ಧ್ವಬೆಸಂಸಂ ಬೈಂದೂರು ವಲಯಕ್ಕೆ ಸ್ವಂತ ಕಟ್ಟಡ ನಿರ್ವಾಣಕ್ಕೆ ಸ್ಥಳದಾನ ವಾಡಿದ ಖಂಬದಕೋಣೆ ಸಂವೇದನಾ ಕಾಲೇಜಿನ ಪ್ರಾಂಶುಪಾಲ ಡಾ.ಸುಬ್ರಹ್ಮಣ್ಯ ಭಟ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಆರ್.ಲಕ್ಷ್ಮಣ್ ದಾವಣಗೆರೆ, ಸತೀಶ್ ಉಷಾ ಕುಂದಾಪುರ, ಅಬ್ದುಲ್ ಕರೀಂ ಅತ್ತಾರ್ ಬಾಗಲಕೋಟೆ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಬೈಂದೂರು
ಸಮಾನ ವೃತ್ತಿಬಾಂಧವರು ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಲೋಸುಗ ಸಂಟನೆ ಕಟ್ಟಿ ಮುನ್ನಡೆಯುವುದು ಉತ್ತಮ ಬೆಳವಣಿಗೆ. ಪ್ರತಿಯೊಬ್ಬ ಸದಸ್ಯರ ಹಿತಾಸಕ್ತಿಯನ್ನು ಕಾಪಾಡಿಕೊಂಡು, ಅವರನ್ನು ಒಗ್ಗಟ್ಟಿನೊಂದಿಗೆ ಕರೆದೊಯ್ಯುವ ಜವಾಬ್ದಾರಿ ಸಂಟನೆಯ ಮುಂದಾಳುಗಳದ್ದಾಗಿರುತ್ತದೆ ಎಂದು ಖಂಬದಕೋಣೆ ಸಂವೇದನಾ ಕಾಲೇಜಿನ ಪ್ರಾಂಶುಪಾಲ ಡಾ.ಸುಬ್ರಹ್ಮಣ್ಯ ಭಟ್ ಹೇಳಿದರು.
ಯಡ್ತರೆ ಜೆಎನ್‌ಆರ್ ಸಭಾಭವನದಲ್ಲಿ ಮಂಗಳವಾರ ಉಡುಪಿ ಜಿಲ್ಲಾ ಧ್ವನಿ ಬೆಳಕು ಸಂಯೋಜಕರ ಸಂಟನೆಯ 15ನೇ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನವದೆಹಲಿ ಆಲ್ ಇಂಡಿಯಾ ಟೆಂಟ್ ಮತ್ತು ಡೆಕೋರೇಟರ್ಸ್ ವೆಲ್ಫೇರ್ ಅಸೋಸಿಯೇಷನ್ ರಾಷ್ಟ್ರೀಯ ಉಪಾಧ್ಯಕ್ಷ ಆರ್.ಲಕ್ಷ್ಮಣ್ ದಾವಣಗೆರೆ ಮಹಾಸಭೆ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಸತೀಶ್ ಉಷಾ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಆರು ವಲಯಗಳ ಕಾರ್ಯದರ್ಶಿಗಳು ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು.
ಕರ್ನಾಟಕ ರಾಜ್ಯ ಶಾಮಿಯಾನ, ಡೆಕೋರೇಶನ್, ಧ್ವನಿ ಮತ್ತು ಬೆಳಕು ಕ್ಷೇವಾಭಿವದ್ಧಿ ಸಂದ ರಾಜ್ಯಾಧ್ಯಕ್ಷ ಅಬ್ದುಲ್ ಕರೀಂ ಅತ್ತಾರ್ ಬಾಗಲಕೋಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಕರನಂದಿ, ರಾಜ್ಯ ಖಜಾಂಚಿ ದಾವುದು ಕನಸಾವಿ, ರಾಜ್ಯ ಸಂಟನಾ ಕಾರ್ಯದರ್ಶಿ ಜಿ.ಬಾಲ ಗುರುನಾಥಂ, ಜಿಲ್ಲಾ ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷ ಆ್ಯಂಟನಿ ಡೇಸಾ ಕಾಪು, ಉಪಾಧ್ಯಕ್ಷ ಕೃಷ್ಣ ಕುಲಾಲ್, ಕಾರ್ಯದರ್ಶಿ ಬಿ.ಹಸೈನಾ ಕುಂದಾಪುರ, ಕೋಶಾಧಿಕಾರಿ ಎಂ.ಕೆ.ಗಣೇಶ್ ಶಿರಿಯಾರ ಮೊದಲಾದವರಿದ್ದರು.
ಬೈಂದೂರು ವಲಯದ ಕಟ್ಟಡ ನಿರ್ವಾಣಕ್ಕೆ ತಮ್ಮ ಸ್ವಂತ ಸ್ಥಳದಲ್ಲಿ ಉಚಿತವಾಗಿ ನೀಡಿದ 5 ಸೆಂಟ್ಸ್ ಜಾಗದ ದಾನಪತ್ರಗಳನ್ನು ಹಸ್ತಾಂತರಿಸಿದರು. ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆರು ವಲಯದ ಆರು ಸಾಧಕರನ್ನು ಸನ್ಮಾನಿಸಲಾಯಿತು.