ಕಾರ್ನೂರು ಸಂಪರ್ಕಿಸುವ ಕಾಲುದಾರಿ ದುರಸ್ತಿಗೆ ಆಗ್ರಹಿಸಿ ಹಸಿರುಸೇನೆ ನೇತೃತ್ವದಲ್ಲಿ ಸ್ಥಳೀಯರು ಶಾಸಕರಿಗೆ ಮನವಿ ಸಲ್ಲಿಸಿದರು. ಅಮರನಾಥ ಆಳ್ವ, ಭಾಸ್ಕರ ರೈ, ಕೊರಗಪ್ಪ ನಾಯ್ಕ ಮೊದಲಾದವರಿದ್ದರು.  
ಉಡುಪಿ

ಕಾರ್ನೂರು ಕಾಲುದಾರಿ ದುರಸ್ತಿಗೆ ಆಗ್ರಹ

ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡ್ನೂರು ಗ್ರಾಮದ ಚಾರ್ಪಟ್ಟೆ ಪಾದೆಯಿಂದ ಚಾರ್ಪಟ್ಟೆ ಮಸೀದಿ ಸಮೀಪ ಕರ್ನೂರಿಗೆ ಹೋಗುವ ಕಾಲುದಾರಿಯ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಹಸಿರುಸೇನೆಯ ನೇತೃತ್ವದಲ್ಲಿ ಕರ್ನೂರು ಚಾರ್ಪಟ್ಟಿ ಪಾದೆ, ಹಿತ್ಲುಮೂಲೆಯ ನಿವಾಸಿಗಳು ಶಾಸಕ ಅಶೋಕ್ ರೈ ಹಾಗೂ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಚಾರ್ಪಟ್ಟೆ ಪಾದೆಯಿಂದ ಚಾರ್ಪಟ್ಟೆ ಮಸೀದಿ ಬಳಿಯಾಗಿ ಕರ್ನೂರಿಗೆ ಸಂಪರ್ಕಿಸುವ ಕಾಲುದಾರಿಯಲ್ಲಿ ಚಾರ್ಪಟ್ಟೆ ಹಳ್ಳ ಬದಿಯಲ್ಲಿ ಇರುವ ಕಾಲುದಾರಿ ತೀರಾ ದುಸ್ಥಿತಿಯಲ್ಲಿದ್ದು, ಹಳ್ಳಕ್ಕೆ ಸೇತುವೆಯೂ ಇಲ್ಲ. ಈ ಭಾಗದಲ್ಲಿ 40ಕ್ಕೂ ಅಧಿಕ ಮನೆಗಳಿದ್ದು, 30ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾಲುದಾರಿಯಲ್ಲೇ ನಿತ್ಯವೂ ಸಂಚರಿಸುತ್ತಿದ್ದಾರೆ. ಮಳೆಗಾಲದಲ್ಲಿ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರಿಗೆ ಈ ದಾರಿಯಲ್ಲಿ ಸಂಚರಿಸುವುದು ಅಪಾಯವಾಗಿದ್ದು, ಐದು ವರ್ಷಗಳಿಂದ ನಾವು ಈ ಕಾಲು ದಾರಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸಂಬಂಧಪಟ್ಟವರಿಗೆ ಮನವಿ ಮಾಡುತ್ತಿದ್ದರೂ ಅಭಿವೃದ್ಧಿಯಾಗಿಲ್ಲ. ಕೂಡಲೇ ಈ ಕಾಲುದಾರಿ ಸಮಸ್ಯಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಹಸಿರುಸೇನೆಯ ದ.ಕ. ಜಿಲ್ಲಾಧ್ಯಕ್ಷ ಅಮರನಾಥ ಆಳ್ವ ಕರ್ನೂರುಗುತ್ತು, ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕೊಪ್ಪಳ, ನೆಟ್ಟಣಿಗೆ ಮುಡ್ನೂರು ಗ್ರಾಮ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ ಕಲ್ಲಾಜೆ, ನೆಟ್ಟಣಿಗೆ ಮುಡ್ನೂರು ಕಾಂಗ್ರೆಸ್ ವಲಯಾಧ್ಯಕ್ಷ ಮೂಸನ್ ಎನ್., ಗ್ರಾಪಂ ವಾಜಿ ಸದಸ್ಯ ಕುವಾರನಾಥ ಪೂಜಾರಿ, ಸ್ಥಳೀಯರಾದ ಸುಭೋದ್ ರೈ ಕರ್ನೂರು ಬಾವ, ಸವಿತಾ ಬಾಬು ಪೂಜಾರಿ, ಸೌಮ್ಯಾ ಉದಯಕುವಾರ್, ಚಂದ್ರಿಕಾ ರೈ ಹಿತ್ಲುಮೂಲೆ, ದೀನಾ ರೈ ಇತರರು ಇದ್ದರು.