ಆಳ ಸಮುದ್ರ ಮೀನುಗಾರಿಕೆ ನಿಷೇಧ ಹಿನ್ನೆಲೆಯಲ್ಲಿ ಕಾಸರಗೋಡು ಕಸಬಾ ಕಡಪ್ಪುರದಲ್ಲಿ ಲಂಗರು ಹಾಕಿರುವ ದೋಣಿಗಳು. 
ಉಡುಪಿ

ಕೇರಳಂನಲ್ಲಿ ಆಳಸಮುದ್ರ ಮೀನುಗಾರಿಕೆ ನಿಷೇಧ

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಮೀನುಗಳ ಸಂತಾನೋತ್ಪತ್ತಿ ಹೆಚ್ಚಿಸಿ ಮತ್ಸ ್ಯ ಸಂಪತ್ತು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೇರಳಂನಲ್ಲಿ ಮಂಗಳವಾರ ಮಧ್ಯರಾತ್ರಿಯಿಂದಲೇ ಆಳಸಮುದ್ರ ಮೀನುಗಾರಿಕೆ ನಿಷೇಧ ಜಾರಿಗೊಂಡಿದ್ದು ಜುಲೈ 31ರವರೆಗೆ ನಿಷೇಧ ಇರಲಿದೆ. ಮಂಗಳವಾರ ಸಂಜೆಯೇ ದೋಣಿಗಳನ್ನು ತಂಡಕ್ಕೆ ತಂದ ಮೀನುಗಾರರು ಸುರಕ್ಷಿತ ತಾಣಗಳಲ್ಲಿ ಲಂಗರು ಹಾಕಿದ್ದಾರೆ.
ರಾಜ್ಯಾದ್ಯಂತ ಆಳಸಮುದ್ರ ಮೀನುಗಾರಿಕೆ ನಿಷೇಧ ಜುಲೈ 31ರ ತನಕ ಮುಂದುವರಿಯಲಿದ್ದು, ಈ ಬಾರಿ ಎರಡು ತಿಂಗಳ ಬದಲು 52 ದಿನಗಳಿಗೆ ಮೀನುಗಾರಿಕೆ ನಿಷೇಧ ಇಳಿಸಲಾಗಿದೆ. ನಿಷೇಧ ಉಲ್ಲಂಸಿದವರ ದೋಣಿಗಳನ್ನು ಜಪ್ತಿ ಮಾಡುವ ಜತಗೆ ಮೀನುಗಾರಿಕೆ ನಡೆಸುವವರ ವಿರುದ್ಧ ರಾಜ್ಯ ಮೀನುಗಾರಿಕೆ ಇಲಾಖೆ ಕಠಿಣ ಕ್ರಮಕೈಗೊಳ್ಳಲಿದೆ.
ಮೀನುಗಾರಿಕೆ ಇಲಾಖೆಯ ಲೆಕ್ಕಾಚಾರದಂತೆ ಕಾಸರಗೋಡು ಜಿಲ್ಲೆಯಲ್ಲಿ 129 ಯಾಂತ್ರೀಕೃತ ಮೀನುಗಾರಿಕಾ ಬೋಟ್‌ಗಳಿವೆ. ಕಾಸರಗೋಡು ಕಸಬಾದ 12, ಮಂಜೇಶ್ವರ 23, ಕುಂಬಳೆ ಆರಿಕ್ಕಾಡಿ 4, ಹೊಸದುರ್ಗ 18, ತೈಕಡಪ್ಪುರ 22, ನೀಲೇಶ್ವರ 13, ಮಡಿಕ್ಕರ 30 ಮತ್ತು ಪಡನ್ನ ಕಡಪ್ಪುರದಲ್ಲಿ 7 ಯಾಂತ್ರೀಕೃತ ಬೋಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಹೊರತಾಗಿ ಜಿಲ್ಲೆಯ ವಿವಿಧ ಮೀನುಗಾರಿಕಾ ಕೇಂದ್ರಗಳಲ್ಲಿ 200 ಯಾಂತ್ರೀಕೃತ ಬೋಟ್‌ಗಳು ಮೀನುಗಾರಿಕೆಗಾಗಿ ಆಳ ಸಮುದ್ರಕ್ಕೆ ತೆರಳುತ್ತವೆ.
ಜಿಲ್ಲೆಯಲ್ಲಿ ಬೆಸ್ತ ಸಮುದಯದವರು ಮತ್ತು ಇತರ ಕಾರ್ಮಿಕರು ಸಹಿತ 16 ಸಾವಿರಕ್ಕೂ ಹೆಚ್ಚು ಮಂದಿ ಮೀನುಗಾರಿಕೆಯನ್ನೇ ಕಸುಬಾಗಿಸಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ.