ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ವಿಜ್ಞಾನಿ ವಿನಾಯಕ ಕೆ.ಪತ್ತಾರ್ ಅವರಿಂದ ವಿಜ್ಞಾನ ಪ್ರಾತ್ಯಕ್ಷಿಕೆ ನಡೆಯಿತು. ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಪ್ರಹ್ಲಾದ ರಾಮರಾವ್, ಬಿ.ಆರ್.ಗುರುಪ್ರಸಾದ್ ಮತ್ತಿತರರಿದ್ದರು. 
ಉಡುಪಿ

ಆತ್ಮನಿರ್ಭರರಾಗಿ ಸಮಾಜಕ್ಕೆ ಬನ್ನಿ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಮಕ್ಕಳು ತಾವು ಏನಾಗಬೇಕೆಂಬುದನ್ನು ತಾವೇ ಆಲೋಚನೆ ಮಾಡುವ ಮೂಲಕ ಆತ್ಮನಿರ್ಭರರಾಗಿ ಸಮಾಜಕ್ಕೆ ಬರಬೇಕು ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
ಅದಮಾರು ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಜವಾಹರಲಾಲ್ ನೆಹರು ತಾರಾಲಯ ನಿರ್ದೇಶಕ ಬಿ.ಆರ್.ಗುರುಪ್ರಸಾದ್, ಬೆಂಗಳೂರು ಜೆಎನ್‌ಸಿಎಎಸ್‌ಆರ್ ಸಂಶೋಧಕ ವಿನಾಯಕ ಕೆ. ಪತ್ತಾರ್ ಮಾತನಾಡಿದರು. ನೂತನ ಸುಜ್ಞಾನ ಮಂದಿರ, ಪ್ರಜ್ಞಾಮೃತ ಪ್ರದರ್ಶಿನಿ ವಸ್ತುಪ್ರದರ್ಶನವನ್ನು ಉಭಯ ಶ್ರೀಗಳು ಉದ್ಘಾಟಿಸಿದರು. ವಿನಾಯಕ ಕೆ.ಪತ್ತಾರ್ ವಿಜ್ಞಾನ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕಟ್ಟಡ ಇಂಜಿನಿಯರ್ ರಾಜೇಂದ್ರ ಮಯ್ಯ, ಗುತ್ತಿಗೆದಾರ ಲಕ್ಷ್ಮೀನಾರಾಯಣ ಉಪಾಧ್ಯಾಯ, ವಿದ್ಯುತ್ ಗುತ್ತಿಗೆದಾರ ಶ್ರೀಪತಿ ಭಟ್ ಅವರನ್ನು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅಭಿನಂದಿಸಿದರು.
ಸಂಸ್ಥೆ ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಎರ್ವಾಳು ಉದಯ ಕೆ.ಶೆಟ್ಟಿ ಉಪಸ್ಥಿತರಿದ್ದರು. ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ ಗೌರವ ಕಾರ್ಯದರ್ಶಿ ಎ.ಪಿ.ಭಟ್ ಸ್ವಾಗತಿಸಿದರು. ಅದಮಾರು ಸಂಸ್ಥೆ ಗೌರವ ಕಾರ್ಯದರ್ಶಿ ಶ್ರೀಧರ ರಾವ್ ವಂದಿಸಿದರು. ಸಂಸ್ಕೃತ ಉಪನ್ಯಾಸಕ ಜಯಶಂಕರ್ ಕಂಗಣ್ಣಾರು ನಿರೂಪಿಸಿದರು.

ಗಮನ ಸೆಳೆದ ವಿಜ್ಞಾನ ಪ್ರದರ್ಶನ

ಶಾಲಾ ವಿದ್ಯಾರ್ಥಿಗಳು ರೂಪಿಸಿದ, ಇಸ್ರೋ, ಜೆಎನ್ ತಾರಾಲಯ ಹಾಗೂ ಜೆಎನ್‌ಸಿಎಎಸ್‌ಆರ್ ಬೆಂಗಳೂರಿನ ವಿಶೇಷ ವಿಜ್ಞಾನ ಪ್ರದರ್ಶನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಗಮನ ಸೆಳೆಯಿತು.

ಗೀತೆಯಲ್ಲಿ ಶ್ರೀಕೃಷ್ಣ ಕೊಟ್ಟ ಸಂದೇಶದಂತೆ ಸುಸಂಸ್ಕೃತರಾಗಿ, ಜ್ಞಾನ ಸಂಪಾದನೆ ಮಾಡಿ ಶಾಸ್ತ್ರವನ್ನಿಟ್ಟುಕೊಂಡು ಸಮಾಜ ತಿದ್ದುವ ಕೆಲಸ ಮಾಡುವವರು, ಜ್ಞಾನಿಗಳನ್ನು ತಯಾರು ಮಾಡಬೇಕೆಂಬ ಉದ್ದೇಶವನ್ನಿಟ್ಟುಕೊಂಡು ವಿಭುದೇಶ ತೀರ್ಥರು ಅದಮಾರಿನ ಈ ಹಳ್ಳಿಯಲ್ಲಿ ಸಂಸ್ಥೆ ಆರಂಭ ಮಾಡಿದ್ದರು. ಅಂತಹ ಶಿಕ್ಷಿತ, ಸುಸಂಸ್ಕೃತ ಮಕ್ಕಳನ್ನು ತಯಾರು ಮಾಡುವಲ್ಲಿ 75 ವರ್ಷ ಸಾರ್ಥಕ ಬದುಕನ್ನು ಕಂಡಿರುವ ಈ ಸಂಸ್ಥೆ ನೂರಾರು ಕಾಲ ಚೆನ್ನಾಗಿ ಬಾಳಲಿ.

ವ್ಯಕ್ತಿ ನಿರ್ವಾಣ ಸರಿಯಾಗಿ ಮಾಡಿದರೆ ಅವರು ರಾಷ್ಟ್ರ ನಿರ್ವಾಣಕ್ಕೆ ಒಲಿಯುತ್ತಾರೆ. ಸಾವಿರಾರು ವರ್ಷಗಳ ಹಿಂದೆ ಭಾರತ ದೇಶದಲ್ಲಿ ಸಕಲವೂ ಇದ್ದರೂ ಸರಿಯಾದ ರಕ್ಷಣಾ ವ್ಯವಸ್ಥೆ ಇರದೆ ನಮ್ಮ ಮೇಲೆ ಆಕ್ರಮಣಗಳಾದವು. ವಿಕಸಿತ ಭಾರತ ಸಾಧ್ಯವಾಗಲು ಪೂರ್ಣಪ್ರಜ್ಞದಂಥ ವಿದ್ಯಾಸಂಸ್ಥೆಗಳು ಶ್ರಮಿಸುತ್ತಿವೆ. ವಿಜ್ಞಾನಿಗಳಾಗಿ ಈ ವರ್ಷದೊಳಗಾಗಿ ಭಾರತದ ಶಕ್ತಿ ಬಗ್ಗೆ ೋಷಣೆ ಮಾಡಲಿದ್ದೇವೆ.