ಆರೋಗ್ಯ ತಪಾಸಣಾ ಶಿಬಿರ ಬೆಳ್ಳಿಪ್ಪಾಡಿ ರಾಜೇಂದ್ರ ರೈ ಉದ್ಘಾಟಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ಮೊದಲಾದವರಿದ್ದರು.
ಕಡಬ: ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರ ಸಹಭಾಗಿತ್ವ ಅಗತ್ಯ. ಸಮುದಾಯ ಸಹಕಾರ ಇದ್ದಾಗ ಮಾತ್ರ ಯಾವುದೇ ಕೆಲಸ ಯಶಸ್ಸು ಪಡೆಯಲು ಸಾಧ್ಯ ಎಂದು ಬ್ಯಾಂಕ್ ಆಫ್ ಬರೋಡ ಸಂಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಬೆಳ್ಳಿಪ್ಪಾಡಿ ರಾಜೇಂದ್ರ ರೈ ಅಭಿಪ್ರಾಯಪಟ್ಟರು.
ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಬ್ಯಾಂಕ್ ಆಫ್ ಬರೋಡ ಸಂಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ, ಆಸ್ಪತ್ರೆಯ ದ್ರವತ್ಯಾಜ್ಯ ನಿರ್ವಹಣೆಗಾಗಿ ಪ್ರತಿಷ್ಠಾನದ ಆರ್ಥಿಕ ನೆರವಿನಿಂದ ನಿರ್ಮಿಸಲಾದ ಇಂಗುಗುಂಡಿ ಬಳಕೆಗೆ ಚಾಲನೆ ನೀಡಿ ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅಧ್ಯಕ್ಷತೆವಹಿಸಿದ್ದರು. ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್, ಜೇಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ, ಬ್ಯಾಂಕ್ ಆಫ್ ಬರೋಡದ ಕೋಡಿಂಬಾಳ ಶಾಖಾ ಪ್ರಬಂಧಕ ರಾಮ್‌ಕುಮಾರ್ ಶುಭಹಾರೈಸಿದರು.
ಆಸ್ಪತ್ರೆ ನಿವೃತ್ತ ಆಡಳಿತ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ಕೆ.ವಿ., ದಂತ ವೈದ್ಯೆ ಡಾ.ಪದ್ಮಶ್ರೀ, ಆಯುಷ್ ವೈದ್ಯೆ ಡಾ.ಅಶ್ವಧಿ, ಕಚೇರಿ ಅಧೀಕ್ಷಕ ಸುನೀಲ್, ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ ಸಿ. ಸ್ವಾಗತಿಸಿದರು. ಸಿಬ್ಬಂದಿ ಜಿನ್ಸಿ ಕೆ.ಟಿ. ನಿರೂಪಿಸಿ, ಜೆಸಿಂತಾ ವಂದಿಸಿದರು.
ಗೌರವಾರ್ಪಣೆ
ಆರ್ಥಿಕ ನೆರವು ನೀಡಿದ ಬೆಳ್ಳಿಪ್ಪಾಡಿ ರಾಜೇಂದ್ರ ರೈ ಹಾಗೂ ಜ್ಯೋತಿರಾಜ್ ಅವರನ್ನು ಗೌರವಿಸಲಾಯಿತು. ಆಸ್ಪತ್ರೆಗೆ ವಾಲ್ ಫ್ಯಾನ್ ಕೊಡುಗೆ ನೀಡಿದ ದಯಾನಂದ ಗೌಡ ಆರಿಗ, ಕಾರ್ತಿಕ್ ಪಿಜಕಳ, ಇಂಗುಗುಂಡಿಗೆ ಬಳಸಲು ಉಚಿತವಾಗಿ ಮರಳು ನೀಡಿದ ಸಿವಿಲ್ ಇಂಜಿನಿಯರ್ ನಾಗೇಶ್ ಕೋಡಿಂಬಾಳ ಅವರನ್ನು ಅಭಿನಂದಿಸಲಾಯಿತು.