ಹರಿನಾರಾಯಣ ಬಂಡಿ ಪೆರ್ಡೂರು ಅವರಿಗೆ ಸೌಖ್ಯ ಯೋಗ ಭಾಗ್ಯ ಬಿರುದು ನೀಡಿ ಸನ್ಮಾನಿಸಲಾಯಿತು. ಸೌಖ್ಯವನದ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ್ ಪೂಜಾರಿ, ಪಾಟೀಲ್ ಕ್ಲೋತ್ ಸ್ಟೋರ್ ಮಾಲೀಕ ಗಣೇಶ್ ಪಾಟೀಲ್ ಮೊದಲಾದವರಿದ್ದರು. 
ಉಡುಪಿ

ಒತ್ತಡದ ನಿವಾರಣೆಗೆ ಪ್ರತಿದಿನ ಯೋಗಾಭ್ಯಾಸ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕ ಹಾಗೂ ಪಾಟೀಲ್ ಕ್ಲೋತ್ ಸ್ಟೋರ್ ವಿಠಲ ಆರ್ಕೆಡ್ ಪರ್ಕಳ ಆಶ್ರಯದಲ್ಲಿ ಯೋಗ ದಿನ ಪರೀಕ ಸೌಖ್ಯವನದಲ್ಲಿ ಭಾನುವಾರ ಆಚರಿಸಲಾಯಿತು.
ಬೆಳಗ್ಗೆ 6ರಿಂದ 7ರವರೆಗೆ ಸೌಖ್ಯವನದ ಎದುರು ಆಸ್ಪತ್ರೆಯಲ್ಲಿ 200ಕ್ಕಿಂತಲೂ ಹೆಚ್ಚು ಸಾಧಕರು, ಸಿಬ್ಬಂದಿ ಹಾಗೂ ಆಸುಪಾಸಿನ ಸಾರ್ವಜನಿಕರು ಜತೆಯಾಗಿ ಯೋಗಾಭ್ಯಾಸ ನಡೆಸಿದರು.
ಆಸ್ಪತ್ರೆಯ ಕ್ಷೇಮ ಹಾಲ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸೌಖ್ಯವನದ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ್ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಯೋಗ ವಿಶ್ವಮಾನ್ಯವಾಗಿದೆ. ಮಾನವನ ದೈನಂದಿನ ಚಟುವಟಿಕೆಗಳಲ್ಲಿ ಯೋಗ ಅತ್ಯಂತ ಪ್ರಾಮುಖ್ಯ ಪಡೆದಿದೆ. ಒತ್ತಡದ ದಿನಗಳಲ್ಲಿ ಪ್ರತಿಯೊಬ್ಬರೂ ದಿನದ ಒಂದು ಘಂಟೆಯಾದರೂ ಯೋಗಾಭ್ಯಾಸ ನಡೆಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಪರ್ಕಳದ ಪಾಟೀಲ್ ಕ್ಲೋತ್ ಸ್ಟೋರ್ ಮಾಲೀಕ ಗಣೇಶ್ ಪಾಟೀಲ್ ಮಾತನಾಡಿದರು. ಧಾರವಾಡ ಜಿಲ್ಲೆಯ ಸರ್ಕಲ್ ಇನ್‌ಸ್ಪೆಕ್ಟರ್ ಮಹಮ್ಮದ್ ರಫೀಕ್ ಕಾರ್ಯಕ್ರಮ ಉದ್ಘಾಟಿಸಿ. ಹರಿನಾರಾಯಣ ಬಂಡಿ ಪೆರ್ಡೂರು ಅವರಿಗೆ ಸೌಖ್ಯ ಯೋಗ ಭಾಗ್ಯ ಬಿರುದು ನೀಡಿ ಸನ್ಮಾನಿಸಲಾಯಿತು.
ಯೋಗ ವಿಭಾಗದ ಮುಖ್ಯಸ್ಥ ಡಾ.ಶೋಭಿತ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸೌಖ್ಯವನದ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ವಿಭಾಗದ ನಾಗರಾಜ್ ವಂದಿಸಿದರು. ಕಾರ್ಯಕ್ರಮದ ಕೊನೇಯಲ್ಲಿ ಕಿರಿಯ ವೈದ್ಯರಿಂದ ಯೋಗ ಪ್ರಾತ್ಯಕ್ಷಿಕೆ ನಡೆದು ಸ್ವಸ್ತಿ ಮಂತ್ರದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.