ಉಡುಪಿಯಲ್ಲಿ ಆಯೋಜಿಸಿದ್ದ ಕೃಷ್ಣಮೂರ್ತಿ ರಾವ್​ ಕೊಡವೂರು, ಗುರುರಾಜ್​ ಐತಾಳ್​ ಸಂಸ್ಮರಣೆ ಕಾರ್ಯಕ್ರಮದಲ್ಲಿ ನಾಟ್ಯಾಚಾರ್ಯ ನಾರಾಯಣ ಭಟ್​ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆ. ನಾರಾಯಣ ಬಲ್ಲಾಳ್​, ಪ್ರೊ. ಎಂ.ಎಲ್​. ಸಾಮಗ, ಯತೀಶ್​ ಬೈಕಂಪಾಡಿ, ಲಕ್ಷ್ಮೀ ಗುರುರಾಜ್​ ಇದ್ದರು. 
ಉಡುಪಿ

ಸಂಗೀತ-ಕಲಾ ಕ್ಷೇತ್ರ ಬೆಳಗಿದ ಕೃಷ್ಣಮೂರ್ತಿ ರಾವ್​

* ಕೆ. ನಾರಾಯಣ ಬಲ್ಲಾಳ್​ ಅನಿಸಿಕೆ

* ಸಂಸ್ಮರಣಾ ಪ್ರಶಸ್ತಿ ಪ್ರದಾನ

B ಬರುವಾಗ ಕತ್ತಲೆ, ಹೋಗುವಾಗ ಕತ್ತಲೆ. ಈ ಎರಡು ಸ್ಥಿತಿಯ ಮಧ್ಯೆ ಬೆಳಕಾಗಬೇಕು, ಬೆಳಕು ಪಸರಿಸಬೇಕು ಎಂಬ ಸ್ವಾಮಿ ವಿವೇಕಾನಂದ ಅವರ ಮಾತಿಗೆ ಕೊಡವೂರಿನ ಕೃಷ್ಣಮೂರ್ತಿ ರಾವ್​ ಪೂರಕವಾಗಿದ್ದರು. ಬ್ಯಾಂಕ್​ ಉದ್ಯೋಗಿಯಾಗಿದ್ದರೂ ಸಂಗೀತ, ಕಲಾ ಕ್ಷೇತ್ರವನ್ನು ಬೆಳಗಿದ್ದರು. ಅವರ ಅಳಿಯನಾಗಿದ್ದ ಗುರುರಾಜ್​ ಐತಾಳ್​ ಕಲಾ ಪೋಷಕರಾಗಿ ಕಲೆಯನ್ನು ಪಸರಿಸಿದವರು ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೆ. ನಾರಾಯಣ ಬಲ್ಲಾಳ್​ ತಿಳಿಸಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಲಕ್ಷ್ಮೀ ಗುರುರಾಜ್​ ಎನ್​ಎನ್​ಯು (ರಿ.) ವತಿಯಿಂದ ಶನಿವಾರ (ಮೇ 23) ಆಯೋಜಿಸಿದ್ದ ದಿ. ಕೃಷ್ಣಮೂರ್ತಿ ರಾವ್​ ಕೊಡವೂರು ಮತ್ತು ಪೋಷಕರಾದ ದಿ. ಗುರುರಾಜ್​ ಐತಾಳ್​ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕೆ. ನಾರಾಯಣ ಬಲ್ಲಾಳ್​ ಉದ್ಘಾಟಿಸಿದರು.
ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್​. ಸಾಮಗ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್​ ಕ್ರಾಸ್​ ದಕ್ಷಿಣ ಕನ್ನಡ ಶಾಖೆಯ ಆಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷ ಯತೀಶ್​ ಬೈಕಂಪಾಡಿ ಉಪಸ್ಥಿತರಿದ್ದರು. 

ಪ್ರಶಸ್ತಿ ಪ್ರದಾನ

ನಾಟಿವೈದ್ಯರೂ ಆದ ಪ್ರಸಿದ್ಧ ನಾಟ್ಯಾಚಾರ್ಯ ನಾರಾಯಣ ಭಟ್​ ಉಡುಪಿ ಅವರಿಗೆ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೇಧಿನಿ ಭಟ್​ ಪ್ರಾರ್ಥಿಸಿದರು. ಸಂಸ್ಥೆಯ ಟ್ರಸ್ಟಿ ಚಂದ್ರಶೇಖರ್​ ರಾವ್​ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕಿ ಲಕ್ಷ್ಮೀ ಗುರುರಾಜ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್​ ತಂತ್ರಿ ಕಾರ್ಯಕ್ರಮ ನಿರ್ವಹಿಸಿದರು. 
ಸಭಾ ಕಾರ್ಯಕ್ರಮದ ಬಳಿಕ ಲಕ್ಷ್ಮೀ ಗುರುರಾಜ್​ ನೃತ್ಯನಿಕೇತನ ಉಡುಪಿ ಕಲಾವಿದರಿಂದ 'ನೃತ್ಯ ನೀರಾಜನಂ' ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.