ಸಾಂದರ್ಭಿಕ ಚಿತ್ರ 
ಉಡುಪಿ

ಬ್ಯಾಂಕ್​ ಕೆವೈಸಿ ಅಪ್ಡೇಟ್​ ನೆಪದಲ್ಲಿ ರೂ. 17.50 ಲಕ್ಷ ಸೈಬರ್​ ವಂಚನೆ

ಬ್ಯಾಂಕ್​ ಅಧಿಕಾರಿ ಎಂದು ನಂಬಿಸಿ ಕೆವೈಸಿ ಅಪ್ಡೇಟ್​ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ವಾಟ್ಸಾಪ್​ ಮೂಲಕ ಎಪಿಕೆ ಫೈಲ್​ ಕಳುಹಿಸಿ ಬರೋಬ್ಬರಿ 17.50 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಉಡುಪಿ: ಬ್ಯಾಂಕ್​ ಅಧಿಕಾರಿ ಎಂದು ನಂಬಿಸಿ ಕೆವೈಸಿ ಅಪ್ಡೇಟ್​ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ವಾಟ್ಸಾಪ್​ ಮೂಲಕ ಎಪಿಕೆ ಫೈಲ್​ ಕಳುಹಿಸಿ ಬರೋಬ್ಬರಿ 17.50 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕುಕ್ಕಿಕಟ್ಟೆ ನಿವಾಸಿ ಅಜಯ್​ ಜಗದೀಶ್​ ವಂಚನೆಗೊಳಗಾದ ವ್ಯಕ್ತಿ. ಇವರ ವಾಟ್ಸಾಪ್​ ನಂಬರ್​ಗೆ ಕರೆ ಹಾಗೂ ಸಂದೇಶ ಕಳುಹಿಸಿದ್ದ 'ಶಿವಕುಮಾರ್​' ಎಂಬ ಅಪರಿಚಿತ ವ್ಯಕ್ತಿ, ತಾನು ಸೌತ್​ ಇಂಡಿಯನ್​ ಬ್ಯಾಂಕ್​ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದ. ಬ್ಯಾಂಕ್​ ಖಾತೆಯ ಕೆವೈಸಿ ಅಪ್ಡೇಟ್​ ಮಾಡಬೇಕೆಂದು ಹೇಳಿ ವಾಟ್ಸಾಪ್​ನಲ್ಲಿ ಫೈಲ್​ ಹಾಗೂ ಲಿಂಕ್​ ಕಳುಹಿಸಿಕೊಟ್ಟಿದ್ದ. ಇದನ್ನು ನಿಜವೆಂದು ನಂಬಿದ ಅಜಯ್​ ಲಿಂಕ್​ನಲ್ಲಿ ತಮ್ಮ ಸೌತ್​ ಇಂಡಿಯನ್​ ಬ್ಯಾಂಕ್​ ಖಾತೆಯ ವಿವರಗಳನ್ನು ಭರ್ತಿ ಮಾಡಿದ್ದರು.

ಮತ್ತೆ ಕರೆ ಮಾಡಿದ ಅಪರಿಚಿತರು ದಿನನಿತ್ಯದ ವಹಿವಾಟಿನ ಮಿತಿ ಹೆಚ್ಚಿಸುವ ನೆಪದಲ್ಲಿ ವಂಚಕರು ಅಜಯ್​ ಅವರ ಐಸಿಐಸಿಐ ಬ್ಯಾಂಕ್​ ಖಾತೆಯ ವಿವರಗಳನ್ನು ಪಡೆದುಕೊಂಡಿದ್ದರು. ನಂತರ ಐಸಿಐಸಿಐ ಬ್ಯಾಂಕ್​ ಖಾತೆಯಿಂದ ಹಂತ ಹಂತವಾಗಿ ವಿವಿಧ ಖಾತೆಗಳಿಗೆ ಒಟ್ಟು 17.50 ಲಕ್ಷ ರೂಪಾಯಿ ವರ್ಗಾವಣೆಯಾಗಿದೆ. ಈ ಬಗ್ಗೆ ಉಡುಪಿ ಸೆನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.