ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುದ್ದು ರಾಧಾ-ಮುದ್ದು ಕೃಷ್ಣ ಛದ್ಮವೇಷ ಸ್ಪರ್ಧೆ ನಡೆಯಿತು. ಕೆ.ಅಣ್ಣಪ್ಪ ಶೆಣೈ, ಗೋಪಾಲಕೃಷ್ಣ ಪ್ರಭು, ಗಣಪತಿ ಪ್ರಭು, ವೈಷ್ಣವಿ ಕಾಮತ್​, ವಿದ್ಯಾ ಪೈ, ರೇಶ್ಮಾ ಪ್ರಭು, ಕೆ.ವಿನಾಯಕ್​ ಕಿಣಿ, ಸಮರ್ಥರಾಜ್​, ಶಾಲೆಯ ಶಿಕ್ಷಕರು ಇದ್ದರು. 
ಉಡುಪಿ

ಭಕ್ತಿ-ಪ್ರೀತಿಯ ಸಂಕೇತ ರಾಧಾ-ಕೃಷ್ಣ

ಉಡುಪಿ ರೋಟರಿ ಅಧ್ಯಕ್ಷ ಗೋಪಾಲಕೃಷ್ಣ ಪ್ರಭು ಅಭಿಪ್ರಾಯ

* ಇಂದ್ರಾಳಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆ

ಉಡುಪಿ: ಮಕ್ಕಳೆಂದರೆ ಎಲ್ಲರಿಗೂ ಇಷ್ಟ. ಅವರನ್ನು ದೇವರಿಗೆ ಸಮಾನ ಎನ್ನುತ್ತೇವೆ. ಅಂತಹ ಚಿಣ್ಣರಿಗೆ ದೇವರ ವೇಷ&ಭೂಷಣ ತೊಡಿಸಿದರೆ ಅವರು ಇನ್ನಷ್ಟು ಸುಂದರವಾಗಿ ಕಂಗೊಳಿಸುತ್ತಾರೆ. ಕೃಷ್ಣ ಮತ್ತು ರಾಧೆ ಭಕ್ತಿ-ಪ್ರೀತಿ, ಸಂಸ್ಕೃತಿಯ ಸಂಕೇತವಾಗಿದ್ದು, ಪುಟಾಣಿಗಳಿಗೆ ಅವರ ಛದ್ಮವೇಷ ಸ್ಪರ್ಧೆ ಆಯೋಜಿಸಿರುವುದು ಸಂತಸದ ವಿಚಾರ ಎಂದು ಉಡುಪಿ ರೋಟರಿ ಅಧ್ಯಕ್ಷ ರೊ.ಗೋಪಾಲಕೃಷ್ಣ ಪ್ರಭು ತಿಳಿಸಿದರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾದ್ಯಮ ಪ್ರೌಢಶಾಲೆಯಲ್ಲಿ ಇಂಟರ್ಯಾಕ್ಟ್​ ಕ್ಲಬ್​ ವತಿಯಿಂದ ಮತ್ತು ರೋಟರಿ ಉಡುಪಿ ಪ್ರಾಯೋಜಕತ್ವದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಸಂಸ್ಥೆಯ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಮಂಗಳವಾರ (ಸೆ.1) ಆಯೋಜಿಸಿದ್ದ ಮುದ್ದು ರಾಧಾ-ಮುದ್ದು ಕೃಷ್ಣ ಛದ್ಮವೇಷ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಉಡುಪಿ ರೋಟರಿ ಕ್ಲಬ್​ನ ಕಾರ್ಯದರ್ಶಿ ಗಣಪತಿ ಪ್ರಭು, ರಕ್ಷಕ-ಶಿಕ್ಷಕ ಸಂಘದ ಕೋಶಾಧಿಕಾರಿ ವೈಷ್ಣವಿ ಕಾಮತ್​, ಶಾಲೆಯ ಆಡಳಿತ ಮಂಡಳಿಯ ಸದಸ್ಯೆ ವಿದ್ಯಾ ಅಮರ್​ ಪೈ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ. ವಿನಾಯಕ್​ ಕಿಣಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಶ್ಮಾ ಪ್ರಭು, ಇಂಟರ್ಯಾಕ್ಟ್​ ಕ್ಲಬ್​ನ ಅಧ್ಯಕ್ಷ ಸಮರ್ಥರಾಜ್​, ಕಾರ್ಯದರ್ಶಿ ರಿಮಾ ರಾವ್​, ಇಂಟರಾಕ್ಟ್​ ಕ್ಲಬ್​ನ ಸಂಯೋಜಕಿ ರೇಣುಕಾ ಖಾರ್ವಿ, ರೋಟರಿ ಸದಸ್ಯರು ಉಪಸ್ಥಿತರಿದ್ದರು. 
ಸಂಜನಾ, ಧನ್ವಿತಾ, ಕೀರ್ತನಾ, ಶ್ರೀಮಾಯಿ ಪ್ರಾರ್ಥಿಸಿದರು. ರಿಮಾ ಸ್ವಾಗತಿಸಿದರು. ಭೂಮಿಕಾ ವಂದಿಸಿದರು. ಶೃತಿ ಕಾರ್ಯಕ್ರಮ ನಿರೂಪಿಸಿದರು. 76 ಪುಟಾಣಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಶಿಕ್ಷಕರು ಸಹಕರಿಸಿದರು.