ಬನ್ನಡ್ಕದಲ್ಲಿ ಕೆಟ್ಟು ನಿಂತ ಡಿಬಿಎಲ್ ಲಾರಿ.
ಮೂಡುಬಿದಿರೆ: ಬನ್ನಡ್ಕ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆದ್ದಾರಿ ಗುತ್ತಿಗೆದಾರ ಡಿಬಿಎಲ್ ಕಂಪನಿಗೆ ಸೇರಿದ ಲಾರಿ ಕೆಟ್ಟು ನಿಂತಿದ್ದು, ಮೂರು ದಿನಗಳಿಂದ ಅದನ್ನು ದುರಸ್ತಿ ಅಥವಾ ಸ್ಥಳಾಂತರಿಸದ ಹಿನ್ನೆಲೆಯಲ್ಲಿ ವಾಹನ ಸವಾರರು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಈ ಪ್ರದೇಶ ಈಗಾಗಲೇ ಅಪಘಾತ ವಲಯವಾಗಿ ಗುರುತಿಸಿಕೊಂಡಿದ್ದು, ಇಂತಹ ಅಪಾಯಕಾರಿ ಸ್ಥಳದಲ್ಲೇ ಹಿಮಾಚಲ ಪ್ರದೇಶ ನೋಂದಣಿಯ ಲಾರಿ ರಸ್ತೆ ಬದಿ ನಿಂತಿದೆ. ಎರಡು ದಿನಗಳು ಕಳೆದರೂ ಸಂಬಂಧಪಟ್ಟ ಡಿಬಿಎಲ್ ಕಂಪನಿ, ಅಧಿಕಾರಿಗಳು ವಾಹನ ದುರಸ್ತಿ ಮಾಡುವ ಅಥವಾ ಅಲ್ಲಿಂದ ತೆರವುಗೊಳಿಸುವ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ವಿಶೇಷವಾಗಿ ರಾತ್ರಿ ವೇಳೆ, ಭಾರಿ ಮಳೆ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಈ ಲಾರಿ ಸಮಯಕ್ಕೆ ಗೋಚರಿಸದಿರುವ ಸಾಧ್ಯತೆ ಇದೆ. ಮಳೆಗೆ ಕಡಿಮೆಯಾಗುವುದರಿಂದ ಅಪಘಾತ ಸಂಭವಿಸುವ ಅಪಾಯ ಮತ್ತಷ್ಟು ಹೆಚ್ಚಿದೆ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು, ಡಿಬಿಎಲ್ ಕಂಪನಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಲಾರಿಯನ್ನು ದುರಸ್ತಿ ಮಾಡಿ ಅಥವಾ ಅಲ್ಲಿಂದ ತೆರವುಗೊಳಿಸಬೇಕು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಎಂಬಿಡಿ_ಜುಲೈ8_2 ಬನ್ನಡ್ಕ ಲಾರಿ
ಬನ್ನಡ್ಕದಲ್ಲಿ ಕೆಟ್ಟು ನಿಂತ ಡಿಬಿಎಲ್ ಲಾರಿ.