ಉಡುಪಿಯ ಮಹತೋಭಾರ ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ನಡೆದ ರಾಶಿ ಪೂಜೆ ಕಾರ್ಯಕ್ರಮ ಸುಗುಣೇಂದ್ರ ಶ್ರೀಗಳ ಸಾನ್ನಿಧ್ಯದಲ್ಲಿ ಸಂಪನ್ನಗೊಂಡಿತು. ಶುಶ್ರೀಂದ್ರ ಶ್ರೀ ಹಾಗೂ ಇತರರು ಇದ್ದರು.
* ಅನಂತೇಶ್ವರ, ಚಂದ್ರಮೌಳೀಶ್ವರನ ರಥೋತ್ಸವ
ಉಡುಪಿ: ಅಷ್ಟ ಮಂಗಲ ಪ್ರಶ್ನೆಯಲ್ಲಿ ಸೂಚಿತವಾದಂತೆ ಹಾಗೂ ಆಡಳಿತ ಮೊಕ್ತೇಸರರಾದ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ಆದೇಶದಂತೆ ಉಡುಪಿಯ ಮಹತೋಭಾರ ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ನಡೆದ ರಾಶಿ ಪೂಜೆ ಗುರುವಾರ (ಡಿ.25) ಬೆಳಗ್ಗೆ ಸಂಪನ್ನಗೊಂಡಿದೆ.
ಒಂದು ದಿನ ಪರ್ಯಂತ ನಿರಂತರವಾಗಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಹಿಂದಿನ ದಿನ ರಾತ್ರಿ ನಡೆದ ಭಗವಂತನ ನಾಮಸ್ಮರಣೆ ಹಾಗೂ ಕುಣಿತ ಭಜನೆಯಲ್ಲಿ ಸುಗುಣೇಂದ್ರ ಶ್ರೀ ಹಾಗೂ ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ಶ್ರೀಗಳು ಪಾಲ್ಗೊಂಡು ದೇವರ ಸಂಕೀರ್ತನೆ ಹಾಡುತ್ತ ಹೆಜ್ಜೆ ಹಾಕಿದರು.
ಡಿ.24ರ ಬೆಳಗ್ಗೆ 6:19ರ ಧನುರ್ಲಗ್ನದಲ್ಲಿ ರಾಶಿ ಪೂಜೆ ಆರಂಭಗೊಂಡು ಡಿ.25ರ ಬೆಳಗ್ಗೆ 6:14ರ ವೃಶ್ಚಿಕ ಲಗ್ನದಲ್ಲಿ ರಾಶಿ ಪೂಜೆ ಸಮಾಪ್ತಿಗೊಂಡಿತು. ಕಾರ್ಯಕ್ರಮದ ನಿಮಿತ್ತ ರಥಬೀದಿಯಲ್ಲಿ ರಥೋತ್ಸವ ನಡೆಯಿತು. ಪರ್ಯಾಯ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು. ರಾಸಿ ಪೂಜೆಯ ದಿನ ಮಧ್ಯಾಹ್ನ 12:30ರಿಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ ಹಾಗೂ ಮಠದ ಶಿಷ್ಯರು ಪಾಲ್ಗೊಂಡಿದ್ದರು.