ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಿ ನೀರು ಸಂಗ್ರಹಿಸಿರುವುದು. 
ಉಡುಪಿ

ಅವಧಿಗೂ ಮುನ್ನ ಡ್ಯಾಂ ಬಂದ್!

ನದಿಗಳ ತೀರದ ರೈತರಿಗೆ ಸಂಕಷ್ಟ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ

ಕರಾವಳಿ ಜಿಲ್ಲೆಯಲ್ಲಿ ನೀರು ಸಂಗ್ರಹಿಸಲು ಸಣ್ಣ ನೀರಾವರಿ ಇಲಾಖೆ ಪ್ರತೀ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಅಣೆಕಟ್ಟುಗಳ ಕಿಂಡಿಗಳನ್ನು ಮುಚ್ಚಿ ಮೇ ತಿಂಗಳಲ್ಲಿ ತೆರೆಯುವುದು ವಾಡಿಕೆ. ಆದರೆ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಅಣೆಕಟ್ಟುಗಳ ಕಿಂಡಿಗಳನ್ನು ಮುಚ್ಚುವ ಕಾಮಗಾರಿ ಭರದಿಂದ ಸಾಗಿದೆ. ಪರಿಣಾಮ ನದಿ ತೀರದ ಗದ್ದೆಗಳು ಮುಳುಗಡೆಯಾಗಿ ತೆನೆದೂಗಿದ್ದ ಭತ್ತದ ಪೈರು ನೆಲಕಚ್ಚಿವೆ.

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಉಪ್ಪೂರು ಬಳಿಯ ಹೇರೂರು ಭಾಗದಲ್ಲಿ ನದಿ ನೀರು ಹರಿದು ಬಂದ ಕಾರಣ ಭತ್ತದ ಬೆಳೆದಿದ್ದ ಗದ್ದೆಗಳು ಜಲಾವೃತಗೊಂಡಿವೆ. ನೂರಾರು ಎಕರೆ ಭತ್ತದ ಬೆಳೆ ಕೊಳೆಯುವ ಸ್ಥಿತಿಗೆ ತಲುಪಿದ್ದು, ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ರೈತರ ಬದುಕು ಅತಂತ್ರವಾಗಿದೆ.

ಕಾರ್ಮಿಕರ ಕೊರೆತೆಯಿಂದಾಗಿ ಬಹುತೇಕ ರೈತರು ಯಾಂತ್ರೀಕರಣಕ್ಕೆ ಒಗ್ಗಿಕೊಂಡಿದ್ದಾರೆ. ನದಿ ತೀರದ ಗದ್ದೆಗಳಿಗೆ ನೀರು ನುಗ್ಗಿರುವುದರಿಂದ ಕಟಾವು ಯಂತ್ರಗಳು ಹೂತು ಹೋಗುವ ಅಪಾಯ ಎದುರಾಗಿದೆ. ನೀರಿನಲ್ಲಿ ಮುಳುಗಿರುವ ಪೈರನ್ನು ಕಟಾವು ವಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.

ಕೈಗೆ ಬಂದ ತುತ್ತು ಬಾಯಿಗಿಲ್ಲ!

ಈ ವರ್ಷ ಮಳೆ ಕಡಿಮೆಯಾಗಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲಾಡಳಿತ ಕಿಂಡಿ ಅಣೆೆಕಟ್ಟುಗಳಿಗೆ ಹಲಗೆ ಅಳವಡಿಸುವಂತೆ ಸಣ್ಣ ನೀರಾವರಿ ಇಲಾಖೆಗೆ ಕೆಲ ದಿನಗಳ ಹಿಂದೆ ಸೂಚನೆ ನೀಡಿತ್ತು. ಆದರೆ ಪರಿಸರದ ರೈತರ ಜತೆಗೆ ಪರಾಮರ್ಶೆ ನಡೆಸದೆ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಿರುವ ಕಾರಣ ಅವಾಂತರವಾಗಿದೆ. ಇದರಿಂದಾಗಿ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ‘ಕೈಗೆ ಬಂದ ತುತ್ತು ಬಾಯಿಗಿಲ್ಲ’ ಎಂಬಂತಾಗಿದೆ. ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರವನ್ನು ತುರ್ತಾಗಿ ನೀಡಬೇಕು ಎಂಬ ಆಗ್ರಹ ಕೃಷಿಕರ ವಲಯದಲ್ಲಿ ಕೇಳಿಬಂದಿದೆ.

ಬಾಗಿಲು ಅಳವಡಿಗೆಗೆ ವೇಗ

ಬ್ರಹ್ಮಾವರ ತಾಲೂಕಿನಲ್ಲಿ ಹರಿದು ಬರುವ ನದಿಗಳಾದ ಸೀತಾ, ಸ್ವರ್ಣಾ ಮತ್ತು ಮಡಿಸಾಲು ಹೊಳೆಗೆ ನಿರ್ಮಿಸಲಾದ ಕಿಂಡಿ ಅಣೆಕಟ್ಟಿಗೆ ೈಬರ್ ಬಾಗಿಲು ಅಳವಡಿಸುವ ಕೆಲಸ ಕಳೆದ ಕೆಲವು ದಿನಗಳಿಂದ ವೇಗ ಪಡೆದಿದ್ದು, ಕೆಲವು ಕಡೆಯಲ್ಲಿ ಈಗಾಗಲೇ ಬಾಗಿಲು ಅಳವಡಿಸಲಾಗಿದೆ. ಕರಾವಳಿ ಜಿಲ್ಲೆಯ ಕಿಂಡಿ ಅಣೆಕಟ್ಟುಗಳಲ್ಲಿ ಪ್ರಥಮ ಎನ್ನಲಾದ ಬಾರಕೂರು ಹನೆಹಳ್ಳಿ ಬಳಿಯಲ್ಲಿ ವಾಡಲಾದ ನೀಲಾವರ ಕಿಂಡಿ ಅಣೆಕಟ್ಟಿಗೆ ಈಗಾಗಲೇ ತಳಹಂತದ ನಾಲ್ಕು ಕಿಂಡಿಗಳನ್ನು ಅಳವಡಿಸಲಾಗಿದ್ದು, ಇನ್ನು ಉಳಿದ ಕಿಂಡಿಗಳನ್ನು ಮುಚ್ಚಲು ಸಿದ್ಧತೆಗಳು ನಡೆಯುತ್ತಿವೆ.

ಪೂರ್ಣ ಪ್ರಮಾಣದಲ್ಲಿ ಮುಚ್ಚದಿರಿ

ಕೆಲವು ವರ್ಷಗಳಿಂದ ಮಳೆ ಕಡಿಮೆಯಾಗಿದ್ದು, ಅಕಾಲದಲ್ಲಿ ಮಳೆ ಬರುವ ಸಾಧ್ಯತೆ ಇರುವುದರಿಂದ ಕೃಷಿ ಹಿತಾಸಕ್ತಿಯಿಂದಲೇ ಅಲ್ಲಲ್ಲಿ ನಿರ್ಮಿಸಿರುವ ಅಣೆಕಟ್ಟುಗಳ ಕಿಂಡಿಗಳನ್ನು ಪೂರ್ಣ ಪ್ರಮಾಣದಲ್ಲಿ ಮುಚ್ಚದೆ ಪ್ರತೀ ವರ್ಷದಂತೆ ಡಿಸೆಂಬರ್ ತಿಂಗಳಲ್ಲಿ ಹಾಕಿದರೆ ಕೃಷಿಕರಿಗೆ ಉಪಯುಕ್ತವಾಗಲಿದೆ. ಒಂದು ವೇಳೆ ನದಿಗಳ ಒಳಹರಿವು ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಲ್ಲಿ ಸ್ಥಳೀಯ ರೈತರೊಂದಿಗೆ ಪರಾಮರ್ಶೆ ನಡೆಸಿ ಹಲಗೆ ಅಳವಡಿಸುವುದು ಸೂಕ್ತ ಎಂಬ ಬೇಡಿಕೆ ಸಂತ್ರಸ್ತರಿಂದ ಕೇಳಿಬಂದಿದೆ.

ಕೃಷಿ ಮಾಡುವವರೇ ಕಡಿಮೆಯಾಗಿ ಭತ್ತವನ್ನು ಬೆಳೆಯುವ ಗದ್ದೆಗಳು ಬಹುಮಹಡಿ ಕಟ್ಟಡವಾಗುತ್ತಿರುವ ಕಾಲಘಟ್ಟದಲ್ಲಿ ಹೇರೂರು, ನೀಲಾವರ ನದಿ ತೀರದಲ್ಲಿ ಬೆಳೆದ ಹಲವು ಎಕರೆ ಭತ್ತದ ಬೆಳೆಯನ್ನು ಮುಳುಗಿಸಿ ರೈತರ ಅನ್ನದ ಬಟ್ಟಲ್ಲನ್ನೇ ನದಿಪಾಲು ಮಾಡಲಾಗಿದೆ. ಗದ್ದೆಗಳು ಪೂರ್ತಿ ನೀರು ತುಂಬಿದ್ದು, ಪೈರು ಸಹಿತ ಸಲು ಕೊಳೆತು ಉದುರುತ್ತಿದೆ. ರೈತರಿಗಾದ ನಷ್ಟಕ್ಕೆ ಹೊಣೆ ಯಾರು? ಎಂಬ ಸಂತ್ರಸ್ತರ ಪ್ರಶ್ನೆಗೆ ತುರ್ತಾಗಿ ಉತ್ತರ ಲಭಿಸಬೇಕಿದೆ.
ಮಂಜುನಾಥ ಪೂಜಾರಿ ಎಳ್ಳಂಪಳ್ಳಿ ಕೃಷಿಕ