ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಆಹಾರ ಮತ್ತು ಸ್ವಯಂ ಸೇವಕರ ಸಮಿತಿ ಸಭೆ ನಡೆಯಿತು. ಶರತ್‌ಕೃಷ್ಣ ಪಡುವೆಟ್ನಾಯ, ಅರುಣಕುಮಾರ್ ಎಂ.ಎಸ್., ಸಂತೋಷ್ ಅತ್ತಾಜೆ, ವನಿತಾ ಶೆಟ್ಟಿ ಮತ್ತಿತರರಿದ್ದರು. 
ಉಡುಪಿ

ಸ್ವಯಂಸೇವಕರಲ್ಲಿ ಇರಲಿ ಶಿಸ್ತು, ಸಮಯಪಾಲನೆ

ಇಂದಿರಾ ಎನ್ ಕೆ
ಬೆಳ್ತಂಗಡಿ: ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ರಾಮಚಂದ್ರ ಶೆಟ್ಟಿ ಮತ್ತು ಅರುಣ ಕುಮಾರ್ ನೇತೃತ್ವದಲ್ಲಿ ಸ್ವಯಂಸೇವಕರ ಸಹಕಾರದೊಂದಿಗೆ ವ್ಯವಸ್ಥಿತವಾಗಿ ನಡೆಯಲಿದೆ. ಗ್ರಾಮಾಭಿವೃದ್ಧಿ ಯೋಜನೆ ಸ್ವಯಂಸೇವಕರು, ಸಮಿತಿ ಸದಸ್ಯರು ಶಿಸ್ತು ಮತ್ತು ಸಮಯಪಾಲನೆ ಕಾಯ್ದುಕೊಂಡು ಹೊಸ ವ್ಯವಸ್ಥೆಗೆ ಹೊಂದಿಕೊಂಡು ದೇವಸ್ಥಾನಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಹೇಳಿದರು.
ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಆಹಾರ ಮತ್ತು ಸ್ವಯಂಸೇವಕ ಸಮಿತಿಯ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಆಹಾರ ಸಮಿತಿ ಸಂಚಾಲಕ ರಾಮಚಂದ್ರ ಶೆಟ್ಟಿ ಮಾಹಿತಿ ನೀಡಿ, ಸುರುಚಿ ಪಾಕಶಾಲೆಯಲ್ಲಿ 30 ಬಾಣಸಿಗರು ಆಹಾರ ಸಿದ್ಧಪಡಿಸಲಿದ್ದಾರೆ. ಸುಪ್ರಸಾದ ಭೋಜನ ಶಾಲೆಯಲ್ಲಿ 300 ಸ್ವಯಂಸೇವಕರು 8 ಕೌಂಟರ್‌ಗಳಲ್ಲಿ ಏಕಕಾಲದಲ್ಲಿ 2000ದಿಂದ 2500 ಮಂದಿಗೆ ಅನ್ನಪ್ರಸಾದ ವಿತರಿಸಲಿದ್ದಾರೆ. ಮಧ್ಯಾಹ್ನ 12 ಗಂಟೆ ಹಾಗೂ ರಾತ್ರಿ 7ಕ್ಕೆ ಅನ್ನಪ್ರಸಾದ ಆರಂಭಗೊಳ್ಳಲಿದೆ ಎಂದರು.
ಅರುಣ ಕುಮಾರ್ ಎಂ.ಎಸ್., ಸಂತೋಷ್ ಅತ್ತಾಜೆ, ವನಿತಾ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಯಶೋಧರ ಉಪಸ್ಥಿತರಿದ್ದರು. ಸ್ವಯಂ ಸೇವಕರ ಸಮಿತಿಯ ಶಿವಪ್ರಸಾದ ಸುರ್ಯ ನಿರೂಪಿಸಿದರು.