ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ. 
ಉಡುಪಿ

ಶೇ.100 ಫಲಿತಾಂಶದ ಶಾಲಾ-ಕಾಲೇಜುಗಳಿಗೆ ಅಭಿನಂದನೆ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮಾಹಿತಿ

* ಮೇ 27ರಂದು ಐವೈಸಿ ಸಭಾಂಗಣದಲ್ಲಿ ಸಮಾರಂಭ

ಉಡುಪಿ: ಪುಷ್ಪಾನಂದ ಫೌಂಡೇಷನ್​ "ಯಶಸ್​' ಉಡುಪಿ ವತಿಯಿಂದ ಮೇ 27ರಂದು ಮಧ್ಯಾಹ್ನ 3:30ಕ್ಕೆ ಉಡುಪಿ ಬೀಡಿನಗುಡ್ಡೆ ರಸ್ತೆ ಮಾರ್ಗದ ಇನ್ಫೋಸಿಸ್​ ಯಕ್ಷಗಾನ ಕಲಾರಂಗದ ಆಡಿಟೋರಿಯಂನಲ್ಲಿ 2025-26ನೇ ಸಾಲಿನಲ್ಲಿ ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಗಳಿಸಿದ ಉಡುಪಿ ವಿಧಾನಸಭಾ ಕ್ಷೇತ್ರದ ಶಾಲಾ-ಕಾಲೇಜುಗಳಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಿರುವುದಾಗಿ ಪುಷ್ಪಾನಂದ ಫೌಂಡೇಷನ್​ನ ಪ್ರವರ್ತಕ ಹಾಗೂ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಫೌಂಡೇಷನ್​ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಬಾರಿ ಶೇ.100 ಫಲಿತಾಂಶ ಗಳಿಸಿದ 41 ಶಾಲಾ-ಕಾಲೇಜುಗಳನ್ನು ಅಭಿನಂದಿಸಲಾಗುವುದು. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು.
ಇದೇ ಸಮಾರಂಭದಲ್ಲಿಯೇ ಜಿಲ್ಲೆಯ ಶೈಕ್ಷಣಿಕ ಸಾಧನೆಗೆ ವಿಶೇಷ ಮುತುವರ್ಜಿ ವಹಿಸಿದ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ಶಿಕ್ಷಣ ಇಲಾಖೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಶಾಸಕ ಯಶ್​ಪಾಲ್​ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.