ಲಿ ರೋಟರಿ ಐಸಿರಿ ಪರ್ಕಳ ಹಾಗೂ ರೋಟರಿ ಸಮುದಾಯ ದಳ ಐಸಿರಿ ಆಶ್ರಯದಲ್ಲಿ ಆಯೋಜಿಸಿದ್ದ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಕಸಿ ಪ್ರಾತ್ಯಕ್ಷಿಕೆ ನಡೆಸಿ ಮಾತನಾಡಿದರು.
ರೋಟರಿ ಐಸಿರಿ ಅಧ್ಯಕ್ಷ ರೊ.ಸಂದೀಪಕುಮಾರ್, ರೋಟರಿ ಲೀಡರ್ಶಿಪ್ ಇನ್ಸ್ಟಿಟ್ಯೂಟ್ ಜಿಲ್ಲಾ ಸಭಾಪತಿ ರೊ.ಮಂಜುನಾಥ್ ಉಪಾಧ್ಯಾಯ, ಸ್ಟೀವರ್ಡ್ಶಿಪ್ ಉಪಸಮಿತಿಯ ಜಿಲ್ಲಾ ಉಪಸಭಾಪತಿ ರೊ.ಗುರುಪ್ರಸಾದ್ ಕಾಮತ್, ಸಮುದಾಯ ಸೇವಾ ನಿರ್ದೇಶಕ ರೊ.ಪ್ರಭಾಕರ್ ಶೆಟ್ಟಿ, ಯುವಜನ ಸೇವಾ ನಿರ್ದೇಶಕ ರೊ.ಕೃಷ್ಣಪ್ಪ, ಆರ್ಸಿಸಿ ಕೋ-ಆರ್ಡಿನೇಟರ್ ರೊ.ಸುಕೇಶ್ ಕುಂದರ್, ಕಾರ್ಯದರ್ಶಿ ರೊ. ರಾಜೇಶ್ ಡಿ. ಶೆಣೈ, ಆರ್ಸಿಸಿ ಐಸಿರಿ ಅಧ್ಯಕ್ಷೆ ಲಕ್ಷ್ಮೀ ನಾಯ್ಕ್ ಹಾಗೂ ಕಾರ್ಯದರ್ಶಿ ಶಾರದಾ ಉಪಸ್ಥಿತರಿದ್ದರು.
ಕಸಿ ಮಾಡಿದ ಗಿಡಗಳಿಂದ ಆರು ತಿಂಗಳಿಂದ ವರ್ಷದೊಳಗೆ ಫಲ ಪಡೆಯುವ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಲಾಯಿತು. ರೊ. ರಾಜೇಶ್ ಡಿ. ಶೆಣೈ ಕಾರ್ಯಕ್ರಮ ನಿರ್ವಹಿಸಿದರು.