ಜಿಲ್ಲಾಧ್ಯಕ್ಷ ಗಣೇಶ್​ ನೇರ್ಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  
ಉಡುಪಿ

ಅ. 11ರಂದು ಮಹಿಷ ಮಹೋತ್ಸವ

ಜಿಲ್ಲಾ ಅಂಬೇಡ್ಕರ್​ ಯುವಸೇನೆ ವತಿಯಿಂದ ಅ. 11ರಂದು ಬೆಳಿಗ್ಗೆ 10.30ಕ್ಕೆ ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬ ಮಹಿಷ ಮಹೋತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಗಣೇಶ್​ ನೇರ್ಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉಡುಪಿ: ಜಿಲ್ಲಾ ಅಂಬೇಡ್ಕರ್​ ಯುವಸೇನೆ ವತಿಯಿಂದ ಅ. 11ರಂದು ಬೆಳಿಗ್ಗೆ 10.30ಕ್ಕೆ ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ಮೂಲನಿವಾಸಿಗಳ ಸಾಂಸತಿಕ ಹಬ್ಬ ಮಹಿಷ ಮಹೋತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಗಣೇಶ್​ ನೇರ್ಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್​ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಮಲೆನಾಡು ಕರಾವಳಿ ಜನಪರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್​ ಕುಮಾರ್​ ಮುರೋಳಿ, ರೈತ ಕೂಲಿ ಸಂಗ್ರಾಮ ಸಮಿತಿಯ ರಾಜ್ಯಾಧ್ಯಕ್ಷ ಎಂ.ಶಿವಣ್ಣ ಕಂದಗಾಲ, ಬಹುಜನ ಚಿಂತಕ ನಾರಾಯಣ ಮಂಜೂರು ಹಾಗೂ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್​ ಪ್ರವಿಣ್​ ಕುಮಾರ್​ ಭಾಗವಹಿಸಲಿದ್ದಾರೆ. ದ.ಸಂ.ಸ ರಾಜ್ಯ ಸಂಚಾಲಕ ಡಾ. ಉದಯ ಕುಮಾರ್​ ತಳ್ಳೂರು, ದ.ಸಂ.ಸ ರಾಜ್ಯ ಸಂಘಟನಾ ಸಂಚಾಲಕ ಶೇಖರ ಹಾವಂಜೆ, ಅಂಬೇಡ್ಕರ್​ ಸೇನೆಯ ಜಿಲ್ಲಾಧ್ಯಕ್ಷ ಸತೀಶ್​ ಕಂಬಳಗೊಡು, ದ.ಸಂ.ಸ ಉಡುಪಿ ಜಿಲ್ಲಾ ಸಂಚಾಲಕ ವಾಸುದೇವ ಮುದ್ದೂರು ಹಾಗೂ ಭೋವಿ ವಡ್ಡರ್​ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಶಿವ ಕುಮಾರ್​ ಪರ್ಕಳ ಉಪಸ್ಥಿತರಿರಲಿದ್ದಾರೆ ಎಂದರು.

ಸನ್ಮಾನ ಕಾರ್ಯಕ್ರಮ

ಇದೇ ಸಂದರ್ಭದಲ್ಲಿ ದಲಿತ ದೌರ್ಜನ್ಯ ಜಾಗೃತಿ ಸಮಿತಿಯ ಉಡುಪಿ ನಿರ್ದೇಶಕ ಯು. ಪರಮೇಶ್ವರ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್​ ಪಕ್ಷದ ಜಿಲ್ಲಾಧ್ಯಕ್ಷರಾದ ಕಿಶನ್​ ಹೆಗ್ಡೆ ಕೊಳ್ಕೆಬೈಲು ಅವರನ್ನು ಸನ್ಮಾನಿಸಲಾಗುವುದು. ಈ ಮಹೋತ್ಸವವು ಯಾವುದೇ ಧರ್ಮ ಅಥವಾ ಸರ್ಕಾರದ ವಿರುದ್ಧ ನಡೆಯುತ್ತಿಲ್ಲ. ಪುರಾಣ, ಮೌಢ್ಯ ಹಾಗೂ ಅವೈಜ್ಞಾನಿಕ ಸಂಪ್ರದಾಯಗಳ ವಿರುದ್ಧ ನಾಡಿನ ಮೂಲನಿವಾಸಿಗಳು ಆಚರಿಸುತ್ತಿರುವ ಹಬ್ಬ ಇದಾಗಿದೆ ಎಂದರು.

ಎಸ್​ಸಿ, ಎಸ್ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಯು. ಪರಮೇಶ್ವರ, ಭೋವಿ ವಡ್ಡರ್​ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಕುಮಾರ್​, ಅಂಬೇಡ್ಕರ್​ ಯುವಸೇನೆಯ ತಾಲೂಕು ಅಧ್ಯಕ್ಷ ವಸಂತ ಪಾಡೇಬೆಟ್ಟು, ರವಿರಾಜ್​ ಲಕ್ಷಿ$್ಮನಗರ ಹಾಗೂ ಹರೀಶ್​ ಸಾಲ್ಯಾನ್​ ಉಪಸ್ಥಿತರಿದ್ದರು.