ಉಡುಪಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸೈಕಲ್ ರೇಸ್ ಸ್ಪರ್ಧೆಗೆ ಟೇಬಲ್ ಟೆನಿಸ್ ಕ್ರೀಡಾಪಟು ಪೂರ್ಣಿಮಾ ಭೋಜರಾಜ್, ಸೈಕ್ಲಿಸ್ಟ್ ಗ್ಲಿಯೊನೋ ಡಿಸೋಜಾ ಚಾಲನೆ ನೀಡಿದರು. ಅಬೀದ್ ಗದ್ಯಾಳ, ಆರ್.ರವೀಂದ್ರ, ಶುಭಾ, ಡಾ. ವಿಭಾ ಶೆಟ್ಟಿ, ಡಾ. ಹರೀಶ್ ನಾಯಕ್, ಡಾ. ರಾಜೇಶ್ ಭಕ್ತ, ಡಾ. ಗುರುರಾಜ್ ಇತರರಿದ್ದರು.
* ಉಡುಪಿ ಜಿಲ್ಲಾ ಮಟ್ಟದ ರೇಸ್ ಉದ್ಘಾಟನೆ
* ತುಂತುರು ಮಳೆಯಲ್ಲೇ ಸ್ಪರ್ಧೆ
ಉಡುಪಿ: ಉಡುಪಿಯ ಅಜ್ಜರಕಾಡುನಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರತೀಯ ಸೈಕಲ್ ಫೆಡರೇಷನ್, ಜಿಲ್ಲಾ ಯುವಜನ ಹಾಗೂ ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್, ಉಡುಪಿ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ಭಾನುವಾರ (ಜೂ.14) 'ಅಸ್ಮಿತಾ-2026- ಮಹಿಳಾ ಸೈಕಲ್ ಸಿಟಿ ಲೀಗ್' ಜಿಲ್ಲಾ ಮಟ್ಟದ ಸೈಕಲ್ ರೇಸ್-ಸ್ಪರ್ಧೆ ಆಯೋಜಿಸಲಾಗಿತ್ತು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಉಡುಪಿ ಜಿಲ್ಲಾ ಡಿಡಿಎಲ್ ಆರ್.ರವೀಂದ್ರ, ರಾಷ್ಟ್ರಮಟ್ಟದ ಟೇಬಲ್ ಟೆನಿಸ್ ಕ್ರೀಡಾಪಟು ಪೂರ್ಣಿಮಾ ಭೋಜರಾಜ್, ರಾಷ್ಟ್ರಮಟ್ಟದ ಸೈಕ್ಲಿಸ್ಟ್ ಗ್ಲಿಯೊನೋ ಡಿಸೋಜಾ, ರಾಜ್ಯ ಮಟ್ಟದ ಸೈಕ್ಲಿಸ್ಟ್ ಶುಭಾ, ದಂತ ವೈದ್ಯರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಡಾ. ವಿಭಾ ಶೆಟ್ಟಿ, ಖ್ಯಾತ ಮೂಳೆ ತಜ್ಞ ಡಾ. ಹರೀಶ್ ನಾಯಕ್, ಡಾ. ರಾಜೇಶ್ ಭಕ್ತ ಸೈಕಲ್ ರೇಸ್ಗೆ ಚಾಲನೆ ನೀಡಿದರು.
13ರಿಂದ 16 ವರ್ಷ, 17ರಿಂದ 18 ವರ್ಷ ಹಾಗೂ 19 ವರ್ಷಕ್ಕಿಂತ ಮೇಲ್ಪಟ್ಟು ಒಟ್ಟು ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಜಿಲ್ಲಾ ಪೊಲೀಸ್ ಇಲಾಖೆಯ ಸಹಕಾರದಲ್ಲಿ ಹಾಗೂ ಮಳೆಯ ನಡುವೆಯೂ ಸ್ಪರ್ಧೆ ಯಶಸ್ವಿಯಾಗಿ ಸಂಪನ್ನಗೊಂಡಿತು. ವಿಜೇತರಿಗೆ ಪದಕ, ಪ್ರಶಸ್ತಿ ಪತ್ರ ನೀಡಲಾಯಿತು.
ಉಡುಪಿ ಜಿಲ್ಲಾ ಅಮೆಚೂರ್ ಸೈಕಲ್ಲಿಂಗ್ ಅಸೋಸಿಯೇಷನ್ನ ಅಧ್ಯಕ್ಷ ಡಾ. ಗುರುರಾಜ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರವಿಚಂದ್ರ ಉಡುಪ ವಂದಿಸಿದರು.