ಬಿಜೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಸಿಇಒ ವಿಷ್ಣು ಆರ್.ಪೈ ವಿಜಯವಾಣಿ ವಿದ್ಯಾರ್ಥಿಮಿತ್ರ ದಿನಪತ್ರಿಕೆ ವಿತರಿಸಿದರು. ಪ್ರಮುಖರಾದ ಚಂದಯ್ಯ ಶೆಟ್ಟಿ, ಯಶೋದಾ, ಮಹದೇವಪ್ಪ ಮೊದಲಾದವರಿದ್ದರು. 
ಉಡುಪಿ

ವಿಜಯವಾಣಿಯಿಂದ ಪ್ರಚಲಿತ ವಿದ್ಯವಾನ ಅರಿವು

ಇಂದಿರಾ ಎನ್ ಕೆ

ಬೈಂದೂರು: ವಿದ್ಯಾರ್ಥಿಗಳಲ್ಲಿ ದಿನನಿತ್ಯದ ಪ್ರಚಲಿತ ವಿದ್ಯವಾನಗಳ ಅರಿವು ಮೂಡಿಸುವುದು, ಸಾವಾನ್ಯ ಜ್ಞಾನ ವೃದ್ಧಿಸುವುದು ಹಾಗೂ ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಸಂಘದ ಪ್ರಾಯೋಜಕತ್ವದಲ್ಲಿ ಪ್ರತಿದಿನ ವಿದ್ಯಾರ್ಥಿಗಳಿಗೆ ವಿಜಯವಾಣಿ ಪತ್ರಿಕೆ ವಿತರಿಸಲಾಗುತ್ತಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಸಿಇಒ ವಿಷ್ಣು ಆರ್.ಪೈ ಹೇಳಿದರು.

ಮಾ

ಪತ್ರಿಕೆ ಪ್ರಾಯೋಜಕರಾದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ನಿರ್ದೇಶಕ ಮಂಡಳಿಗೆ ಮುಖ್ಯಶಿಕ್ಷಕಿ ಯಶೋದಾ ಕೃತಜ್ಞತೆ ಸಲ್ಲಿಸಿದರು. ಸಂಘದ ಹಿರಿಯ ವ್ಯವಸ್ಥಾಪಕ ಚಂದಯ್ಯ ಶೆಟ್ಟಿ, ಎಸ್‌ಡಿಎಂಸಿ ಸದಸ್ಯ ಮಹದೇವಪ್ಪ, ಗ್ರಾಪಂ ವಾಜಿ ಸದಸ್ಯ ರಾಜೇಂದ್ರ ಬಿಜೂರು, ವಿಜಯವಾಣಿ ಪತ್ರಿಕಾ ವಿತರಕ ಸುಬ್ರಹ್ಮಣ್ಯ ಖಾರ್ವಿ ಮೊದಲಾದವರಿದ್ದರು.

ಊರು ಬೆಳೆಯಬೇಕಾದರೆ ಮೊದಲು ಆ ಗ್ರಾಮದ ಮಕ್ಕಳು ಬೆಳೆಯಬೇಕು. ಶಿಕ್ಷಣಕ್ಕೆ ನೆರವು ನೀಡುವ ಕಾರ್ಯಕ್ಕೆ ನಾವೆೆಲ್ಲರೂ ಸದಾ ಬದ್ಧ. ವಿದ್ಯಾಭ್ಯಾಸಕ್ಕೆ ನೆರವು ನೀಡುವುದರಿಂದ ಅನೇಕ ಪ್ರತಿಭಾವಂತ ಮಕ್ಕಳು ಸವಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ. ನಮ್ಮ ದೇಶದಲ್ಲಿ ಎಲ್ಲ ರಂಗಗಳಲ್ಲಿಯೂ ವಿಪುಲ ಉದ್ಯೋಗಾವಕಾಶಗಳಿದ್ದು, ಯುವಶಕ್ತಿಗಳಿಂದ ಭಾರತ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಲಿದೆ.

— ವಿಷ್ಣು ಆರ್.ಪೈ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಸಿಇಒ