ಉಡುಪಿಯಲ್ಲಿ ಆಯೋಜಿಸಿದ್ದ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಸಾಧಕ ಕೃಇಕರನ್ನು ಸನ್ಮಾನಿಸಲಾಯಿತು. ಕೆ. ರಘುಪತಿ ಭಟ್​, ನಾಗರಾಜ್​ ಕೆದ್ಲಾಯ, ಪಿ.ಎನ್​. ಶಶಿಧರ್​ ರಾವ್​, ಕೃಷ್ಣರಾಜ್​ ಭಟ್​, ವಾದಿರಾಜ್​ ಭಟ್​, ಸಂದೀಪ್​ ಮಂಜ, ರಾಮಕೃಷ್ಣ ಶರ್ಮ ಬಂಟಕಲ್ಲು, ಕುದಿ ಶ್ರೀನಿವಾಸ ಭಟ್​. ಡಾ. ಬಿ.ಧನಂಜಯ್​, ಮಮತಾ, ಆಶಾ ಭಟ್​, ಪ್ರಿಯಂವದಾ ಐತಾಳ್​ ಇದ್ದರು. 
ಉಡುಪಿ

ಜಮೀನು ಹಡೀಲು ಬಿಡುವುದು ಮಹಾಪಾಪ

* ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್​ ಅನಿಸಿಕೆ

* ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮ ಉದ್ಘಾಟನೆ

ಉಡುಪಿ: ದೇಶದ ಅಭಿವೃದ್ಧಿಗೆ ಕೃಷಿಯ ಕೊಡುಗೆ ದೊಡ್ಡದು. ಲಾಭ-ನಷ್ಟ ನೋಡದೆ ನಮ್ಮ ಹಿರಿಯರು ಕೃಷಿ ಮಾಡುತ್ತಿದ್ದರು. ಕೃಷಿ ಭೂಮಿ ಹಡೀಲು ಬಿಡುವುದು ಮಹಾಪಾಪ.  ಕೃಷಿ ಕಾರ್ಯ ಎಂದಿಗೂ ನಷ್ಟದಾಯಕವಲ್ಲ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್​ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಕರಂಬಳ್ಳಿಯ ವೆಂಕಟರಮಣ ದೇವಸ್ಥಾನದ ವಠಾರದಲ್ಲಿ ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಕರಂಬಳ್ಳಿ ಘಟಕ, ಉಡುಪಿ ಜಿಲ್ಲಾ ಕೃಷಿಕ ಸಂಘ ಕರಂಬಳ್ಳಿ ವಲಯ ಸಮಿತಿ, ದೇಗುಲದ ಆಡಳಿತ ಮಂಡಳಿ ಸಹಕಾರದಲ್ಲಿ ಸೋಮವಾರ (ಮೇ 25) ಆಯೋಜಿಸಿದ್ದ ಸಮಗ್ರ ಕೃಷಿ ಮಾಹಿತಿ, ಕೃಷಿ ವಸ್ತು ಪ್ರದರ್ಶನ ಮತ್ತು ಮಾರಾಟ, ಉಚಿತ ಗಿಡ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಧಕ ಕೃಷಿಕರಿಗೆ ಸನ್ಮಾನ

ಪ್ರಗತಿಪರ ಕೃಷಿಕರಾದ ರಮೇಶ್​ ಮರಕಾಲ ಬಂಡಸಾಲೆ, ರೋಕಿ ಡಿಸೋಜಾ ಪೆರಂಪಳ್ಳಿ, ಪ್ರಕಾಶ್​ ಮೂಡುಬೆಟ್ಟು, ರಿಕೇಶ್​ ಪಾಲನ್​ ಕಡೆಕಾರ್​, ಕರಂಬಳ್ಳಿ ಉಷಾ ಪೂಜಾರಿ, ಗುಲಾಬಿ ಪೂಜಾರಿ, ಶ್ರೀಧರ್​ ನಾಯಕ್​, ನಚಿಕೇತ ಪ್ರಭು ಮುದರಂಗಡಿ, ರವೀಂದ್ರ ನಾಯ್ಕ್​ ಕುದಿ ಇವರನ್ನು ಸನ್ಮಾನಿಸಲಾಯಿತು.
ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.) ಮಂಗಳೂರು ಆಡಳಿತ ಮಂಡಳಿ ಸದಸ್ಯ ನಾಗರಾಜ್​ ಕೆದ್ಲಾಯ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ಪಿ.ಎನ್​. ಶಶಿಧರ್​ ರಾವ್​ ಪೆರಂಪಳ್ಳಿ, ಕರಂಬಳ್ಳಿ ಬ್ರಾಹ್ಮಣ ಸಮಿತಿಯ ಕೃಷ್ಣರಾಜ್​ ಭಟ್​, ದೇವಸ್ಥಾನದ ಅರ್ಚಕ
ದಿವಾಕರ್​ ಐತಾಳ್​, ಕರ್ಣಾಟಕ ಬ್ಯಾಂಕ್​ನ ಎಜಿಎಂ ವಾದಿರಾಜ್​ ಭಟ್​, ಉಡುಪಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಸಂದೀಪ್​ ಮಂಜ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್​. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಬಿ.ಧನಂಜಯ್​, ಕೃಷಿ ಇಲಾಖೆಯ ಅಧಿಕಾರಿ ಮಮತಾ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್​, ಪಶುವೈದ್ಯಾಧಿಕಾರಿ ಡಾ.ಪ್ರಶಾಂತ್​ ಶೆಟ್ಟಿ ಕೃಷಿಕರಿಗೆ ಮಾಹಿತಿ, ಮಾರ್ಗದರ್ಶನ ನೀಡಿದರು.
ಪೆರಂಪಳ್ಳಿ ವಲಯ ಕೃಷಿಕ ಸಂಘದ ಅಧ್ಯಕ್ಷ ರವೀಂದ್ರ ಪೂಜಾರಿ ಶೀಂಬ್ರ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್​, ರಂಗನಾಥ್​ ಸಾಮಗ, ಹರಿಕೃಷ್ಣ ಶಿವತ್ತಾಯ. ಆಶಾ ಭಟ್​, ಪ್ರಿಯಂವದಾ ಐತಾಳ್​, ರಮೇಶ್​ ಬಾರಿತ್ತಾಯ ಇತರರು ಪಾಲ್ಗೊಂಡಿದ್ದರು.
ಸ್ಮಿತಾ ಎನ್​. ಭಟ್​ ರೈತಗೀತೆ ಹಾಡಿದರು. ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್​ ಸ್ವಾಗತಿಸಿದರು. ವಿಆರ್​ಡಿಎಫ್​ ಕರಂಬಳ್ಳಿ ಘಟಕಾಧ್ಯಕ್ಷ ಶ್ರೀಪತಿ ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್​ ಭಟ್​ ವಂದಿಸಿದರು. ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
"

ಕರೊನಾ ಕಾಲದಲ್ಲಿ ರಾಜಕೀಯೇತರವಾಗಿ ಉಡುಪಿ ವಲಯದಲ್ಲಿ ಮಾಡಿದ್ದ ಹಡೀಲು ಭೂಮಿ ಭತ್ತದ ಕೃಷಿ ಅಭಿಯಾನದ ಪ್ರಯೋಗವು ಜಿಲ್ಲೆ ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲಿ ಕೃಷಿಕರನ್ನು ಉತ್ತೇಜಿಸಿತ್ತು. ಸರ್ಕಾರದ ಇಲಾಖೆಗಳೂ ಕೈ ಜೋಡಿಸುವಂತೆ ಮಾಡಿತ್ತು. ನಗರಕ್ಕೆ ದುಡಿಯಲು ಹೋಗಿದ್ದ ಕೃಷಿಕರ ಮಕ್ಕಳೂ ಸಹ ಮರಳಿ ಕೃಷಿಗೆ ಬಂದವರಿದ್ದಾರೆ. ಹಲವಾರು ಕೃಷಿ ಉದ್ಯಮಿಗಳೂ ಸೃಷ್ಟಿಯಾಗಿದ್ದರು.

— ಕೆ. ರಘುಪತಿ ಭಟ್​. ಉಡುಪಿಯ ಮಾಜಿ ಶಾಸಕ.