ನಿತ್ಯಾನಂದ ಕೆಮ್ಮಣ್ಣು ಅವರ ಪುಣ್ಯಸ್ಮರಣೆ ನಿಮಿತ್ತ ರಕ್ತದಾನ ಶಿಬಿರ ನಡೆಯಿತು. ದಿನಕರ್​ ಹೇರೂರು, ವೆರೋನಿಕಾ ಕರ್ನೇಲಿಯೋ, ರಘುರಾಮ್​ ಶೆಟ್ಟಿ. ಜನಾರ್ದನ್​ ತೋನ್ಸೆ, ರಾಘವೇಂದ್ರ ಶೆಟ್ಟಿ, ಕುಮಾರ್​ ಸುವರ್ಣ, ಪ್ರಖ್ಯಾತ ಶೆಟ್ಟಿ, ಆಶಾ ಚಂದ್ರಶೇಖರ್​, ಯಶೋದಾ ಇತರರಿದ್ದರು. 
ಉಡುಪಿ

ನಿತ್ಯಾನಂದ ಕೆಮ್ಮಣ್ಣು ಪುಣ್ಯಸ್ಮರಣೆ

* ಅಭಿಮಾನಿಗಳಿಂದ ರಕ್ತದಾನ 

ಉಡುಪಿ: ಜಿಲ್ಲಾ ಕರಾಟೆ ಸಂಘದ ಅಧ್ಯಕ್ಷರು, ಗ್ರಾಪಂ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್​ನ ಮುಖಂಡರೂ ಆಗಿದ್ದ ನಿತ್ಯಾನಂದ ಕೆಮ್ಮಣ್ಣು ಅವರ 5ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಕೆಮ್ಮಣ್ಣಿನ ಲಿಟ್ಲ್​ ಫ್ಲವರ್​ ಹಾಲ್​ನಲ್ಲಿರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ನಿತ್ಯಾನಂದ ಅಭಿಮಾನಿ ಬಳಗ, ಗ್ರಾಮೀಣ ಕಾಂಗ್ರೆಸ್​ ಕೆಮ್ಮಣ್ಣು, ಐಸಿವೈಎಂ ಕೆಮ್ಮಣ್ಣು, ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ, ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ ಹೂಡೆ, ತೋನ್ಸೆ ಫ್ರೆಂಡ್ಸ್​ ಹೂಡೆ, ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕೆಮ್ಮಣ್ಣು ಚರ್ಚ್​ನ ಧರ್ಮಗುರು ವಂ. ಫಿಲಿಪ್​ ನೇರಿ ಅರನ್ಹ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್​ ಹೇರೂರು, ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೋ, ಗ್ರಾಮೀಣ ಕಾಂಗ್ರೆಸ್​ ಅಧ್ಯಕ್ಷ ರಘುರಾಮ್​ ಶೆಟ್ಟಿ. ಜನಾರ್ದನ್​ ತೋನ್ಸೆ, ರಮೇಶ್​ ಕಾಂಚನ್​, ರಾಘವೇಂದ್ರ ಶೆಟ್ಟಿ, ಕುಮಾರ್​ ಸುವರ್ಣ, ಪ್ರಖ್ಯಾತ ಶೆಟ್ಟಿ, ಅಮೃತ್​ ಶೆಣೈ, ಕೀರ್ತಿ ಶೆಟ್ಟಿ, ರಮೇಶ್​ ಕರ್ಕೇರ, ಉದಯ ಆಚಾರ್ಯ, ಪ್ರಶಾಂತ್​ ಸುವರ್ಣ, ಸೂರ್ಯ ಸಾಲ್ಯಾನ್​, ವಸಂತ್​, ಯಶೋದಾ, ಮಹೇಶ್​, ಆಶಾ ಚಂದ್ರಶೇಖರ್​, ಸುಂದರ್​ ಶೆಟ್ಟಿ, ನಿತ್ಯಾನಂದ ಅವರ ಸಹೋದರ ಓಂಪ್ರಕಾಶ್​, ಗುರುರಾಜ್​ ಭಟ್​, ನೋಯೆಲ್​ ಲೋಬೊ ಇತರರು ಉಪಸ್ಥಿತರಿದ್ದರು.
ರೋಹಿತಾಕ್ಷ, ರತನ್​ ಸುವರ್ಣ, ಜಾಯ್ಸ್​ವನ್​ ಡಿಸೋಜ,ಆಸೀಫ್​ ಹೂಡೆ, ಡಾ. ವೀಣಾ ಸಹಕರಿಸಿದರು. ನಿತ್ಯಾನಂದ ಕೆಮ್ಮಣ್ಣು ಅವರ ಅಭಿಮಾನಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ಇಲಿಯಾಸ್​ ಕೆಮ್ಮಣ್ಣು ಕಾರ್ಯಕ್ರಮ ನಿರ್ವಹಿಸಿದರು.