ಉಪ್ಪು ಮಿಶ್ರಿತ ಕಲುಷಿತ ನೀರಿನ ಸಮಸ್ಯೆ ಮತ್ತು ಶುದ್ಧ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ನಾಡ ಗ್ರಾಪಂ ಎದುರು ಪತಿಭಟನೆ ನಡೆಯಿತು. ಪ್ರಮುಖರಾದ ರಾಜೀವ ಪಡುಕೋಣೆ, ಎಚ್.ನರಸಿಂಹ, ರಾಜೇಶ ಬಗ್ವಾಡಿ, ನಾಗರತ್ನಾ ನಾಡ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಪ್ಪು ಮಿಶ್ರಿತ ಕಲುಷಿತ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮತ್ತು ಶುದ್ಧ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಫ್‌ಐ) ಪಡುಕೋಣೆ ಟಕ, ಜನವಾದಿ ಮಹಿಳಾ ಸಂಟನೆ ನಾಡ ವಲಯ ನೇತೃತ್ವದಲ್ಲಿ ಗ್ರಾಮಸ್ಥರು ನಾಡ ಗ್ರಾಮ ಪಂಚಾಯಿತಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ನಾಡ ಗ್ರಾಪಂ ವ್ಯಾಪ್ತಿಯ ನಾಡ, ಹಡವು, ಪಡುಕೋಣೆ, ಬಡಾಕೆರೆ ಮತ್ತು ಹೊಸಾಡು ಗ್ರಾಪಂ ವ್ಯಾಪ್ತಿಯ ಸೇನಾಪುರ ಗ್ರಾಮಗಳಲ್ಲಿ ಉಪ್ಪು ಮಿಶ್ರಿತ ಹಾಗೂ ಕಲುಷಿತ ಕುಡಿಯುವ ನೀರು ಪೂರೈಕೆ ವಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯ ನಿರ್ಣಯಗಳನ್ನು ತಕ್ಷಣ ಜಾರಿ ವಾಡಬೇಕು. ಸೌಪರ್ಣಿಕ ನದಿಯ ಹೇರೂರು ಕೋಣ್ಕಿ ಭಾಗದಲ್ಲಿ ವೆಂಟೆಡ್ ಡ್ಯಾಮ್ ನಿರ್ಮಿಸಬೇಕು. ನಾಡ, ಹಡವು, ಬಡಾಕೆರೆ ಹಾಗೂ ಸೇನಾಪುರ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು. ಬೇಸಿಗೆಯಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ವಾಡಬೇಕು. ಅಧಿಕಾರಿಗಳ ನಿರ್ಲಕ್ಷೃ ಕುರಿತು ತನಿಖೆ ನಡೆಸಬೇಕು ಎಂಬಿತ್ಯಾದಿ ಆಗ್ರಹಗಳ ಮನವಿಯನ್ನು ನಾಡ ಪಿಡಿಒಗೆ ಸಲ್ಲಿಸಲಾಯಿತು.
ಡಿವೈಎಫ್‌ಐ ಮುಖಂಡ ರಾಜೀವ ಪಡುಕೋಣೆ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಎಚ್.ನರಸಿಂಹ, ಯುವ ಸಂಟನೆ ಕಾರ್ಯದರ್ಶಿ ರಾಜೇಶ ಬಗ್ವಾಡಿ, ಜನವಾದಿ ಮಹಿಳಾ ಸಂಟನೆ ತಾಲೂಕು ಅಧ್ಯಕ್ಷೆ ನಾಗರತ್ನಾ ನಾಡ, ವಲಯ ಅಧ್ಯಕ್ಷೆ ಮನೋರವಾ ಭಂಡಾರಿ, ಕಾರ್ಯದರ್ಶಿ ಶೋಭಾ, ಆದಿವಾಸಿ ಹಕ್ಕುಗಳ ಸಮಿತಿ ಮುಖಂಡ ಶ್ರೀಧರ ನಾಡ, ರೈತ ಸಂದ ಮುಖಂಡ ರೆಬೆಲ್ಲೊ, ನಿಸರ್ಗ ಪಡುಕೋಣೆ, ಶೀಲಾವತಿ, ಜನಾರ್ದನ ಹೆಬ್ಬಾರ್ ಮೊದಲಾದವರಿದ್ದರು.