ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ತರಬೇತಿ ಕಾರ್ಯಕ್ರಮವನ್ನು ಬಿ.ರಾಜೇಂದ್ರ ಕಿಣಿ ಬೆಳ್ವೆ ಉದ್ಘಾಟಿಸಿದರು. ಪ್ರಮುಖರಾದ ಸುಧಾಕರ ಕೆ.ಜಿ., ಭಾರ್ಗವಿ ಪಿ.ಭಟ್, ಕೆ.ಸಂಜೀವ ಆರ್ಡಿ ಮೊದಲಾದವರಿದ್ದರು.  
ಉಡುಪಿ

ಸುಸಂಸ್ಕೃತ ವಿದ್ಯಾರ್ಥಿಗಳು ದೇಶದ ಆಸ್ತಿ

ಬೆಳ್ವೆ: ವಿದ್ಯಾರ್ಥಿಗಳು ಪದವಿ ಶೈಕ್ಷಣಿಕ ಹಂತದಲ್ಲಿ ಸತತ ಪರಿಶ್ರಮ, ಶಿಸ್ತು ಸಂಯಮವನ್ನು ಬೆಳೆಸಿಕೊಳ್ಳಬೇಕು. ಸುಸಂಸ್ಕೃತ ಜೀವನ ಮೌಲ್ಯಗಳನ್ನು ಹೊಂದಿದ ವಿದ್ಯಾರ್ಥಿಗಳು ಸವಾಜ ಹಾಗೂ ದೇಶದ ಶ್ರೇಷ್ಠ ಆಸ್ತಿಯಾಗುತ್ತಾರೆ ಎಂದು ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಬಿ.ರಾಜೇಂದ್ರ ಕಿಣಿ ಬೆಳ್ವೆ ಹೇಳಿದರು.

ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರ್ಡಿ-ಬೆಳ್ವೆ- ಗೋಳಿಯಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಯುವಶಕ್ತಿ ಮತ್ತು ಯುವ ಧ್ವನಿ ಸಹಯೋಗದಲ್ಲಿ ಬದಲಾವಣೆಯತ್ತ ಒಂದು ಹೆಜ್ಜೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸರಣಿ ತರಬೇತಿಯನ್ನು ಉದ್ಘಾಟಿಸಿ ಇತ್ತೀಚೆಗೆ ವಾತನಾಡಿದರು.
ಪ್ರಾಂಶುಪಾಲ ಸುಧಾಕರ ಕೆ.ಜಿ. ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಕೋಶಾಧಿಕಾರಿ ಭಾರ್ಗವಿ ಪಿ.ಭಟ್, ಕಾರ್ಯಕ್ರಮ ಸಂಟಕ ಕೆ.ಸಂಜೀವ ಆರ್ಡಿ, ಲಿಯೋ ಕ್ಲಬ್ ಯುವ ಧ್ವನಿ ಕಾರ್ಯದರ್ಶಿ ಪ್ರಜ್ಞಾ, ಸಹ ಪ್ರಾಧ್ಯಾಪಕಿ ಶ್ಯಾಮಲಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಿಶ್ವೇಶ್ವರ ಎನ್.ಗಾಂವ್ಕರ್ ಮೊದಲಾದವರಿದ್ದರು.

ಪ್ರಾಧ್ಯಾಪಕಿ ಝಬಿನ್ನೀಸಾ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ದೇವರಾಜ್ ಕೆ. ನಿರೂಪಿಸಿದರು. ಪ್ರಾಧ್ಯಾಪಕಿ ಬಿಂಧು ವಂದಿಸಿದರು.