ಉಡುಪಿ ಜಿಲ್ಲಾಸ್ಪತ್ರೆಗೆ ಸಹಕಾರಿ ಮೀನು ಮಾರಾಟ ಫೆಡರೇಷನ್ನಿಂದ ಕೊಡುಗೆಯಾಗಿ ನೀಡಿದ ಎಕ್ಸರೇ ಯಂತ್ರ ಉದ್ಘಾಟಿಸಿದ ಯಶ್ಪಾಲ್ ಸುವರ್ಣ ಮಾತನಾಡಿದರು. ಡಾ. ಎಚ್.ಅಶೋಕ್, ದೇವಪ್ಪ ಕಾಂಚನ್, ರಾಮಚಂದ್ರ ಕುಂದರ್, ಸುರೇಶ್ ಸಾಲ್ಯಾನ್, ಪ್ರಭಾಕರ್ ಪೂಜಾರಿ, ರಶ್ಮಿ ಸಿ. ಭಟ್, ಸುಂದರ್ ಕಲ್ಮಾಡಿ, ಯೋಗೀಶ್ ಸಾಲ್ಯಾನ್, ಟಿ.ಜಿ. ಹೆಗ್ಡೆ, ಹರೀಶ್ ಶೆಟ್ಟಿ, ಎಡ್ಲಿನ್ ಕರ್ಕಡ, ದಯಾನಂದ ಸುವರ್ಣ, ಜಗನ್ನಾಥ್ ಕಡೆಕಾರ್, ಸುಭಾಷ್ ಮೆಂಡನ್, ಸತೀಶ್ ಕುಂದರ್, ನಾಗರಾಜ್ ಸುವರ್ಣ ಇತರರಿದ್ದರು.
* ಶಾಸಕ ಯಶ್ಪಾಲ್ ಸುವರ್ಣ ಆಶಯ
* ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸರೇ ಯಂತ್ರ ಹಸ್ತಾಂತರ
ಉಡುಪಿ: ಇತ್ತೀಚೆಗೆ ಉಡುಪಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಕ್ಸರೇ ಸೇವೆಯ ವ್ಯತ್ಯಯದಿಂದ ರೋಗಿಗಳಿಗೆ ಸಮಸ್ಯೆ ಉಂಟಾಗುತ್ತಿರುವ ವಿಚಾರ ತಿಳಿಯಿತು. ಮೀನು ಮಾರಾಟ ಫೆಡರೇಷನ್ ಮೂಲಕ ಜಿಲ್ಲಾಸ್ಪತ್ರೆಗೆ ಹೊಸ ಎಕ್ಸರೇ ಯಂತ್ರ ನೀಡಲಾಗಿದೆ. ಇದರಿಂದ ಜಿಲ್ಲಾಸ್ಪತ್ರೆಗೆ ದಿನನಿತ್ಯ ಚಿಕಿತ್ಸೆಗೆ ಬರುವ ನೂರಾರು ಬಡ ರೋಗಿಗಳಿಗೆ ಈ ಸೌಲಭ್ಯ ಲಭಿಸುವಂತಾಗಲಿ ಎಂದು ಸಂಸ್ಥೆಯ ಅಧ್ಯಕ್ಷ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಶಯ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾಸ್ಪತ್ರೆಯ ರೋಗಿಗಳ ಸೇವೆಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಮಂಗಳೂರು ವತಿಯಿಂದ ಶನಿವಾರ (ಮಾ.7) ಕೊಡುಗೆಯಾಗಿ ನೀಡಿದ ಎಕ್ಸರೇ ಯಂತ್ರ ಉದ್ಘಾಟಿಸಿ ಮಾತನಾಡಿದರು.
ಫೆಡರೇಷನ್ನ ಉಪಾಧ್ಯಕ್ಷ ದೇವಪ್ಪ ಕಾಂಚನ್, ನಿರ್ದೇಶಕರಾದ ರಾಮಚಂದ್ರ ಕುಂದರ್, ಸುರೇಶ್ ಸಾಲ್ಯಾನ್, ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ರಶ್ಮಿ ಸಿ. ಭಟ್, ಸುಂದರ್ ಕಲ್ಮಾಡಿ, ಯೋಗೀಶ್ ಸಾಲ್ಯಾನ್, ಟಿ.ಜಿ. ಹೆಗ್ಡೆ, ಹರೀಶ್ ಶೆಟ್ಟಿ, ಎಡ್ಲಿನ್ ಕರ್ಕಡ, ಮೀನುಗಾರ ಮುಖಂಡರಾದ ದಯಾನಂದ ಸುವರ್ಣ, ಜಗನ್ನಾಥ್ ಕಡೆಕಾರ್, ಸುಭಾಷ್ ಮೆಂಡನ್, ಸತೀಶ್ ಕುಂದರ್, ನಾಗರಾಜ್ ಸುವರ್ಣ ಉಪಸ್ಥಿತರಿದ್ದರು.
ಪ್ರಮುಖರಾದ ರತ್ನಾಕರ ಸಾಲ್ಯಾನ್, ಸುಂದರ ಸಾಲ್ಯಾನ್, ವಿನಯ್ ಕರ್ಕೇರ, ಕರುಣಾಕರ್ ಸಾಲ್ಯಾನ್, ನಾಗರಾಜ್ ಕುಂದರ್, ಮಿಥುನ್ ಕುಂದರ್, ಕೃಷ್ಣ ಕೋಟ್ಯಾನ್, ಗೀತಾ ಕರ್ಕೇರ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್, ಪ್ರಮುಖರಾದ ಸುನೀಲ್ ನೇಜಾರು, ಸುಭಾಷಿತ್, ರಾಘವೇಂದ್ರ ಆಚಾರ್ಯ, ಸುನೀತಾ ಭಂಡಾರಿ, ಸುಧಾಕರ್ ಪ್ರಭು, ಉಡುಪಿ ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ವಾಸುದೇವ್, ವೈದ್ಯರಾದ ಡಾ. ಆಮ್ನಾ ಇತರರು ಪಾಲ್ಗೊಂಡಿದ್ದರು.
ಜಿಲ್ಲಾಸ್ಪತ್ರೆಯಲ್ಲಿ ಎಕ್ಸರೇ ಯಂತ್ರ ಹಾಳಾಗಿದ್ದರಿಂದ ರೋಗಿಗಳಿಗೆ ಈ ಸೇವೆ ನೀಡಲು ಆಗುತ್ತಿರಲಿಲ್ಲ. ಮೀನು ಮಾರಾಟ ಫೆಡರೇಷನ್ ವತಿಯಿಂದ ಈ ಯಂತ್ರ ಕೊಡುಗೆಯಾಗಿ ನೀಡಿದ್ದರಿಂದ ಜನರಿಗೆ ಈ ಸೌಲಭ್ಯ ನೀಡಬಹುದಾಗಿದೆ. ಶಾಸಕ ಯಶ್ಪಾಲ್ ಸುವರ್ಣ ಹಾಗೂ ಫೆಡರೇಷನ್ನ ಆಡಳಿತ ಮಂಡಳಿಯ ನಿರ್ದೇಶಕರಿಗೆ ಜಿಲ್ಲಾಸ್ಪತ್ರೆಯ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ.