ಸಮುದಾಯ ಸಾಂಸ್ಕೃತಿಕ ಸಂಘಟನೆ ಐವತ್ತರ ವರ್ಷಾಚರಣೆ ಅಂಗವಾಗಿ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ ನಡೆಯಿತು.
ಕುಂದಾಪುರ: ಕಾವ್ಯ ಅರ್ಥೈಸಲು ಭಾಷೆಯೇ ಬೇಕು ಅಂತ ಇಲ್ಲ. ಭಾವನೆಯಿಂದಲೂ ಅರ್ಥೈಸಬಹುದು. ಆದರೆ ಈಗಿನ ಕೆಲ ಕವನಗಳಲ್ಲಿ ಸಾಮಾಜಿಕ ಮೌಲ್ಯ, ಸಮಾಜಕ್ಕೆ ಪೂರಕವಾಗುವ ಅಂಶಗಳು ಕಡಿಮೆಯಾಗಿವೆ. ಕವನಗಳ ಅಂತಃಸತ್ವ ಅರಿಯಲು ಇಂತಹ ಬಹುಭಾಷಾ ಕವಿಗೋಷ್ಠಿಗಳು ಸಹಕಾರಿ ಎಂದು ಸಮುದಾಯ 50- ಸ್ವಾಗತ ಸಮಿತಿ ಕಾರ್ಯದರ್ಶಿ ಗುಂಡಣ್ಣ ಸಿ.ಕೆ. ಹೇಳಿದರು.
ಸಮುದಾಯ ಕುಂದಾಪುರ ಆತಿಥ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಐವತ್ತರ ಅಂಗವಾಗಿ ಕುಂದಾಪುರದ ನಾನಾಸಾಹೇಬ ರಸ್ತೆ ಹೆಂಚು ಕಾರ್ಮಿಕರ ಭವನದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿಯಲ್ಲಿ ಮಾತನಾಡಿದರು.
ಕವಿ, ಕಥೆಗಾರ ಬಿ.ಎಂ.ಬಶೀರ್ ಉದ್ಘಾಟಿಸಿ ಮಾತನಾಡಿದರು. ಸಮುದಾಯ ಕರ್ನಾಟಕದ ಅಧ್ಯಕ್ಷ ಶಶಿಧರ್ ಜೆ.ಸಿ. ಅಧ್ಯಕ್ಷತೆ ವಹಿಸಿದ್ದರು.
ಆರಿಫ್ ರಾಜಾ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಮೊದಲ ಗೋಷ್ಠಿಯಲ್ಲಿ ಬಾಬು ಪಾಂಗಾಳ(ಕೊರಗ), ರೊನಿ ಕ್ರಾಸ್ತಾ ಕೆಲರೈ(ಕೊಂಕಣಿ), ರೇಣುಕಾ ರಮಾನಂದ(ಕನ್ನಡ), ಯೋಗೀಶ್ ಹೊಸೋಳಿಕೆ(ಅರೆಭಾಷೆ), ಅಮೃತಾ ಶೆಟ್ಟಿ ಆತ್ರಾಡಿ(ತುಳು), ವಿಲ್ಸನ್ ಕಟೀಲ್(ಕನ್ನಡ), ಎರಡನೇ ಗೋಷ್ಠಿಯಲ್ಲಿ ರವೀಂದ್ರನ್ ಪಾಡಿ(ಮಲಯಾಳಂ), ಸಂತೋಷ್ ಗುಡ್ಡಿಯಂಗಡಿ(ಕುಂದಾಪ್ರ ಕನ್ನಡ), ಫಾತಿಮಾ ರಲಿಯಾ(ಕನ್ನಡ), ಮುಅದ್ ಜಿ.ಎಂ.(ಬ್ಯಾರಿ), ಸುಮಿತ್ ಮೇತ್ರಿ(ಕನ್ನಡ), ಜೋಸೆಫ್ ಮಲ್ಲಾಡಿ(ಧಾರವಾಡ ಕನ್ನಡ) ಕವನಗಳನ್ನು ವಾಚಿಸಿದರು. ರಮೇಶ್ ಗುಲ್ವಾಡಿ, ಗಣೇಶ ಶೆಟ್ಟಿ ನಿರ್ವಹಿಸಿದರು. ಉದಯ ಗಾಂವ್ಕರ್ ಸಂಯೋಜಿಸಿದರು.
ಜನವಾದಿ ಪ್ರಕಾಶನ ಗುಂಡ್ಮಿಯ ಕೆ.ಕಮಲಾ ಮಯ್ಯ, ಸಮುದಾಯ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮನೋಜ ವಾಮಂಜೂರು, ಬಹುಭಾಷಾ ಕವಿಗೋಷ್ಠಿ ಸಿದ್ಧತಾ ಸಮಿತಿ ಅಧ್ಯಕ್ಷ ರಾಮಚಂದ್ರ ನಾವುಡ, ಸಮುದಾಯ ಕುಂದಾಪುರದ ಹಿರಿಯರಾದ ಜಿ.ವಿ.ಕಾರಂತ್ ಮತ್ತಿತರರು ಉಪಸ್ಥಿತರಿದ್ದರು.
ಸಮುದಾಯ ಕುಂದಾಪುರ ಅಧ್ಯಕ್ಷ ಡಾ.ಸದಾನಂದ ಬೈಂದೂರು ಪ್ರಸ್ತಾವಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ವಾಸುದೇವ ಗಂಗೇರ ನಿರೂಪಿಸಿದರು.