ಶ್ರೀನಿವಾಸ್​ ರಾವ್​ ಕೆ. 
ಉಡುಪಿ

ಬ್ರಾಹ್ಮಣರ ಅವಹೇಳನಕ್ಕೆ ಖಂಡನೆ

* ಕ್ರಮ ಕೈಗೊಳ್ಳಲು ಶ್ರೀನಿವಾಸ್​ ರಾವ್​ ಆಗ್ರಹ

ಉಡುಪಿ: ಬಸವ ಕಲ್ಯಾಣದಲ್ಲಿ ಡಿ.7ರಂದು ನಡೆದ ಸೂಫಿ ಸಂತರ ಸಮಾವೇಶದಲ್ಲಿ ಮುಂಬಯಿ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಬಿ.ಜಿ. ಕೊಳ್ಸೆ ಪಾಟೀಲ್​ ಅವರು ಬ್ರಾಹ್ಮಣ ಸಮುದಾಯದ ಕುರಿತಾಗಿ ಅಸಾಂವಿಧಾನಿಕ ಪದ ಬಳಸಿ ಅವಹೇಳನ ಮಾಡಿದ್ದನ್ನು ಸಮಾನ ಮನಸ್ಕ ಕನ್ನಡಿಗರ ವೇದಿಕೆ ಖಂಡಿಸಿದೆ.
ಭಾರತದ ಸಂವಿಧಾನದಲ್ಲಿ ಎಲ್ಲ ಧರ್ಮ ಹಾಗೂ ಜಾತಿಗಳಿಗೆ ತಮ್ಮ ತಮ್ಮ ಆಚರಣೆ ಮಾಡಲು ಅವಕಾಶವಿದೆ. ಬ್ರಾಹ್ಮಣ ಸಮುದಾಯ ಸದಾ ಶಾಂತಿ, ಸೌಹಾರ್ದತೆ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದೆ. ಯಾರನ್ನೂ ದ್ವೇಷಿಸುವುದಿಲ್ಲ. ಅಥವಾ ಯಾರ ವಿರುದ್ಧವೂ ದ್ವೇಷದ ಮಾತು ಬಳಸುವುದಿಲ್ಲ. ಎಲ್ಲರೊಡನೆ ಸ್ನೇಹದಿಂದ ವರ್ತಿಸುತ್ತ ಉತ್ತಮ ಸಮಾಜ ನಿರ್ಮಾಣದ ಭಾಗವಾಗಿದ್ದಾರೆ.
ನಿವೃತ್ತ ನ್ಯಾಯಾಧೀಶರ ಹೇಳಿಕೆ ಸಮಾಜದಲ್ಲಿ ಜಾತಿ ವೈಷಮ್ಯ ಮೂಡಿಸಿ ಕೋಮು ಭಾವನೆ ಕೆರಳಿಸುವ ಕೆಲಸವಾಗಿದೆ. ಅವರ ಹೇಳಿಕೆ ಸಮಾಜದ ಜನರ ಭಾವನೆಗಳಿಗೆ ತೀವ್ರ ಆಘಾತ ಉಂಟುಮಾಡಿದೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೇದಿಕೆಯ ಅಧ್ಯಕ್ಷ ಶ್ರೀನಿವಾಸ್​ ರಾವ್​ ಕೆ. ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.