ಹ್ಯಾಂಡ್‌ಬಾಲ್ ಆಟಗಾರ ಅಭಿಷೇಕ್ ಎಚ್. ಅವರನ್ನು ಅಭಿನಂದಿಸಲಾಯಿತು. ಡಾ.ಶಶಾಂಕ ಕುಳಮರ್ವ, ಪ್ರೊ.ವಿಶ್ವನಾಥ್ ಪಿ, ರಮೇಶ್ ಮತ್ತಿತರರಿದ್ದರು.
ಬೆಳ್ತಂಗಡಿ: ಚೀನಾದ ಚುಝೌ ನಗರದಲ್ಲಿ ಜು.15ರಿಂದ 26ರವರೆಗೆ ನಡೆದ 19ನೇ ಏಷ್ಯನ್ ಪುರುಷ ಕಿರಿಯರ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಅತ್ಯುತ್ತಮ ಪ್ರದರ್ಶನ ನೀಡಿದ ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿ ಹಾಗೂ ಎಸ್‌ಡಿಎಂ ಕ್ರೀಡಾ ಸಂಘದ ಹ್ಯಾಂಡ್‌ಬಾಲ್ ಆಟಗಾರ ಅಭಿಷೇಕ್ ಎಚ್. ಅವರನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆ ಹಾಗೂ ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು.
ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ವಿದ್ಯಾರ್ಥಿಯನ್ನು ಅಭಿನಂದಿಸಿದರು. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹನುಮಂತ ಮತ್ತು ಲಕ್ಷ್ಮೀ ಬಿ.ಜಿ. ದಂಪತಿ ಪುತ್ರ ಅಭಿಷೇಕ್ ಜಾಖರ್ಂಡ್‌ನಲ್ಲಿ ನಡೆದ ಹ್ಯಾಂಡ್‌ಬಾಲ್ ತಂಡ ಆಯ್ಕೆ ಪ್ರಕ್ರಿಯೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.
ಕಾಲೇಜಿನ ಹಳೇ ವಿದ್ಯಾರ್ಥಿ ಡಾ.ಶಶಾಂಕ ಕುಳಮರ್ವ, ಕಾಲೇಜು ಪ್ರಾಂಶುಪಾಲ ಪ್ರೊ.ವಿಶ್ವನಾಥ್ ಪಿ., ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ದೈಹಿಕ ಶಿಕ್ಷಣ ಉಪನ್ಯಾಸಕಿ ಶಾರದಾ, ತರಬೇತಿದಾರ ಸುದೀನ್ ಪುಜಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕವನಾ ಮತ್ತು ಅನ್ವಿತಾ ನಿರೂಪಿಸಿದರು. ವಿದ್ಯಾರ್ಥಿ ನೆವಿಲ್ ನವೀನ್ ಮೋರಸ್ ವಂದಿಸಿದರು.