ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಪೌರಾಯುಕ್ತ ಮಹಂತೇಶ್​ ಹಂಗರಗಿಮಾತನಾಡಿದರು.  
ಉಡುಪಿ

ಬ್ರಹ್ಮಗಿರಿ-ಬನ್ನಂಜೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಆಗ್ರಹ

ಉಡುಪಿ: ಬನ್ನಂಜೆ ನಾರಾಯಣಗುರು ಸರ್ಕಲ್​ನಿಂದ ಬ್ರಹ್ಮಗಿರಿ ಸರ್ಕಲ್​ವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮುಂದಿನ ಬಜೆಟ್​ನಲ್ಲಿ ಅನುದಾನ ಮೀಸಲಿಡುವಂತೆ ಮಾಜಿ ನಗರಸಭಾ ಸದಸ್ಯ ಶ್ರೀನಿವಾಸ್​ ತೋನ್ಸೆ ಆಗ್ರಹಿಸಿದ್ದಾರೆ.

ಬುಧವಾರ ನಗರಸಭೆಯಲ್ಲಿ 2026-&27 ನೇ ಸಾಲಿನ ಬಜೆಟ್​ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಬ್ರಹ್ಮಗಿರಿ&ಬನ್ನಂಜೆವರೆಗೆ 14 ಸರ್ಕಾರಿ ಕಚೇರಿಗಳಿವೆ. ಶೇ. 90ರಷ್ಟು ಸರ್ಕಾರಿ ಜಾಗವೇ ಇರುವುದರಿಂದ ಭೂಸ್ವಾಧಿನ ಪ್ರಕ್ರಿಯೆಯೂ ಕಷ್ಟವಾಗದು. ಈಗಾಗಲೇ ಚತುಷ್ಪಥ ರಸ್ತೆಗಾಗಿ ಜಾಗ ಗುರುತು ಮಾಡದೇ ಇದ್ದರೆ ಗೂಡಂಗಡಿಗಳು ತಲೆಎತ್ತಲಿದ್ದು, ಮತ್ತೆ ತೆರವು ಕಾರ್ಯಾಚರಣೆ ಕಷ್ಟವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಪಾದಚಾರಿಗಳಿಗೆ ನಗರದಲ್ಲಿ ನಡೆಯಲೂ ಸಾಧ್ಯವಾಗುತ್ತಿಲ್ಲ. ಕೆಲವೆಡೆ ುಟ್​ಪಾತ್​ಗಳನ್ನು ಕೆಲವು ಅಂಗಡಿಯವರು ಅತಿಕ್ರಮಿಸಿಕೊಂಡಿದ್ದಾರೆ. ಅನೇಕ ಕಡೆ ಚರಂಡಿ ಸ್ಲಾಬ್​ ಒಡೆದು ುಟ್​ಪಾತ್​ಗಳಲ್ಲಿ ನಡೆಯುವುದೇ ಕಷ್ಟವಾಗಿದೆ. ಸರ್ವಿಸ್​ ಬಸ್​ ನಿಲ್ದಾಣದ ಕ್ಲಾಕ್​ ಟವರ್​ನಲ್ಲಿ ಟವರ್​ ಮಾತ್ರ ಇದೆ. ಕ್ಲಾಕ್​ ಇಲ್ಲ. ಇದನ್ನು ಸರಿಪಡಿಸಬೇಕು ಎಂದರು.

ರಸ್ತೆಯಲ್ಲೇ ತರಕಾರಿ ಸಂತೆ
ಡೆಂಟಲ್​ ಅಸೋಸಿಯೇಶನ್​ ಸದಸ್ಯ ಡಾ. ವಿಜಯೇಂದ್ರ ಮಾತನಾಡಿ, ಆಭರಣ ಜುವೆಲ್ಲರಿ ಸಮೀಪ ಸಾಯಂಕಾಲದ ವೇಳೆ ತರಕಾರಿ ವ್ಯಾಪಾರಿಗಳು ಮತ್ತು ತಳ್ಳುಗಾಡಿ ವ್ಯಾಪಾರಿಗಳಿಂದ ವಾಹನ ಸಂಚಾರಕ್ಕೆ ತೊಡಕಾಗುತ್ತಿದ್ದು, ಇವರಿಗೆ ಬದಲಿ ವ್ಯವಸ್ಥೆ ಕಲ್ಪಿಸಿಕೊಡಬೇಕು. ಅಗಲ ಕಿರಿದಾದ ರಸ್ತೆಯಲ್ಲಿ ಮಧ್ಯಾಹ್ನ ಬಳಿಕ ಸಂಚರಿಸುವುದೇ ಕಷ್ಟಸಾಧ್ಯವಾಗಿದೆ ಎಂದು ಹೇಳಿದರು.

ಬಳಕೆದಾರರ ವೇದಿಕೆ ಅಧ್ಯಕ್ಷ ರಾಮ್​ ಭಟ್​ ಮಾತನಾಡಿ, ನಗರದಲ್ಲಿ ಅನೇಕ ಶ್ರೀಮಂತರು 15 ವರ್ಷಗಳಿಂದ ತೆರಿಕೆ ಕಟ್ಟುತ್ತಿಲ್ಲ. ಅವರ ವಿರುದ್ಧ ನಗರಸಭೆ ಯಾವುದೇ ಕ್ರಮ ವಹಿಸುತ್ತಿಲ್ಲ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಮಾಹಿತಿ ಕೇಳಿದರೆ ಅಧಿಕಾರಿಗಳು ದಾಖಲೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ಮಹಂತೇಶ್​ ಹಂಗರಗಿ, ತೆರಿಗೆ ಕಟ್ಟದೇ ಇರುವವರ ಮಾಹಿತಿ ಸಂಗ್ರಹಿಸಲಾಗಿದ್ದು, ಪ್ರತಿಯೊಬ್ಬರಿಗೂ ನೋಟಿಸ್​ ನೀಡಲಾಗಿದೆ. ಕೆಲವೆಡೆ ಕಟ್ಟಡದ ಅಳತೆ ಕಡಿಮೆ ತೋರಿಸಿ ತೆರಿಗೆ ವಂಚಿಸುತ್ತಿದ್ದಾರೆ. ಈ ಬಗ್ಗೆ ಬಿಲ್​ ಕಲೆಕ್ಟರ್​ಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ಅಳತೆ ಮಾಡಿದ್ದಾರೆ. 6 ವರ್ಷದ ದಂಡಮೊತ್ತವನ್ನು ಒಟ್ಟಿಗೆ ಪಾವತಿಸುವಂತೆ ಸೂಚನೆ ನೀಡಲಾಗಿದೆ ಎಂದರು. ಲೆಕ್ಕಾಧಿಕ್ಷಕ ಚಂದ್ರರಾಮ ದೇವಾಡಿಗ ಉಪಸ್ಥಿತರಿದ್ದರು.