ಕುಂದಾಪುರದಲ್ಲಿ ಮಾಶಾಸನ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಕುಟುಂಬದ ಐವರು ವಿದ್ಯಾರ್ಥಿಗಳಿಗೆ ‘ವಾತ್ಸಲ್ಯ ವಿದ್ಯಾನಿಧಿ’ ವಿತರಣಾ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ರಾಧಾ ದಾಸ್, ಸುಧೀರ್ ಹಂಗಳೂರು, ತಿಲೋತ್ತಮ ನಾಯ್ಕ ಉಪಸ್ಥಿತರಿದ್ದರು.  
ಉಡುಪಿ

ಕುಟುಂಬಗಳ ಸರ್ವತೋಮುಖ ಏಳಿಗೆಗೆ ಸಹಕಾರ

ಕುಂದಾಪುರ: ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಪಾಲುದಾರ ಕುಟುಂಬಗಳ ಸರ್ವತೋಮುಖ ಏಳಿಗೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಪಾತ್ರ ಪ್ರಮುಖವಾಗಿದೆ ಎಂದು ಶ್ರೀ ಮೂಕಾಂಬಿಕಾ ಮಹಿಳಾ ಮಂಡಳಿಗಳ ತಾಲೂಕು ಒಕ್ಕೂಟ ಅಧ್ಯಕ್ಷೆ ರಾಧಾ ದಾಸ್ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ-2 ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಮಾಶಾಸನ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಕುಟುಂಬದ ಒಟ್ಟು 5 ಮಂದಿ ವಿದ್ಯಾರ್ಥಿಗಳಿಗೆ ಯೋಜನಾ ಕಚೇರಿಯಲ್ಲಿ ಶುಕ್ರವಾರ ‘ವಾತ್ಸಲ್ಯ ವಿದ್ಯಾನಿಧಿ’ ವಿತರಿಸಿ ಮಾತನಾಡಿದರು.
ಯೋಜನಾಧಿಕಾರಿ ಸುಧೀರ್ ಹಂಗಳೂರು ಮಾತನಾಡಿದರು. ಉಡುಪಿ ಜಿಲ್ಲಾ ಕಾನೂನು ಪ್ರಾಧಿಕಾರದ ಪಿ.ಎಲ್.ವಿ.ಯ ತಿಲೋತ್ತಮ ನಾಯ್ಕ ಶುಭ ಹಾರೈಸಿದರು. ವಿದ್ಯಾನಿಧಿ ಯೋಜನೆ ವಿದ್ಯಾರ್ಥಿಗಳು, ಪಾಲಕರು, ತಾಲೂಕಿನ ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿ, ಯೋಜನಾ ಕಚೇರಿಯ ಹಣಕಾಸು ಪ್ರಬಂಧಕರು, ಸಹಾಯಕ ಪ್ರಬಂಧಕರು ಉಪಸ್ಥಿತರಿದ್ದರು.
ತಾಲೂಕು ಜ್ಞಾನವಿಕಾಸ ಸಮನ್ವಯಾಧಿರಿಕಾರಿ ಕವಿತಾ ಗೌಡ ನಿರೂಪಿಸಿದರು. ಮೇಲ್ವಿಚಾರಕಿ ಶರ್ಮಿಳಾ ಜಿ. ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ಪ್ರದೀಪ್ ಕುಮಾರ್ ವಂದಿಸಿದರು.