ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಚೆಕ್ ಹಸ್ತಾಂತರಿಸಲಾಯಿತು. ಗಿರೀಶ್ ಕುಮಾರ್, ಕೆ.ಭುವನಾಭಿರಾಮ ಉಡುಪ, ಪುರುಷೋತ್ತಮ ಭಟ್ ಮೊದಲಾದವರಿದ್ದರು.
ಮೂಲ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆಯವರ ಆಶೀರ್ವಾದದೊಂದಿಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಅನುದಾನ ನೀಡಲಾಗುತ್ತಿದ್ದು, ಅಭಿವೃದ್ಧಿಗೆ ಸದಾ ಸಹಕಾರ ಇದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಜ್ಪೆ ತಾಲೂಕಿನ ಯೋಜನಾಧಿಕಾರಿ ಗಿರೀಶ್ ಕುಮಾರ್ ಹೇಳಿದರು.
ಶಿಮಂತೂರು ಶ್ರೀಆದಿ ಜನಾರ್ದನ ದೇವಸ್ಥಾನದ ನೂತನ ಭೋಜನಶಾಲೆ ಮತ್ತು ಸಭಾಗೃಹ ನಿರ್ಮಾಣಕ್ಕಾಗಿ ಕ್ಷೇತ್ರದ ಆಡಳಿತ ಮೊಕ್ತೇಸರ ಉದಯಕುಮಾರ್ ಶೆಟ್ಟಿ ಮನವಿ ಮೇರೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 3 ಲಕ್ಷ ರೂ. ಅನುದಾನದ ಚೆಕ್ ದೇವಳಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಕೆ.ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅರ್ಚಕ ಪುರುಷೋತ್ತಮ ಭಟ್, ಶಾಂತಾರಾಮ ಹೆಗ್ಡೆ ತೆಂಗಾಳಿ, ಶೇಖರ ಎಂ.ರೂಪ ವಿಷ್ಣುಮೂರ್ತಿ ಭಟ್, ಶಶಿಕಲಾ, ನಂದನ ಶೆಟ್ಟಿ ಕುಬೆವೂರು ಕ್ಷೇತ್ರದ ಅನುದಾನದ ಚೆಕ್ ಸ್ವೀಕರಿಸಿದರು.
ಜನಜಾಗೃತಿ ವೇದಿಕೆ ಸದಸ್ಯರಾದ ಹೇಮಚಂದ್ರ, ಕಿಲ್ಪಾಡಿ ವಲಯ ಒಕ್ಕೂಟ ಅಧ್ಯಕ್ಷ ಲಕ್ಷ್ಮೀನಾರಾಯಣ, ಶಿಮತೂರು ಕಾರ್ಯಕ್ಷೇತ್ರದ ಒಕ್ಕೂಟ ಅಧ್ಯಕ್ಷೆ ಶಾರದಾ ವಸಂತ್, ಅಂಗರಗುಡ್ಡೆ ಸೇವಾಪ್ರತಿನಿದಿ ಸುಕನ್ಯಾ, ಪ್ರಮೀಳಾ ಡಿ., ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ಸುಧೀರ್ ಶೆಟ್ಟಿ, ಅತಿಕಾರಿಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಮನೋಹರ ಕೋಟ್ಯಾನ್, ಮಾಜಿ ಸದಸ್ಯರಾದ ಪದ್ಮಿನಿ ವಿಜಯ ಶೆಟ್ಟಿ, ಹರೀಶ್ ಶೆಟ್ಟಿ, ಉದಯ ಶೆಟ್ಟಿ ಅಧಿಧನ್, ದಿನೇಶ್ಚಂದ್ರ ಅಜಿಲ ಮೋಹನ್ ಕೋಟ್ಯಾನ್, ಬಾಲಕೃಷ್ಣ ಶೆಟ್ಟಿ, ಅಂಬೆಲಬೀಡು, ತಾರಾನಾಥ ಅಂಗರಗುಡ್ಡೆ, ಅವಿನಾಶ್ ಶೆಟ್ಟಿ, ಪ್ರವೀಣ್ ಶೆಟ್ಟಿ ಗುತ್ತಿಗೆದಾರ ನಿತಿನ್ ಶೆಟ್ಟಿ ಪಂಜಿನಡ್ಕ ಉಪಸ್ಥಿತರಿದ್ದರು.