ಹೈದರಾಬಾದಿನ ‘ಲೈಟ್ಸ್ ಕ್ಯಾಮೆರಾ ವುಮನ್’ ಸಂಸ್ಥೆಯ ಸಂಸ್ಥಾಪಕಿ ನವ್ಯಾ ನಾಗೇಶ್ ಮಾತನಾಡಿದರು. 
ಉಡುಪಿ

ಸಮಕಾಲೀನ ಘಟನೆಗಳು ಉತ್ತಮ ಕಥೆಗೆ ಪ್ರೇರಣೆ

ಬೆಳ್ತಂಗಡಿ: ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಹಿಂಜರಿಯಬಾರದು. ಉತ್ತಮ ಪೋರ್ಟ್‌ಫೋಲಿಯೊ ನಿರ್ಮಾಣ, ನಿರಂತರ ಕಲಿಕೆ ಹಾಗೂ ಸ್ಥಳೀಯ ಸಂಸ್ಕೃತಿಯನ್ನು ಆಧರಿಸಿದ ಕಥೆಗಳೇ ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಳ್ಳಲು ನೆರವಾಗುತ್ತವೆ. ಪ್ರತಿಯೊಂದು ದೃಶ್ಯವೂ ಸೂಕ್ತ ಯೋಜನೆಯೊಂದಿಗೆ ರೂಪುಗೊಳ್ಳಬೇಕಿದ್ದು, ಸುತ್ತಮುತ್ತಲಿನ ಬದುಕು ಮತ್ತು ಸಮಕಾಲೀನ ಘಟನೆಗಳೇ ಉತ್ತಮ ಕಥೆಗಳ ಮೂಲವಾಗಬಹುದು ಎಂದು ಹೈದರಾಬಾದ್‌ನ ‘ಲೈಟ್ಸ್ ಕ್ಯಾಮೆರಾ ವುಮನ್’ ಸಂಸ್ಥೆಯ ಸಂಸ್ಥಾಪಕಿ ಹಾಗೂ ಚಲನಚಿತ್ರ ನಿರ್ದೇಶಕಿ ನವ್ಯಾ ನಾಗೇಶ್ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಬಿ.ವೋಕ್ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ವತಿಯಿಂದ ಚಿತ್ರರಂಗ, ಸಿನಿಮಾ ನಿರ್ಮಾಣ, ಕಂಟೆಂಟ್ ಸೃಷ್ಟಿ ಹಾಗೂ ಡಿಜಿಟಲ್ ಬ್ರಾೃಂಡಿಂಗ್ ಕುರಿತ ವಿಶೇಷ ಸಂವಾದ ಕಾರ್ಯಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಐಐಟಿ ಹಳೇ ವಿದ್ಯಾರ್ಥಿನಿ ಹಾಗೂ ‘ಬ್ರ್ಯಾಂಡ್ ಕ್ಯಾಮಿಯೋ’ ಸಂಸ್ಥಾಪಕಿ ಕಾವ್ಯಾ ನಾಗೇಶ್ ಮಾತನಾಡಿ, ಒಳ್ಳೆಯ ಕಥೆ ಹೇಳಿದರೆ ಮಾತ್ರ ಸಾಲದು. ಆ ಕಥೆಯನ್ನು ಪ್ರೇಕ್ಷಕರಿಗೆ ಹೇಗೆ ತಲುಪಿಸುತ್ತೇವೆ ಎಂಬುದೂ ಅಷ್ಟೇ ಮುಖ್ಯ. ಡಿಜಿಟಲ್ ಮಾರ್ಕೆಟಿಂಗ್, ಬ್ರಾೃಂಡಿಂಗ್ ಹಾಗೂ ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆಯ ಮೂಲಕ ಕಂಟೆಂಟ್ ಹೆಚ್ಚು ಜನರನ್ನು ತಲುಪಲು ಸಾಧ್ಯ ಎಂದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ, ಸಹಾಯಕ ಪ್ರಾಧ್ಯಾಪಕಿ ತೇಜಸ್ವಿನಿ ಉಪಸ್ಥಿತರಿದ್ದರು.