ಚೆಸ್ ತರಬೇತಿಗೆ ಕೃಷ್ಣ ಶ್ಯಾನುಭಾಗ್ ಹಾಗೂ ಸದಾಶಿವ ಭಟ್ ಹರಿನಿಲಯ ಚಾಲನೆ ನೀಡಿದರು. ಶ್ರೀಕಾಂತ್ ಭಟ್ ಬಜಕೂಡ್ಲು, ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್ ಮತ್ತಿತರರಿದ್ದರು.  
ಉಡುಪಿ

ಚೆಸ್‌ನಿಂದ ಸಮಗ್ರ ಮನೋವಿಕಾಸ

ಇಂದಿರಾ ಎನ್ ಕೆ
ಪೆರ್ಲ: ಮಕ್ಕಳಲ್ಲಿ ಬೌದ್ಧಿಕ ಜ್ಞಾನ ಹೆಚ್ಚಿಸುವಲ್ಲಿ ಚೆಸ್ ಪಂದ್ಯಾಟ ಹೆಚ್ಚು ಪರಿಣಾಮಕಾರಿಯಾಗಿದೆ. ಚೆಸ್ ಮಕ್ಕಳ ಸಮಗ್ರ ಮನೋವಿಕಾಸಕ್ಕೆ ಹಾದಿಮಾಡಿಕೊಡುವುದಲ್ಲದೆ, ತಾಳ್ಮೆ, ಏಕಾಗ್ರತೆ, ನೆನಪಿನ ಶಕ್ತಿ ಹಾಗೂ ಸೃಜನಶೀಲ ಚಿಂತನೆಗೂ ಸಹಕಾರಿಯಾಗಿದೆ ಎಂದು ಫಿಡೆ ರೇಟೆಡ್ ಚೆಸ್ ಆಟಗಾರ, ಪಿಡಬ್ಲ್ಯೂಡಿ ಇಂಜಿನಿಯರ್ ಶ್ರೀಕಾಂತ್ ಭಟ್ ಬಜಕೂಡ್ಲು ಹೇಳಿದರು.
ಪೆರ್ಲ ಸಮೀಪದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶ್ರೀ ಮಹಾಲಿಂಗೇಶ್ವರ ಸಭಾಂಗಣದಲ್ಲಿ ಆಯೋಜಿಸಿದ್ದ ಉಚಿತ ಚೆಸ್ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾನತಾಡಿದರು.
ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್ ಚೆಸ್ ಆಟವಾಡುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ಕ್ಲಬ್ ಗೌರವಾಧ್ಯಕ್ಷ ಪದ್ಮನಾಭ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸಮಾಜಸೇವಕ ಸದಾಶಿವ ಭಟ್ ಹರಿನಿಲಯ ಅತಿಥಿಯಾಗಿದ್ದರು.
ಶಿಬಿರದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 50 ಮಂದಿ ಪಾಲ್ಗೊಂಡಿದ್ದರು. ಬಳಿಕ ನಡೆದ ಚೆಸ್ ಪಂದ್ಯಾಟದಲ್ಲಿ ತೀರ್ಪುಗಾರರಾಗಿ ಸ್ನಿತಿ ಎಸ್.ಭಟ್, ಮಂಜುನಾಥ ಭಟ್ ಸಹಕರಿಸಿದರು. ಸಮಾರೋಪ ಸಮಾರಂಭದಲ್ಲಿ ಡಾ.ಕೇಶವ ನಾಯ್ಕ ಖಂಡಿಗೆ ವಿಜೇತರಿಗೆ ಬಹುಮಾನ ವಿತರಿಸಿದರು. ರಾಜೇಶ್ ಮಾಸ್ಟರ್ ಸ್ವಾಗತಿಸಿದರು. ಪುರುಷೋತ್ತಮ ಬಿ.ಎಂ. ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ಕಾರ್ಯದರ್ಶಿ ನಿತ್ಯಾನಂದ ಬಜಕೂಡ್ಲು ವಂದಿಸಿದರು. ರಾವ್ಸ್ ಚೆಸ್ ಕಾರ್ನರ್ ಮಂಗಳೂರು ಸಹಯೋಗದೊಂದಿಗೆ ತರಬೇತಿ ಆಯೋಜಿಸಲಾಗಿತ್ತು.