ಖಂಡಿಗೆ ಪೂಪಾಡಿಕಲ್ಲುವಿನಲ್ಲಿ ನೂತನ ಶ್ರೀಕೃಷ್ಣ ಮಂದಿರಕ್ಕೆ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು. ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಶುಳುವಾಲಮೂಲೆ ಶಿವಸುಬ್ರಹ್ಮಣ್ಯ ಭಟ್ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಭಕ್ತರ ಸ್ವಾರ್ಥರಹಿತ ಸೇವೆಗಳಿಂದ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಅಭಿವೃದ್ಧಿಗೊಳಿಸಲು ಸಾಧ್ಯ. ಭಜನಾಮಂದಿರ ನಿರ್ಮಾಣಕಾರ್ಯವನ್ನು ತಪಸ್ಸಿನಂತೆ ಕೈಗೊಂಡಾಗ ಶೀಘ್ರ ಪೂರೈಸಲು ಸಾಧ್ಯ. ಇದಕ್ಕಾಗಿ ನಾಡಿನ ಜನತೆ ತ್ಯಾಗದ ಮನೋಭಾವ ಬೆಳೆಸಿಕೊಳ್ಳಬೇಕು.
ಭಜನಾಮಂದಿರಗಳು ಸಂಸ್ಕೃತಿ ಬೋಧನೆಯ ತಾಣಗಳಾಗಿ ಬದಲಾಗಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಗುರುವಾರ ಎಣ್ಮಕಜೆ ಪಂಚಾಯಿತಿ ಪೆರ್ಲ ಸನಿಹದ ಖಂಡಿಗೆ ಪೂಪಾಡಿಕಲ್ಲು ಶ್ರೀರಾಮನಗರ ಶ್ರೀಕೃಷ್ಣ ಸೇವಾ ಸಮಿತಿ ವತಿಯಿಂದ ನೂತನ ಶ್ರೀಕೃಷ್ಣ ಮಂದಿರದ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.
ಮಂದಿರ ನಿರ್ಮಾಣ ಸಮಿತಿ ಗೌರವಾಧ್ಯಕ್ಷ, ಯುಎಇ ಮನಿ ಎಕ್ಸ್‌ಚೇಂಜ್ ನಿವೃತ್ತ ಸಿಒಒ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವ ಸಲಹೆಗಾರ ಶುಳುವಾಲಮೂಲೆ ಶಿವಸುಬ್ರಹ್ಮಣ್ಯ ಭಟ್ ವೈದಿಕ ಕಾರ್ಯಕ್ರಮ ನೆರವೇರಿಸಿದರು. ಅಧ್ಯಕ್ಷ ಸದಾಶಿವ ಭಟ್ ಹರಿನಿಲಯ, ಪ್ರಧಾನ ಕಾರ್ಯದರ್ಶಿ ಶಂಕರ ಕುಲಾಲ್ ಖಂಡಿಗೆ, ಕೋಶಾಧಿಕಾರಿ ಉದಯ ಚೆಟ್ಟಿಯಾರ್ ಬಜಕೂಡ್ಲು, ಮಂದಿರ ಸಮಿತಿ ಗೌರವಾಧ್ಯಕ್ಷ ಕೃಷ್ಣ ಭಟ್ ಖಂಡಿಗೆ, ಅಧ್ಯಕ್ಷ ಸುಬ್ರಾಯ ನಾಯಕ್ ಖಂಡಿಗೆ, ಪ್ರಧಾನ ಕಾರ್ಯದರ್ಶಿ ಪುಟ್ಟಪ್ಪ ಖಂಡಿಗೆ, ಕೋಶಾಧಿಕಾರಿ ಪುರುಷೋತ್ತಮ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಲಕ್ಕಿ ಡ್ರಾ ಕೂಪನ್ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಾ.ಕಿಶೋರ್ ಕುಮಾರ್ ರೈ ಶೇಣಿ ಸ್ವಾಗತಿ, ನಿರೂಪಿಸಿದರು.