ಉಡುಪಿಯ ಅಜ್ಜರಕಾಡು ಕಾಲೇಜಿನಲ್ಲಿ ಎಚ್.ಡುಂಡಿರಾಜ್ ಅವರೊಂದಿಗೆ ಸಂವಾದ ನಡೆಯಿತು. ಪ್ರೊ. ಸೋಜನ್ ಕೆ.ಜಿ., ಪ್ರೊ. ಪಿ.ಬಿ. ಪ್ರಸನ್ನ, ಪ್ರೊ. ನಿಕೇತನಾ ಇತರರಿದ್ದರು.
* ಕವಿ ಎಚ್.ಡುಂಡಿರಾಜ್ ಅಭಿಪ್ರಾಯ
* ಅಜ್ಜರಕಾಡು ಕಾಲೇಜಿನಲ್ಲಿ ಸಂವಾದ
ಉಡುಪಿ: ಅಜ್ಜರಕಾಡುನಲ್ಲಿರುವ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಭಾಗ ಸಾಹಿತ್ಯ ಸಂಘ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಶ್ರಯದಲ್ಲಿ ಕವಿ ಎಚ್.ಡುಂಡಿರಾಜ್ ಅವರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಬಾಲ್ಯದಿಂದಲೇ ತನ್ನಲ್ಲಿ ಸಾಹಿತ್ಯ ಆವರಿಸಿಕೊಂಡ ರೀತಿ ವಿವರಿಸಿದ ಡುಂಡಿರಾಜ್, ಅಪಾರವಾದ ಓದು ಸಾಹಿತ್ಯದ ಆಸಕ್ತಿ ಉಳಿಯುವಂತೆ ಮಾಡಿತು. ವಿದ್ಯಾರ್ಥಿಗಳೂ ಸಾಹಿತ್ಯ ಓದುವಿಕೆಯಿಂದ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿ, ಸಂದರ್ಭಕ್ಕೆ ತಕ್ಕಂತೆ ಹನಿಗವನಗಳನ್ನು ಹೇಳುತ್ತ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದರು.
ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ.ಜಿ. ಅಧ್ಯಕ್ಷತೆ ವಹಿಸಿದ್ದರು. ತ್ರಿಶಾ ಪ್ರಾರ್ಥಿಸಿದರು. ಪ್ರೊ. ಪಿ.ಬಿ. ಪ್ರಸನ್ನ ಸ್ವಾಗತಿಸಿದರು. ಉಷಾ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ನಿಕೇತನಾ ವಂದಿಸಿದರು.